ಶಿವಬಾಲಯೋಗಿ ಮಹಾರಾಜರ ತಪಸ್‌ ಸಿದ್ಧಿಯ ವಾರ್ಷಿಕ ದಿನಾಚರಣೆ

7

ಶಿವಬಾಲಯೋಗಿ ಮಹಾರಾಜರ ತಪಸ್‌ ಸಿದ್ಧಿಯ ವಾರ್ಷಿಕ ದಿನಾಚರಣೆ

Published:
Updated:
Deccan Herald

ಆಂಧ್ರಪ್ರದೇಶದ ಆದಿವಾರಪುಪೇಟೆಯಲ್ಲಿ 1935ರ ಜನವರಿ 24ರಂದು ಜನಿಸಿದ ಸತ್ಯರಾಜು ಎಂಬ ಬಾಲಕ 12 ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ, ಸಿದ್ಧಿಯನ್ನು ಪಡೆದು ಮುಂದೆ ಶಿವಬಾಲಯೋಗಿ ಮಹಾರಾಜ್‌ ಎಂದು ಜನಪ್ರಿಯರಾದವರು. ತಮ್ಮ ತಪಸ್ಸಿನ ಸಿದ್ಧಿಯನ್ನು ಲೋಕಕಲ್ಯಾಣಕ್ಕಾಗಿ ಬಳಸಿ, ಭಕ್ತರ ಸೇವೆ ಮಾಡುವುದಕ್ಕಾಗಿ ಪಾಶ್ಚಾತ್ಯ ದೇಶಗಳಲ್ಲಿ ಸಂಚರಿಸಿದ ಯೋಗಿ ಇವರು.

ಸ್ವಾಮೀಜಿಯ ಜೀವನ ಚರಿತ್ರೆ ಹಾಗೂ ಬೋಧನೆಗಳ ಬಗ್ಗೆ ಇಂಗ್ಲಿಷ್‌, ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ಹಲವು ಕೃತಿಗಳು ಲಭ್ಯವಿವೆ. ಸ್ವಾಮೀಜಿಯವರ 12 ವರ್ಷಗಳ ತಪಸ್‌ ಸಿದ್ಧಿಯ 57ನೇ  ವಾರ್ಷಿಕ ದಿನಾಚರಣೆಯನ್ನು ಮಂಗಳವಾರ ಶ್ರೀ ಶಿವಬಾಲಯೋಗಿ ಮಹಾರಾಜ್‌ ಟ್ರಸ್ಟ್‌ ಆಚರಿಸುತ್ತಿದೆ. ಇದಕ್ಕಾಗಿ ಸ್ವಾಮೀಜಿಯ ಜೀವನ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಪರಿಚಯ ಮಾಡಿಕೊಡುವ ಉದ್ದೇಶದಿಂದ ಸ್ವಾಮೀಜಿಯವರೇ ಆರಂಭಿಸಿದ ‘ಆಧ್ಯಾತ್ಮಿಕ ಮಿಶನ್‌’
ಸಣ್ಣ ಕೃತಿಯೊಂದನ್ನು ಹೊರತಂದಿದೆ.

ಇದರಲ್ಲಿ ಸ್ವಾಮೀಜಿಯ ಹುಟ್ಟು, ಬಾಲ್ಯ ಜೀವನ, ಆಧ್ಯಾತ್ಮಿಕ ಜ್ಞಾನೋದಯ, 12 ವರ್ಷಗಳ ಕಠಿಣ ತಪಸ್ಸು ಮಾಡಿದ ಸತ್ಯರಾಜು ಎಂಬ ಬಾಲಕ ಶಿವಬಾಲಯೋಗಿ ಮಹಾರಾಜ್‌ ಆಗಿ ಪರಿವರ್ತನೆಯಾಗುವ ಸಂಗತಿ ಈ
ಕೃತಿಯಲ್ಲಿದೆ.

ಶಿವಬಾಲಯೋಗಿ ಮಹಾರಾಜ್‌ 1963ರಲ್ಲಿ ಬೆಂಗಳೂರಿಗೆ ಬಂದು ಆಶ್ರಮ ಸ್ಥಾಪಿಸಿದರು. ಅದೇ ಅವರ ಕೇಂದ್ರ ಕಚೇರಿ ಕೂಡ. ಅಲ್ಲದೆ  ಶ್ರೀಲಂಕಾ, ಇಂಗ್ಲೆಂಡ್‌, ಇಟಲಿ ಹಾಗೂ ಅಮೆರಿಕದಲ್ಲೂ ಅವರು ಜನರನ್ನು ಆಧ್ಯಾತ್ಮ ಮಾರ್ಗದಡೆಗೆ ಮರಳುವಂತೆ ಪ್ರೇರೇಪಿಸಿದ್ದರು.

ಶಿವಬಾಲಯೋಗಿ ಮಹಾರಾಜರವರ 12 ವರ್ಷಗಳ ತಪಸ್‌ ಸಿದ್ಧಿಯ 57ನೇ ವಾರ್ಷಿಕ ದಿನಾಚರಣೆ: ಆಶೀರ್ವಚನ– ಶಿವರುದ್ರ ಬಾಲಯೋಗಿ ಸ್ವಾಮೀಜಿ. ಬೆಳಿಗ್ಗೆ 8ಕ್ಕೆ ಸಮಾಧಿಪೂಜೆ, 9ಕ್ಕೆ ಹೋಮ, 11.30ಕ್ಕೆ ಪ್ರವಚನ, ಸತ್ಸಂಗ, ಮಧ್ಯಾಹ್ನ 1ಕ್ಕೆ ಆಶೀರ್ವಚನ, 3.30ಕ್ಕೆ ಭಜನೆ, 4.30ಕ್ಕೆ ಸಾಮೂಹಿಕ ಧ್ಯಾನ, ಸಂಜೆ 6ಕ್ಕೆ ಭಜನೆ, ರಾತ್ರಿ 7ಕ್ಕೆ ಕಲ್ಯಾಣೋತ್ಸವ. ಸ್ಥಳ– ಶ್ರೀ ಬಾಲಯೋಗಿ ಮಹಾರಾಜ್‌ ಟ್ರಸ್ಟ್‌, ಭಾರತೀಯ ಸಂಸ್ಕೃತಿಯ ಅಂತರರಾಷ್ಟ್ರೀಯ ಕೇಂದ್ರ, ನಂ 1/ಎ, 3ನೇ ಅಡ್ಡರಸ್ತೆ, 6ನೇ ಮುಖ್ಯರಸ್ತೆ, 3ನೇ ಹಂತ, ಜೆ.ಪಿ ನಗರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !