ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ರೂಪಾಂತರ: ಛಾಯಾಚಿತ್ರ ಪ್ರದರ್ಶನ

Last Updated 4 ಮಾರ್ಚ್ 2020, 12:35 IST
ಅಕ್ಷರ ಗಾತ್ರ

ಆರ್ಟ್ ಫ್ಲೂಟ್ ಸಹಯೋಗದೊಂದಿಗೆ ‘ಬೆಂಗಳೂರು ಟು ಬೆಂಗಳೂರು: ಅರ್ಬನ್‌ ಲೆನ್ಸ್ ಥ್ರೋ ಇಯರ್ಸ್' ಛಾಯಾಚಿತ್ರ ಪ್ರದರ್ಶನ ವಿ.ಆರ್‌ ಮಾಲ್‌ ವೈಟ್‌ಫೀಲ್ಡ್‌ನಲ್ಲಿ ಆಯೋಜನೆಗೊಂಡಿದೆ. ಮಾರ್ಚ್‌ 6ರವರೆಗೆ ಈ ಪ್ರದರ್ಶನ ನಡೆಯಲಿದೆ.

ಈ ಛಾಯಾಚಿತ್ರ ಪ್ರದರ್ಶನದಲ್ಲಿ ಹಳೆಯ ಬೆಂಗಳೂರು ಮತ್ತು ರೂಪಾಂತರಗೊಂಡ ಹೊಸ ಬೆಂಗಳೂರಿನ ಚಿತ್ರಗಳು ಅನಾವರಣಗೊಂಡಿವೆ. ನಗರದ ಪ್ರಸ್ತುತ ಬೆಳವಣಿಗೆ ಹಾಗೂ ಶತಕದ ಹಿಂದೆ ಇದ್ದ ನಗರಕ್ಕೂ ಇರುವ ವ್ಯತ್ಯಾಸವನ್ನು ಇಲ್ಲಿ ತೋರಿಸಲಾಗಿದೆ.

200ಕ್ಕೂ ಹೆಚ್ಚು ಛಾಯಾಚಿತ್ರಗಳನ್ನು ಸೆರೆ ಹಿಡಿದ ಲ್ಯಾನ್ಸ್ ಕಾರ್ಪೋರಲ್ ಅವರ ಸಂಗ್ರಹದಿಂದ ಈ ಆಯ್ದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಲ್ಯಾನ್ಸ್ ಕಾರ್ಪೋರಲ್ 1916 ಮತ್ತು 1917ರಲ್ಲಿ ಸೇನಾ ತರಬೇತಿ ಪಡೆಯಲು ಬೆಂಗಳೂರಿಗೆ ಬಂದರು. ಆ ಸಮಯದಲ್ಲಿ ಡ್ಯೂ ಮತ್ತು ಅವನ ಇಬ್ಬರು ಸ್ನೇಹಿತರು ನಗರದ ಸುತ್ತಲೂ ಸೈಕ್ಲಿಂಗ್ ಮಾಡುತ್ತಾ ದೃಶ್ಯಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದರು.

ಲಂಡನ್‌ನಲ್ಲಿ ಲ್ಯಾನ್ಸ್ ಕಾರ್ಪೋರಲ್ ಅವರ ಮನೆ ತೆರವುಗೊಳಿಸುವ ಸಂದರ್ಭದಲ್ಲಿ ಈ ಫೋಟೊಗಳು ಸಿಕ್ಕಿವೆ. ಈಗ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಕಿರಣ್‌ ನಟರಾಜನ್‌ ಈಗ ಇವುಗಳನ್ನು ಪಡೆದು ಪ್ರದರ್ಶನಕ್ಕೆ ಇಟ್ಟಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT