ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭಾವ’ ಸಂಗೀತ, ನಾಟಕ, ನೃತ್ಯೋತ್ಸವ

Last Updated 16 ಮೇ 2019, 19:47 IST
ಅಕ್ಷರ ಗಾತ್ರ

ಆನಂದಿ ಆರ್ಟ್ಸ್ ಫೌಂಡೇಷನ್ ಮೇ 17,18 ಮತ್ತು 19ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ‘ಭಾವ’ ಶೀರ್ಷಿಕೆಯಡಿ ಸಂಗೀತ, ನೃತ್ಯ ಮತ್ತು ನಾಟಕೋತ್ಸವವನ್ನು ಹಮ್ಮಿಕೊಂಡಿದೆ.

ಕಳೆದು ಹೋಗುತ್ತಿರುವ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ‘ಭಾವ’ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎನ್ನುತ್ತಾರೆ ಆನಂದಿ ಆರ್ಟ್ಸ್‌ ಫೌಂಡೇಷನ್‌ನ ವಂದನಾ ಸುಪ್ರಿಯಾ ಕಾಸರವಳ್ಳಿ ಮತ್ತು ಅಪೂರ್ವ ಕಾಸರವಳ್ಳಿ.

‘ಭಾವ’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದರಿಂದ ಒಡಿಸ್ಸಿ ನೃತ್ಯ ಪ್ರದರ್ಶನ, ನಾಟಕ ಮತ್ತು ಸಂಗೀತ ಕಛೇರಿ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶಿಸಲಾಗುವುದು. ಆರು ವರ್ಷಗಳಿಂದ ಸಕ್ರಿಯವಾಗಿರುವ ಆನಂದಿ ಆರ್ಟ್ಸ್‌ ಫೌಂಡೇಷನ್ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಮತ್ತು ಸರ್ಕಾರಿ ಶಾಲೆಯ 150 ಹೆಣ್ಣುಮಕ್ಕಳಿಗೆ ಉಚಿತವಾಗಿ ನೃತ್ಯವನ್ನು ಕಲಿಸಿಕೊಡುತ್ತಿದೆ. ಮೇ 17ರಂದು ಸಂಜೆ 6ಕ್ಕೆ ಮಲೇಷ್ಯಾದ ಸೂತ್ರ ಫೌಂಡೇಷನ್‌ನ ದತುಕ್ ರಾಮ್ಲಿ ಇಬ್ರಾಹಿಂ ಮತ್ತು ಒಡಿಸ್ಸಾದ ರುದ್ರಾಕ್ಷ ಫೌಂಡೇಷನ್‌ನ ಬಿಚಿತ್ರಾನಂದ ಸ್ವೇನ್ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ ನಡೆಯಲಿದೆ. 18ರಂದು ಸಂಜೆ 6ಕ್ಕೆ ಪುದುಚೇರಿಯ ಆದಿಶಕ್ತಿ ಲ್ಯಾಬರೋಟರಿ ಫಾರ್ ಥಿಯೇಟರ್ ತಂಡ ‘ಬಲಿ’ ನಾಟಕ ಪ್ರದರ್ಶಿಸಲಿದೆ.

19ರಂದು ಸಂಜೆ 6ಕ್ಕೆ ಖ್ಯಾತ ಸಂಗೀತ ಕಲಾವಿದರಾದ ಪಂಡಿತ್ ಶಿವಕುಮಾರ್ ಶರ್ಮಾ ಮತ್ತು ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರನ್ನು ಗೌರವಿಸಲಾಗುವುದು. ನಂತರಪಂಡಿತ್ ಶಿವಕುಮಾರ್ ಶರ್ಮಾ, ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಉಮ್ಮಯಲಪುರಂ ಕೆ. ಶಿವರಾಮನ್, ಸ್ವೀಫೆನ್ ದೆವಸ್ಸಿ, ಶ್ರೀನಿವಾಸ, ಗಿರಿಧರ ಉಡುಪ ಮತ್ತು ಎ. ಬಾಲಸುಬ್ರಮಣಿಯಂ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.ಇದೇ ಸಂದರ್ಭದಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸಿದ ಹತ್ತು ಮಂದಿಗೆ ಸನ್ಮಾನ ಕಾರ್ಯಕ್ರಮವೂ ನಡೆಯಲಿದೆ.

ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಮಯ ಪ್ರತಿದಿನ ಸಂಜೆ 6. ಉಚಿತ ಪ್ರವೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT