ಇಂದಿನಿಂದ ಶುರುವಾಗಲಿದೆ ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವ

7

ಇಂದಿನಿಂದ ಶುರುವಾಗಲಿದೆ ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವ

Published:
Updated:

ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವಕ್ಕೆ ಈಗ 11ರ ಹರೆಯ. ಈ ಮಹೋತ್ಸವ ದೇಶ–ವಿದೇಶದ ಮುಂಚೂಣಿ ಕಲಾವಿದರ ಪ್ರಸ್ತುತಿಗಳಿಗೂ, ಅಪರೂಪದ ಪ್ರೇಕ್ಷಕರ ಹಾಜರಾತಿಗೂ ವೇದಿಕೆಯಾಗುತ್ತಿದೆ. ಈ ಬಾರಿಯೂ ಸಂಗೀತ ಮತ್ತು ನೃತ್ಯ ಕ್ಷೇತ್ರದ ದಿಗ್ಗಜ ಕಲಾವಿದರು ಕಾರ್ಯಕ್ರಮ ನೀಡಲಿದ್ದಾರೆ.

ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವ ವೀಣಾ ವಿದುಷಿ ಸುಮಾ ಸುಧೀಂದ್ರ ಮತ್ತು ನೃತ್ಯ ಗುರು ವೀಣಾ ಮೂರ್ತಿ ವಿಜಯ್ ಅವರ ಕನಸಿನ ಕೂಸು. ಇಬ್ಬರೂ ಸೇರಿ ಸ್ಥಾ‍ಪಿಸಿದ ‘ಏಮ್‌’ ಸಂಸ್ಥೆಯ ಮೂಲಕ ಮಹೋತ್ಸವವನ್ನು ಪ್ರತಿ ವರ್ಷ ಅವರು ಆಯೋಜಿಸುತ್ತಾರೆ. ಬೆಂಗಳೂರಿಗೆ ದೇಶ ವಿದೇಶದ ಹೆಸರಾಂತ ಕಲಾವಿದರು ಬಂದು ಕಾರ್ಯಕ್ರಮ ನೀಡುವುದು ಹೊಸದೇನಲ್ಲ. ಹಾಗಿರುವಾಗ ಇಂತಹುದೊಂದು ಪ್ರತ್ಯೇಕ ಉತ್ಸವದ ಅಗತ್ಯವೇನಿದೆ ಎಂದು ಕೇಳಿದರೆ ಸುಮಾ ಸುಧೀಂದ್ರ ಹೇಳುವುದು ಹೀಗೆ–

‘ನಾನು ಎಷ್ಟೋ ದೇಶಗಳಲ್ಲಿ ಸಂಗೀತ– ನೃತ್ಯದ ಸಮಾವೇಶಗಳಲ್ಲಿ ಕಾರ್ಯಕ್ರಮ ನೀಡಿದ್ದೇನೆ. ಅಲ್ಲೆಲ್ಲ ಅಂತಹ ಕಾರ್ಯಕ್ರಮಗಳಿಗೆ ಸಾವಿರಾರು ಜನ ಸೇರುವುದನ್ನು ಕಂಡು ನಮ್ಮ ಬೆಂಗಳೂರಿ ನಲ್ಲಿಯೂ ಇಂತಹ ಸಮಾವೇಶಗಳನ್ನು ಸಂಘಟಿಸಬೇಕು ಎಂದು ಅನಿಸುತ್ತಿತ್ತು. ಹಾಗಾಗಿ ಹೇಗೋ ಎಂತೋ ಎಂಬ ಆತಂಕದಲ್ಲೇ 10 ವರ್ಷಗಳ ಹಿಂದೆ ನಾನೂ, ವೀಣಾ ಸೇರಿ ಬಿಐ‌ಎಎಫ್‌ ಶುರು ಮಾಡಿಬಿಟ್ಟೆವು. ಈಗ ಇದು ಜಗತ್ತಿನ ಅತ್ಯುತ್ತಮ ಸಂಗೀತ–ನೃತ್ಯ ಮಹೋತ್ಸವಗಳ ಪಟ್ಟಿಯಲ್ಲಿ ಸೇರಿದೆ’.

‘ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವ’ ಜನರ ಹಬ್ಬವಾಗಬೇಕು ಎಂಬುದು ನಮ್ಮ ಪರಿಕಲ್ಪನೆ ಮತ್ತು ಗುರಿ. ಈಗ 11ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರೆ ಇದೂ ಜನರ ಹಬ್ಬವಾಗಿ ಬೆಳೆಯಬಲ್ಲದು. ಐದು ವರ್ಷ ಉಚಿತವಾಗಿ ನಡೆಸಿ ಆರನೇ ವರ್ಷದಿಂದ ಪ್ರವೇಶದರ ನಿಗದಿ ಮಾಡೋಣ ಎಂಬುದು ನಮ್ಮ ಚಿಂತನೆಯಾಗಿತ್ತು. ಆದರೆ 11ನೇ ವರ್ಷವೂ ಉಚಿತವಾಗಿಯೇ ನಡೆಸುತ್ತಿದ್ದೇವೆ. ಆದರೆ ಇಂತಹ ಕಾರ್ಯಕ್ರಮಗಳು, ಕಲಾವಿದರ ಸಂಭಾವನೆ, ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಹೀಗೆ ಎಲ್ಲವೂ ಸೇರಿದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಹಾಗೂ ಇತರ ದೇಣಿಗೆಗಳೂ ಸಾಲುತ್ತಿಲ್ಲ. ಹಾಗಾಗಿ ಮುಂದಿನ ವರ್ಷದಿಂದ ಅನಿವಾರ್ಯವಾಗಿ ಪ್ರವೇಶ ದರ ನಿಗದಿ ಮಾಡಲೇಬೇಕಾಗುತ್ತದೆ’ ಎಂದು ಸುಮಾ ವಿವರಿಸುತ್ತಾರೆ.‌

ಕಲಾ ಮಹೋತ್ಸವ ನಡೆಯುವ ಸ್ಥಳ– ವೈಯ್ಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನ.

ಅಕ್ಟೋಬರ್‌ 5 ರಿಂದ 7

ಇಮೇಲ್‌: biaf.media@gmail.com , ವೆಬ್‌ಸೈಟ್‌: www.biaf.co.in

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !