ಕಾಟೇಜ್ ಸಂಕ್ರಾಂತಿ ಉತ್ಸವ

7

ಕಾಟೇಜ್ ಸಂಕ್ರಾಂತಿ ಉತ್ಸವ

Published:
Updated:
Prajavani

ಕೇಂದ್ರದ ಜವಳಿ ಇಲಾಖೆಯ ಸ್ವಾಮ್ಯದ ಸೆಂಟ್ರಲ್ ಕಾಟೇಜ್ ಇಂಡಸ್ಟ್ರೀಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಸಿಸಿಐಸಿಐ)  ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದಲ್ಲಿ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು (ಕಾಟೇಜ್ ಸಂಕ್ರಾಂತಿ ಉತ್ಸವ) ಆಯೋಜಿಸಿದೆ.

ನಟಿ ಪೂಜಾ ಜಗದೀಶ್ ಮೇಳವನ್ನು ಶುಕ್ರವಾರ ಉದ್ಘಾಟಿಸಿದ್ದಾರೆ. ಉತ್ಸವ ಇದೇ 18ರವರೆಗೆ ಇರುತ್ತದೆ.

ದೇಶದ ವಿವಿಧ ಕಡೆಗಳಲ್ಲಿನ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಿಸಿರುವ 40ಕ್ಕೂ ಹೆಚ್ಚು ಕರಕುಶಲ ಕರ್ಮಿಗಳು ಮತ್ತು ಕಲಾವಿದರು ಈ ಉತ್ಸವದಲ್ಲಿ ಪಾಲ್ಗೊಂಡಿದ್ದಾರೆ.

ಪುರುಷರ ಮತ್ತು ಮಹಿಳೆಯರ ಉಡುಪುಗಳು, ಸೀರೆಗಳು, ಶಾಲ್‍ಗಳು, ಜವಳಿಗಳು, ವಿಸ್ತಾರವಾದ ಶ್ರೇಣಿಯ ಜೈಪುರ, ಗುಜರಾತ್‍ನ ಕೈಮಗ್ಗದ ಜವಳಿ ಮತ್ತು ಕಾಟನ್ ಸೀರೆಗಳು ಇಲ್ಲಿದ್ದು, ಲಖನೌ ಶಿಕನ್ ಕಸೂತಿ ಕುರ್ತಾಗಳು, ಸಿಲ್ಕ್ ಕುರ್ತಾಗಳು, ಜಾಕೆಟ್, ಸಿಲ್ಕ್‌ ಸ್ಕಾರ್ಫ್‌ಗಳು ಇಲ್ಲಿ ಲಭ್ಯವಿವೆ. ಗುಜರಾತ್‍ನ ಬಾಂಧನಿ ವರ್ಕ್, ಕೋಲ್ಕತ್ತಾದ ಟೇಬಲ್ ಲೆನಿನ್ ಮತ್ತು ಬೆಡ್‍ಸ್ಪ್ರೆಡ್‍ಗಳು, ಕಾಶ್ಮೀರಿ ಶಾಲುಗಳೇ ಅಲ್ಲದೇ ಆಭರಣಗಳು, ವರ್ಣ ಚಿತ್ರಗಳು, ಲೋಹದ ವಸ್ತುಗಳು, ಮರದ ಕೆತ್ತನೆಗಳು ಇಲ್ಲಿ ಪ್ರದರ್ಶಿಸಲಾಗಿದೆ.

ಸ್ಥಳ: ನಂ. 264/266, ಟಿ. ಮರಿಯಪ್ಪ ರಸ್ತೆ, ಶ್ರೀನಿವಾಸ ಕಲ್ಯಾಣ ಮಹಲ್, ಜಯನಗರದ ಎರಡನೇ ಬ್ಲಾಕ್‍, ಅಶೋಕ ಪಿಲ್ಲರ್ ಬಳಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !