ಕಲಾಕೃತಿಗಳಲ್ಲಿ ಒಗ್ಗಟ್ಟಿನ ಸಂದೇಶ

7

ಕಲಾಕೃತಿಗಳಲ್ಲಿ ಒಗ್ಗಟ್ಟಿನ ಸಂದೇಶ

Published:
Updated:

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಅಧ್ಯಯನ ಮಾಡುತ್ತಿರುವ ಬಿ.ವಿ.ಎ. ಫೌಂಡೇಷನ್ ತರಗತಿಯ ಕಲಾಮೂಲದ ವಿದ್ಯಾರ್ಥಿಗಳು ವಿಭಿನ್ನ ಸಂದೇಶವನ್ನು ನೀಡುವ ಕಲಾಕೃತಿಗಳನ್ನು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರದರ್ಶಿಸಲು ಸಜ್ಜಾಗಿದ್ದಾರೆ. 

ಬಿ.ವಿ.ಎ.ಫೌಂಡೇಷನ್ ತರಗತಿಯ ಕಲಾ ಅಧ್ಯಾಪಕರ ಮಾರ್ಗದರ್ಶನದಲ್ಲಿ ಸುಮಾರು 150 ಕಲಾ ವಿದ್ಯಾರ್ಥಿಗಳು ತಮ್ಮ ಕಲಾ ಕೌಶಲ ಪ್ರದರ್ಶಿಸುತ್ತಿದ್ದಾರೆ.

ಶಿಲ್ಪಕಲೆಯಲ್ಲಿ ಜ್ಯಾಮಿತಿ ಕೃತಿಗಳು, ಮಣ್ಣಿನಲ್ಲಿ ವಿಧವಿಧವಾದ ದಿನನಿತ್ಯ ಉಪಯೋಗಿಸುವ ಹಣ್ಣು ತರಕಾರಿಗಳು ಮತ್ತು ಮುದ್ರಣ ಕಲೆಯಲ್ಲಿ ಕಪ್ಪು ಬಿಳುಪಿನ ಚಿತ್ರಗಳು, ಪ್ರಿಂಟ್ ಮೇಕಿಂಗ್‍ಗೆ ಬೇಕಾದ ತಳಹದಿ ಚಿತ್ರಗಳು, ಸ್ಟೆಂಸಿಲ್ ಕಟಿಂಗ್ ಅದರ ಜೊತೆಗೆ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿರುವ ನಿಸರ್ಗ ಸೌಂದರ್ಯವನ್ನು ಕಲಾಕೃತಿಗಳ ಮೂಲಕ ಬಿಂಬಿಸಿದ್ದಾರೆ. ಎಲ್ಲಾ ಕಲಾಕೃತಿಗಳು ಜೀವನ ಸಂದೇಶದ ಜೊತೆಗೆ ಸ್ವಾತಂತ್ರ್ಯ ಹೋರಾಟಗಾರರ ಸಾಧನೆ ಮತ್ತು ಬದುಕನ್ನು ಪ್ರತಿಬಿಂಬಿಸುತ್ತದೆ.

ಕಲಾ ಪ್ರದರ್ಶನ

ಸ್ಥಳ: ಚಿತ್ರಕಲಾ ಮಹಾವಿದ್ಯಾಲಯದ ತಳಮಹಡಿ, ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರ ಕೃಪಾ ರಸ್ತೆ, ಬೆಂಗಳೂರು.

ಆಗಸ್ಟ್ 15 (ಸ್ವಾತಂತ್ರ್ಯ ದಿನಾಚರಣೆಯಂದು), ಬೆಳಿಗ್ಗೆ 10 ರಿಂದ ಸಂಜೆ 4

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !