ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರ್ಜಾ: ದಟ್ಟ ಅಭಿವ್ಯಕ್ತಿಯ ಕೈಗನ್ನಡಿ

20 ಕಲಾವಿದರ 80 ಕಲಾಕೃತಿಗಳ ಪ್ರದರ್ಶನ 
Last Updated 21 ನವೆಂಬರ್ 2018, 20:00 IST
ಅಕ್ಷರ ಗಾತ್ರ

ವಿವಿಧ ಭಾಗಗಳ ಹಿರಿಯ ಅನುಭವಿ ಕಲಾವಿದರು ಹಾಗೂ ಚಿತ್ರಕಲಾ ಜಗತ್ತಿನಲ್ಲಿಇದೀಗ ಭರವಸೆ ಮೂಡಿಸುತ್ತಿರುವ ಉದಯೋನ್ಮುಖ ಕಲಾವಿದರ ಅಮೂಲ್ಯ ಕಲಾಕೃತಿಗಳ ಪ್ರದರ್ಶನ ‘ಊರ್ಜಾ’ ನಗರದ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ಇದೇ 23ರಿಂದ 28ರವರೆಗೆ ನಡೆಯಲಿದೆ.

‘ಊರ್ಜಾ‌’. ಸಂಸ್ಕೃತದಲ್ಲಿ ಇದಕ್ಕೆ ಅಂತಃಶಕ್ತಿ ಎಂಬ ಅರ್ಥವಿದೆ. ಹೆಸರೇ ಸೂಚಿಸುವಂತೆ ಒಂದು ಶಕ್ತಿಯಿಂದ ಇನ್ನೊಂದು ಶಕ್ತಿಯನ್ನು ತಲುಪುವ, ಪ್ರೇರೇಪಿಸುವ ಮತ್ತು ಏಕೀಕರಿಸುವ ಜೀವ ಶಕ್ತಿಯಾಗಿ ‘ಊರ್ಜಾ’ ಕಲಾಪ್ರದರ್ಶನ ಗಮನ ಸೆಳೆಯಲಿದೆ. ಕಲಾವಿದಎಂ.ಜಿ. ದೊಡ್ಡಮನಿಅವರ ಮುಂದಾಳತ್ವದಲ್ಲಿ ನಡೆಯಲಿರುವ ಈ ಐದು ದಿನಗಳ ಕಲಾಪ್ರದರ್ಶನ ಬೆಂಗಳೂರಿನ ಉದಯೋನ್ಮುಖ ಕಲಾವಿದರಿಗೆ ಹಾಗೂ ಕಲಾಪ್ರಿಯರಿಗೊಂದು ಅಪರೂಪದ ಅವಕಾಶ.

‘ಕಲೆಗಾಗಿ ಕಲೆ ಎನ್ನುವ ಮಾತು ನಿಜ. ಆದರೆ ‘ಸಮಾಜಕ್ಕಾಗಿ ಕಲೆ’ ನಮ್ಮ ಆಶಯ. ಸಾಮಾಜಿಕ ಕಳಕಳಿ ಇಟ್ಟುಕೊಂಡು ಏರ್ಪಡಿಸಿರುವ ಈ ಪ್ರದರ್ಶನದಿಂದ ಬರುವ ಲಾಭದಲ್ಲಿ ಒಂದು ಭಾಗವನ್ನು ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ’ಎನ್ನುವುದು ಆಯೋಜಕರಾದ ಎಂ.ಜಿ. ದೊಡ್ಡಮನಿ ನೀಡುವ ವಿವರ. ಸಾಮಾಜಿಕ ಕಾರ್ಯಕರ್ತೆ ಗೀತಾ ಮೆನನ್ ಅವರ ಸ್ತ್ರೀ ಜಾಗೃತಿ ಸಮಿತಿಗೆ ಅವರು ಧನಸಹಾಯ ಮಾಡಲಿದ್ದಾರೆ.

ಬೆಂಗಳೂರು, ತುಮಕೂರು, ಮುಂಬೈ, ಹೈದರಾಬಾದ್, ಚೆನ್ನೈ, ಕೊಲ್ಕತ್ತ ಸೇರಿದಂತೆವಿವಿಧ ಭಾಗಗಳ 20ಹಿರಿಯ-ಕಿರಿಯ ಕಲಾವಿದರ 80 ಬಹುಮುಖಿ ಹಾಗೂ ವೈವಿಧ್ಯಮಯ ಕಲಾಕೃತಿಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲಾವಿದರಾದ ಕೆ.ಟಿ. ಶಿವಪ್ರಸಾದ್, ಸಚಿನ್ ಜಲ್ತಾರೆ, ಎಸ್.ಜಿ.ವಾಸುದೇವ್, ಗುರುದಾಸ್ ಶೆಣೈ, ಬಾಸುಕಿ ದಾಸ್, ಜೆಎಂಎಸ್ ಮಣಿ, ಯೋಜಕರಾದ ಎಂ.ಜಿ. ದೊಡ್ಡಮನಿ ಸೇರಿದಂತೆ ಅನೇಕ ಅನುಭವಿ ಕಲಾವಿದರಕಲಾಕೃತಿಗಳೊಂದಿಗೆ, ಯುವ ಉದಯೋನ್ಮುಖ ಕಲಾವಿದರಾದಆಶು ಗುಪ್ತಾ, ಬಬಿತಾ ಸಕ್ಸೇನಾ, ಜ್ಯೋತಿ ಗುಪ್ತಾ, ಕಾಂತಿ ವಿ, ನೀಲಮ್ ಮಲ್ಹೋತ್ರಾ, ರಿತು ಚಾವ್ಲಾ ಮಾಥುರ್, ರೋಶ್ ರವೀಂದ್ರನ್, ವನಜಾ ಬಾಲ್, ವೆಂಕಟರಾಮನ್ ಆರ್,ನಿವೇದಿತಾ ಗೌಡ ಅವರ ಆಧುನಿಕ ಕಲಾಕೃತಿಗಳ ಸೌಂದರ್ಯವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.

ಜೆಎಂಎಸ್ ಮಣಿ ಅವರ ಬಾದಾಮಿ ಸರಣಿಗಳು, ಎಂ.ಜಿ. ದೊಡ್ಡಮನಿ ಅವರ ಸಾಂಕೇತಿಕ ವರ್ಣಚಿತ್ರಗಳು; ಎಸ್.ಜಿ. ವಾಸುದೇವ ಅವರ ಸೃಜನಶೀಲ ಅಭಿವ್ಯಕ್ತಿಗಳು... ಹೀಗೆ ಪ್ರತಿಯೊಬ್ಬ ಕಲಾವಿದನವಿಶಿಷ್ಟವಾದ ಮತ್ತು ವಿವಿಧ ದೃಷ್ಟಿಕೋನಗಳನ್ನು ಸಾಂಕೇತಿಸುವ ಅನನ್ಯ ಕಲಾಕೃತಿಗಳು ಪ್ರದರ್ಶನದಲ್ಲಿ ಗಮನ ಸೆಳೆಯಲಿವೆ.

23ರಂದು ಸಂಜೆ 7ಕ್ಕೆ ಪ್ರಿಯಾ ಚೆಟ್ಟಿ, ಕೆ.ಎಸ್. ಶಂಕರ್, ವಸಂತಾ ವೈಕುಂಠ, ಗೀತಾ ಮೆನನ್‌, ಸೋಮನಾಥ್‌ ಮುಖರ್ಜಿ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಅಂದುಆಯ್ದ ಕೆಲವೇ ಅತಿಥಿಗಳಿಗೆ, ಕಲಾವಿದರಿಗೆ ಅವಕಾಶವಿರುತ್ತದೆ. 24ರಿಂದ ಬೆಳಿಗ್ಗೆ 11ರಿಂದ ರಾತ್ರಿ 8ರವರೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.

ಕಲೆಯೊಂದಿಗೆ ಸಾಮಾಜಿಕ ಕಳಕಳಿಯೂ ಬೆರೆತರೆ ಆ ಕಲೆಯೆ ಬೆಲೆ ಹೆಚ್ಚುತ್ತದೆ. ಇದೇ 23ರಿಂದ ಆರಂಭವಾಗಲಿರುವ ಐದು ದಿನಗಳ ‘ಊರ್ಜಾ’ ಕಲಾಕೃತಿಗಳ ಪ್ರದರ್ಶನದಿಂದ ಬಂದ ಲಾಭದ ಒಂದು ಭಾಗವನ್ನು ಸ್ತ್ರೀ ಜಾಗೃತಿ ಸಮಿತಿಗೆ ದೇಣಿಗೆಯಾಗಿ ನೀಡುತ್ತಿದೆ ತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT