ಏಕದಂತನ ಅನೇಕ ಅವತಾರ

7

ಏಕದಂತನ ಅನೇಕ ಅವತಾರ

Published:
Updated:
Deccan Herald

ಬೆ ನಕನ ಭಾವ ಭಕ್ತಿಯ ಅನಾವರಣಕ್ಕೆ ಇನ್ನೆರಡೇ ದಿನವಷ್ಟೇ ಬಾಕಿ. ಗಲ್ಲಿಗಲ್ಲಿಯಲ್ಲೂ ಗಣಪನ ಪ್ರತಿಷ್ಠಾಪನೆಗೆ ತಳಿರು ತೋರಣಗಳಿಂದ ಚಪ್ಪರಗಳು ಸಿಂಗಾರಗೊಳ್ಳುತ್ತಿವೆ. ಒಬ್ಬರಿಗಿಂತ ಒಬ್ಬರು ಭಿನ್ನವಾಗಿ ಹಾಗೂ ಹೆಚ್ಚು ವೈಭವದಿಂದ ವಿಘ್ನೇಶ್ವರನ ಆರಾಧನೆಗೆ ತೆರೆಮರೆಯಲ್ಲೇ ಪೈಪೋಟಿ ನಡೆಸುತ್ತಿದ್ದಾರೆ.

ಆದರೆ, ಇದೆಲ್ಲದಕ್ಕಿಂತ ಭಿನ್ನವೆಂಬಂತೆ ದೇಶದ ಮೂಲೆ ಮೂಲೆ ಸುತ್ತಾಡಿ, ಸಿದ್ದಿವಿನಾಯಕನ ವಿವಿಧ ಆಯಾಮಗಳನ್ನು ಕ್ಯಾಮೆರಾದಲ್ಲಿ ಬಂಧಿಸಿ ಅವುಗಳ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ ನಿವೃತ್ತ ಐಎಫ್‌ಎಸ್‌ ಅಧಿಕಾರಿ ಎಂ.ಲೋಕೇಶ್ವರ ರಾವ್. ಈ ಮೂಲಕ ಗಣೇಶ ಚತುರ್ಥಿಯನ್ನು ಭಿನ್ನವಾಗಿ ಆಚರಿಸಲು ಮುಂದಾಗಿದ್ದಾರೆ ಅವರು.

ಹವ್ಯಾಸಿ ಫೋಟೊಗ್ರಾಫರ್‌ ಸಹ ಆಗಿರುವ ಅವರು, ಕಣ್ಣಿಗೆ ಅಂದವಾಗಿ ಕಂಡದ್ದನ್ನು ಕ್ಯಾಮೆರಾದಲ್ಲಿ ಬಂಧಿಸುತ್ತಿದ್ದಾರೆ. ಚಿತ್ರಕಾರ ಸಹ ಆಗಿರುವ ಅವರು ಅಕ್ರೆಲಿಕ್ ಕಲಾ ಪ್ರಕಾರದ ಮೂಲಕ ಕುಂಚಲೋಕದಲ್ಲೂ ಮೋಡಿಮಾಡಿದ್ದಾರೆ. ಲೋಕೇಶ್ವರ ರಾವ್ ಅವರಿಗೆ ಗಣೇಶ ಅಂದರೆ ವಿಶೇಷ ಪ್ರೀತಿಯಂತೆ. ಅದರ ಪ್ರತಿರೂಪವಾಗಿ ದೇಶದ ಮೂಲೆ ಮೂಲೆಯ 30 ಗಣೇಶ ಮೂರ್ತಿಗಳ ಹಾಗೂ ಅವುಗಳ ತಯಾರಕರ ಬದುಕನ್ನು ಕಟ್ಟಿಕೊಡುವಂತಹ ಸುಂದರವಾದ ಚಿತ್ರಗಳ ಪ್ರದರ್ಶನ.

ನಾಗಾಲ್ಯಾಂಡ್‌ನ ಪ್ರಿನ್ಸಿಪಲ್ ಚೀಫ್ ಕನ್ಸರ್ವೇಟರ್ ಆಫ್ ಫಾರೆಸ್ಟ್ ಮತ್ತು ಫಾರೆಸ್ಟ್ ಫೋರ್ಸ್‌ನ ಹೆಡ್ ಆಗಿದ್ದ ಅವರಿಗೆ ಕ್ಯಾಮೆರಾ ಅಚ್ಚುಮೆಚ್ಚಿನ ಸಂಗಾತಿ. ಅವರು ಸಂಚರಿಸುವ ಬಹುತೇಕ ಪ್ರದೇಶಗಳಲ್ಲಿ ಕ್ಯಾಮೆರಾ ಅವರ ಸಂಗಾತಿಯಾಗಿರುತ್ತದೆಯಂತೆ.

ಮೂರ್ತಿಗಳ ತಯಾರಿಗೆ ಮಣ್ಣಿನ ಆಯ್ಕೆ, ಮಣ್ಣಿನ ಹದ ಮಾಡುವಿಕೆ, ಆಕಾರ ನೀಡುವಿಕೆ, ಬಣ್ಣ ಹಚ್ಚುವುದು, ಮೂರ್ತಿಗಳ ಮಾರಾಟ, ಗಣೇಶನ ಪ್ರತಿಷ್ಠಾಪನೆ, ಮೂರ್ತಿಯ ಆರಾಧನೆ, ವಿಸರ್ಜನೆ ಪೂರ್ವ ಮೆರವಣಿಗೆ, ವಿಸರ್ಜನೆ ಹಾಗೂ ಮೂರ್ತಿಗಳ ತಯಾರಕರ ಬದುಕು ಕಟ್ಟಿಕೊಡುವ ಚಿತ್ರಗಳನ್ನು ಗಣೇಶನ ಮೇಲಿನ ವಿಶೇಷ ಪ್ರೀತಿಗಾಗಿ 7–8 ವರ್ಷಗಳಿಂದ ಬೆಂಗಳೂರಿನ ನಾನಾ ಭಾಗಗಳು, ರಾಜ್ಯದ ಹಲವೆಡೆ, ಹೈದರಾಬಾದ್, ಮುಂಬೈ, ನಾಗಾಲ್ಯಾಂಡ್ ಸೇರಿದಂತೆ ಹಲೆವಡೆ ಸುತ್ತಾಡಿ ಸೆರೆಹಿಡಿದ್ದಾರೆ.

ಅವರು ಸೆರೆಹಿಡಿದ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನ. ಆಯಾ ಪ್ರದೇಶಗಳ ಗಣೇಶ ಆರಾಧನೆಯ ವೈಶಿಷ್ಟ್ಯತೆಯನ್ನು ಆ ಫೋಟೊಗಳು ಸಾರುತ್ತವೆ. ಅವುಗಳನ್ನು ನೋಡುತ್ತಿದ್ದರೆ ಗಣೇಶ ಆರಾಧನೆಯ ಬಹುಸಂಸ್ಕೃತಿಯನ್ನು ದರ್ಶನವಾಗುತ್ತದೆ. ಮೂರ್ತಿಗಳ ಸುಂದರವಾಗಿ ಆಕರ್ಷಕವಾಗಿ ರೂಪುಗೊಳ್ಳುವುದರ ಕಾಣದ ಕೈಗಳ ಜೀವನದ ಬಗ್ಗೆ ದರ್ಶನ ಮಾಡಿಸುತ್ತವೆ ಆ ಚಿತ್ರಗಳು.

‘ಮೂರ್ತಿಗಳನ್ನು ತಯಾರಕರು ಬೇಕಾಬಿಟ್ಟಿ ತಯಾರಿಸುವುದಿಲ್ಲ. ಅಗಾದ ಭಕ್ತಿಯನ್ನು ಮನದೊಳಗೆ ತುಂಬಿಕೊಂಡು ಶ್ರದ್ಧೆಯಿಂದ ಮೂರ್ತಿ ತಯಾರಿಸಲು ಮುಂದಾಗುತ್ತಾರೆ. ನಾನು ಭೇಟಿ ನೀಡಿದ ಹಲವು ಸ್ಥಳಗಳಲ್ಲಿ ಇದನ್ನು ಕಣ್ಣಾರೆ ಕಂಡಿದ್ದೇನೆ. ಒಂದು ಪ್ರದೇಶಕ್ಕಿಂತ ಮತ್ತೊಂದು ಪ್ರದೇಶದಲ್ಲಿ ಗಣೇಶನ ಆರಾಧನೆಯೂ ಭಿನ್ನತೆಯಿಂದ ಕೂಡಿರುತ್ತದೆ. ಅದನ್ನು ಕಣ್ತುಂಬಿಕೊಳ್ಳುವುದೇ ಪುಣ್ಯದ ಸಂಗತಿ’ ಎನ್ನುತ್ತಾರೆ ಲೋಕೇಶ್ವರ ರಾವ್.

‘ಯುವಕನಾಗಿದ್ದಾಗಿನಿಂದಲೂ ಫೋಟೊಗ್ರಫಿ ಹಾಗೂ ಚಿತ್ರಕಲೆ ಬಗ್ಗೆ ವಿಶೇಷ ಆಸಕ್ತಿ. ಐಎಫ್‌ಎಸ್ ಅಧಿಕಾರಿಯಾದ ಮೇಲೆ ಅವುಗಳಿಗೆ ಕೊಂಚ ಬ್ರೇಕ್ ಬಿತ್ತು. ನಿವೃತ್ತಿಯಾದ ಬಳಿಕ ಈಗ ಹಳೆಯ ಹವ್ಯಾಸವು ಮತ್ತೆ ಮುನ್ನೆಲೆಗೆ ಬಂದಿದೆ. ಜೊತೆಗೆ ವಿವಿಧ ಸ್ಟ್ಯಾಂಪ್‌ಗಳ ಸಂಗ್ರಹವನ್ನು ಮೈಗೂಡಿಸಿಕೊಂಡಿದ್ದೇನೆ. ಬೇರೆ ಪ್ರದೇಶಗಳ ಗಣೇಶ ಆಚರಣೆಯ ವೈಭವವನ್ನು ಬೆಂಗಳೂರಿಗರಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಿದ್ದೇನೆ’ ಎನ್ನುತ್ತಾರೆ ಅವರು.

ಪ್ರದರ್ಶನದ ವಿವರ

ಸ್ಥಳ: ಬೆಳಕು ಗ್ಯಾಲರಿ, ರಂಗೋಲಿ ಮೆಟ್ರೊ ಕಲಾ ಕೇಂದ್ರ, ಎಂ.ಜಿ.ರಸ್ತೆ

ಯಾವಾಗ: ಸೆಪ್ಟೆಂಬರ್ 11, 12, 13

ಸಮಯ: ಬೆಳಿಗ್ಗೆ 11 ರಿಂದ ಸಂಜೆ 7. ಉಚಿತ ಪ್ರವೇಶ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !