ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌ ಸಂದೇಶ: ಎಲ್ಲರೂ ಪ್ರೀತಿ, ಅನ್ಯೂನ್ಯತೆ, ಸ್ನೇಹದಿಂದ ಜೀವಿಸುವಂತಾಗಲಿ

Last Updated 23 ಡಿಸೆಂಬರ್ 2018, 19:50 IST
ಅಕ್ಷರ ಗಾತ್ರ

ಕ್ರಿಸ್‌ಮಸ್‌ ಜಗತ್ತಿನಾದ್ಯಂತ ಆಚರಿಸುವ ಹಬ್ಬ. ದೇವ ಮಾನವನ ಸಂಧಾನಕ್ಕಾಗಿ ದೇವರು ತಾನೇ ಭೂಮಿಗೆ ಇಳಿದು ಬಂದ ಸಂತಸದ ಸುದಿನ. ಪಾಪ ಕಾರ್ಯಗಳ ನಿಮಿತ್ತ ಮನುಷ್ಯನು ದೇವರ ಸಂಬಂಧವನ್ನು ಕಳೆದುಕೊಳ್ಳುತ್ತಾ ಸಾಗಿದ್ದ. ಆಗ ದೇವರು ಪುನಃ ಮಾನವನನ್ನು, ಅವನ ಪಾಪವನ್ನು ಕ್ಷಮಿಸಲು ಮಾನವನೊಂದಿಗೆ ಸಮಾಧಾನದ ಒಪ್ಪಂದಕ್ಕಾಗಿ ತಾನೇ ಒಬ್ಬ ನರ ಮನುಷ್ಯನಂತೆ ಪರಲೋಕಕ್ಕೆ ಬಂದ ದಿನವೇ ಕ್ರಿಸ್‌ಮಸ್‌.

ಅದು ಮಾನವರ ಮಧ್ಯೆ ವಾಸಿಸಲು, ಜನರ ಪಾಪಗಳನ್ನು ಕ್ಷಮಿಸಲು, ಉದ್ದಾರ ಮಾಡಲು ಸಕಲ ವಿಧವಾಗಿ ಸಂತೈಸಲು ಬಂದಂತಹ ದಿನ.

ಲೋಕಕ್ಕೆ ಕಂದನಾಗಿ ಬಂದ ಏಸು ಎಲ್ಲರನ್ನೂ ತನ್ನವರಂತೆ ಪ್ರೀತಿಸಿದನು. ಅನೇಕರನ್ನು ಗುಣಪಡಿಸಿದನು. ಅವರ ಅಗತ್ಯಗಳನ್ನು ಪೂರೈಸಿದನು. ವಿವಿಧ ರೀತಿಯಲ್ಲಿ ಶೋಷಣೆಗೆ ಗುರಿಯಾದ ಜನರೊಂದಿಗೆ ಸಹ ಜೀವನ ಮಾಡಿದನು. ಏಸುವಿನ ಬೋಧನೆಯು ಅದ್ವಿತೀಯವಾದ ಹಾಗೂ ಕ್ರಾಂತಿಕಾರಿ ಸಂದೇಶವಾಗಿತ್ತು.

‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು, ನಿನ್ನ ವೈರಿಗಳನ್ನೂ ಪ್ರೀತಿಸು, ಯಾರಾದರೂ ಒಂದು ಕೆನ್ನೆಗೆ ಹೊಡೆದರೆ ಅವರಿಗೆ ಮತ್ತೊಂದು ಕೆನ್ನೆ ತೋರಿಸು, ನಿನ್ನಲ್ಲಿ ಎರಡು ಅಂಗಿಗಳಿದ್ದರೆ ಒಂದು ಅಂಗಿಯನ್ನು ಮತ್ತೊಬ್ಬರಿಗೆ ಕೊಡು, ನಿನ್ನ ವೈರಿ ಹಸಿದಿದ್ದರೆ ಅವನಿಗೆ ಅನ್ನವನ್ನು ಕೊಡು, ಅಂಥವರಿಗೆ ಏನನ್ನು ಮಾಡಿದರೂ ಅದು ನನಗೆ ಮಾಡಿದ ಹಾಗೆ’ ಎಂದು ಅತ್ಯಂತ ಅತ್ಯುತ್ತಮ ಸಂದೇಶವನ್ನು ದೇವಮಾನವ ಏಸುಕ್ರಿಸ್ತ ನೀಡಿರುವ.

ಇದೇ 25ರಂದು ಕ್ರಿಸ್ತ ಜಯಂತಿ ಆಚರಿಸುತ್ತಿದ್ದೇವೆ. ಅಂದು ವಿಶೇಷ ಆರಾಧನೆಗಳ ಕಾರ್ಯಕ್ರಮಗಳನ್ನು ನಡೆಸುತ್ತೇವೆ. ಮನೆ ಮನೆಯಲ್ಲಿ ಕ್ರಿಸ್ತ ಜಯಂತಿ ಸಂದೇಶ ಸಾರುತ್ತೇವೆ. ಬಡವರಿಗೆ, ವಿಧವೆಯರಿಗೆ, ವಿವಿಧ ರೀತಿಯಲ್ಲಿ ಹಿಂದುಳಿದಿರುವವರಿಗೆ ಉಡುಗೊರೆಗಳನ್ನು ನೀಡುತ್ತೇವೆ. ಆಸ್ಪತ್ರೆ, ಸೆರೆಮನೆಯಲ್ಲಿ ಇರುವವರಿಗೆ ಕ್ರಿಸ್ತನ ಪ್ರೀತಿಯನ್ನು ಹಂಚುತ್ತೇವೆ. ಅವರಿಗೆ ಉಡುಗೊರೆಗಳನ್ನು ನೀಡಿ ಕ್ರಿಸ್ತನ ಸಂದೇಶವನ್ನು ಪಾಲಿಸುತ್ತೇವೆ.

ಇತ್ತೀಚಿಗಿನ ಪ್ರಪಂಚದ ಆಗು ಹೋಗುಗಳು, ವಿದ್ಯಮಾನಗಳು, ದುರಂತಗಳು ಮುಂದೆ ಬರುವ ಅಪಾಯದ, ಪ್ರಕೃತಿಯ ಕೋಪದ ಮುನ್ಸೂಚನೆ. ಮಾನವ ಮಾನವರೊಳಗಿನ ವೈಷಮ್ಯ, ಸೇಡು, ವೈರತ್ವಗಳು ಮನುಕುಲಕ್ಕೆ ಮಾರಕ.

ಈ ದಿಸೆಯಲ್ಲಿ ಕ್ರಿಸ್ತನ ಜಯಂತಿಯ ಸಂತೋಷದ ಸಂದೇಶ, ‘ಭೂ ಲೋಕದಲ್ಲಿ ಮನುಷ್ಯರೊಳಗೆ ದೇವರು ಸಮಾಧಾನವನ್ನು ನೀಡಲಿ. ಎಲ್ಲರೂ ಪ್ರೀತಿ, ಅನ್ಯೂನ್ಯತೆ, ಸ್ನೇಹದಿಂದ ಜೀವಿಸುವಂತಾಗಲಿ ಎಂದು ಪ್ರಾರ್ಥಿಸೋಣ’. ಎಲ್ಲರಿಗೂ ಕ್ರಿಸ್ತ ಜಯಂತಿಯ ಶುಭಾಶಯಗಳು.

-ಡಾ. ಸಾಲೋಮನ್‌ ಥಾಮಸ್‌ ಸಭಾಪಾಲಕರು, ಹಡ್ಸನ್‌ ದೇವಾಲಯ, ಉಪಾಧ್ಯಕ್ಷರು, ಕರ್ನಾಟಕ ಮಧ್ಯ ಪ್ರಾಂತ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT