'ಒಂದು ಪ್ರೀತಿಯ ಕಥೆ’ ಪ್ರದರ್ಶನ

7

'ಒಂದು ಪ್ರೀತಿಯ ಕಥೆ’ ಪ್ರದರ್ಶನ

Published:
Updated:
Prajavani

ಮರಾಠಿಯ ವಿಜಯ್‌ ತೆಂಡೂಲ್ಕರ್‌ ಅವರ ಮಿತ್ರಾಚಿ ಗೋಷ್ಟ್‌ ನಾಟಕವನ್ನು ವೆಂಕಟೇಶ್‌ ಪ್ರಸಾದ್‌ ಅವರು ಕನ್ನಡಕ್ಕೆ ಅನುವಾದ ಮಾಡಿ ನಿರ್ದೇಶನ ಕೂಡ ಮಾಡಿದ್ದಾರೆ. ಈ ನಾಟಕ ‘ಒಂದು ಪ್ರೀತಿಯ ಕಥೆ’ ನಗರದಲ್ಲಿ ಪ್ರದರ್ಶನಗೊಳ್ಳಲಿದೆ. 

ಇದೇ 23ರಂದು ಜೆ.ಪಿ.ನಗರದ ರಂಗಶಂಕರದಲ್ಲಿ ಸಂಜೆ 7.30ಕ್ಕೆ ಪ್ರದರ್ಶನ ನಡೆಯಲಿದೆ. 110 ನಿಮಿಷ ಹೊಂದಿದೆ.

ಮೈಸೂರಿನ ಎಂಜಿನಿಯರಿಂಗ್‌ ಕಾಲೇಜೊಂದರಲ್ಲಿ ನಡೆಯುವ ಕಥೆ ಇದಾಗಿದೆ. ಯುವಕ ಹಾಗೂ ಯುವತಿಯರಲ್ಲಿ ಮೂಡಬಹುದಾದ ಗೆಳೆತನದ ಹಲವು ಆಯಾಮಗಳನ್ನು ಇದು ಹೊಂದಿದೆ. ಪ್ರೀತಿ ಹಾಗೂ ಅಸೂಯೆ ಎರಡನ್ನೂ ತೋರಿಸುವ ಪ್ರಯತ್ನ ಇದೆ.

ನಾಯಕಿ ‘ಪ್ರೀತಿ’ ಯ ಗೆಳೆಯ ಅಜಯ್‌ನನ್ನು ಕೇಂದ್ರೀಕರಿಸಿ ಕಥೆ ನಿರೂಪಿಸಲ್ಪಡುತ್ತದೆ. ಇಬ್ಬರ ನಡುವಿನ ಗೆಳೆತನ, ಅದರ ಸಂಕೀರ್ಣತೆ, ನಾಗರಿಕ ಜಗತ್ತಿನಲ್ಲಿ ಇರಬಹುದಾದ ನೈತಿಕ ಚೌಕಟ್ಟು, ಕಟ್ಟುಪಾಡುಗಳನ್ನು ಎಳೆ ಎಳೆಯಾಗಿ ತೋರಿಸುವ ಪ್ರಯತ್ನ ಇದೆ. ಪೂರ್ವಾಗ್ರಹಗಳ ಆಚೆ ಇರಬಹುದಾದ ಒಂದು ಸಹಜ, ನವಿರಾದ ಪ್ರೀತಿಯ ಕಥೆಯ ಎಳೆಯನ್ನು ಹೊಂದಿದೆ. 

ಉಜ್ವಲರಾವ್‌ ಅವರ ಸಹನಿರ್ದೇಶನ ಈ ನಾಟಕಕ್ಕಿದೆ. ಎಚ್‌.ಕೆ.ದ್ವಾರಕನಾಥ್‌ ರಂಗಸಜ್ಜಿಕೆ ಹಾಗೂ ವಿನ್ಯಾಸ ರೂಪಿಸಿದ್ದಾರೆ. ಬೆಳಕು–ಚಂದ್ರು, ನೃತ್ಯ ಸಂಯೋಜನೆ–ಪ್ರವೀಣ್‌, ಸಂಗೀತ–ಸುಮೇರು ರಾವುತ್‌, ನಿರ್ಮಾಣ–ಅಮಿತ್‌ ರೆಡ್ಡಿ ಅವರದ್ದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !