ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾರಂಗ: ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನದೊಂದಿಗೆ ಸಾಂಸ್ಕೃತಿಕ ಉತ್ಸವಕ್ಕೆ ತೆರೆ

Last Updated 11 ಜೂನ್ 2022, 13:04 IST
ಅಕ್ಷರ ಗಾತ್ರ

ಜನಪ್ರಿಯ ನಾಟಕ ‘ಮುಖ್ಯಮಂತ್ರಿ’ ಅಭಿನಯದೊಂದಿಗೆ ಡಾ| ಎಚ್.ನರಸಿಂಹಯ್ಯ ನೆನಪಿನ ಸಾಂಸ್ಕೃತಿಕ ಉತ್ಸವಕ್ಕೆ ಸೋಮವಾರದಂದು (ಜೂನ್ 6) ತೆರೆಬಿದ್ದಿತು. ಹಿರಿಯ ಶೈಕ್ಷಣಿಕ ಮುತ್ಸದ್ಧಿಯಾಗಿದ್ದ ಪದ್ಮಭೂಷಣ ನರಸಿಂಹಯ್ಯನವರ ನೆನಪಿನಲ್ಲಿ ಬೆಂಗಳೂರು ಲಲಿತಕಲಾ ಪರಿಷತ್ ಪತಿ ವರ್ಷ ನಡೆಸುವ 6 ದಿನಗಳ ಸಾಂಸ್ಕೃತಿಕ ಉತ್ಸವದಲ್ಲಿ ಸಂಗೀತ, ನೃತ್ಯ ಮತ್ತು ನಾಟಕಗಳು ಮೇಳೈಸಿ ಒಂದುವರ್ಣರಂಜಿತ ಅನುಭವ ನೀಡಿತು.

ಡಾ| ಎಸ್.ಸಿ.ಶರ್ಮ ಅವರಿಂದ ಚಾಲನೆಗೊಂಡ ಉತ್ಸವದಲ್ಲಿ ಡಾ| ವಿದ್ಯಾಭೂಷಣರ ಗಾಯನದೊಂದಿಗೆ ನಾಂದಿ ಪಡೆದು ಚಾರುಕೇಶಿ ರಾಗವನ್ನು ಆಲಾಪಿಸಿ ಮುಂದೆ ಅನೇಕ ಕನ್ನಡ ದೇವರ ನಾಮಗಳನ್ನು ಭಕ್ತಿಭಾವದಿಂದ ಹಾಡಿದರು (ಪಿಟೀಲು-ಪಾದೇಶಾಚಾರ್ಯರ ಮೃದಂಗ-ಎಚ್.ಎಸ್.ಸುಧೀಂದ, ಘಟ-ರಘುನಂದನ್). ಎರಡನೆಯ ದಿನ ಪುತ್ತೂರು ನರಸಿಂಹನಾಯಕ್ ಅವರು ಭಕ್ತಿಗೀತೆ ಮತ್ತು ಭಾವಗೀತೆಗಳ ಸುಮಧುರ ನಿರೂಪಣೆ ಮಾಡಿದರು (ಕೀಬೋರ್ಡ್-ಕೃಷ್ಣ ಉಡುಪ, ತಬಲ-ಮೈಸೂರು ರಘುನಾಥ್, ತಾಳ-ವೆಂಕಟೇಶ ಪುರೋಹಿತ್). ಅವರ ಗಾಯನದಲ್ಲಿದ್ದ ಕನಕದಾಸರ ‘ಅಂಗಳದೊಳು ರಾಮನಾಡಿದ’, ವ್ಯಾಸರಾಜರ ‘ತುಂಬಿತು ಬೆಳದಿಂಗಳು ವನದೊಳು’ಹಾಗೂ ಕುವೆಂಪುರವರ (ಬಾ ಪಾಲ್ಗುಣ ರವಿ ದರ್ಶನಕೆ), ಬೇಂದ್ರೆಯವರ (ಹುದುಗಲಾರದ ದುಃಖ) ಕೇಳುಗರ ಮನ ಸೆಳೆಯಿತು.

ನಟ ಭೈರವಿ ರಾಗದ ವಿಸ್ತರಣೆ ಹಾಗೂ ಪಲ್ಲವಿಯು ಆರ್.ಕೆ.ಪದ್ಮನಾಭ ಅವರ ಪಾಂಡಿತ್ಯ ಮತ್ತು ಅನುಭವಗಳಿಗೆ ಸಾಕ್ಷಿಯಾಗಿತ್ತು (ಪಿಟೀಲು-ಸಿ.ಎಸ್.ಚಂದಶೇಖರ್, ಮೃದಂಗ-ಸಿ.ಚೆಲುವರಾಜ್ ಮತ್ತು ಘಟ-ರಾಘವೇಂದ್ರ ಪ್ರಕಾಶ್). ಜನಪ್ರಿಯ ಗಾಯಕಿ ಎಂ.ಎಸ್.ಶೀಲ ಕಾಂಬೋಧಿ ಕಲ್ಯಾಣ ರಾಗಗಳನ್ನು ವಿಸ್ತರಿಸಿ ಪೇಕ್ಷಕರ ಮೆಚ್ಚುಗೆಗೆ ಪಾತ್ರರಾದರು (ಪಿಟೀಲು-ಚಾರುಲತ ರಾಮಾನುಜಂ, ಮೃದಂಗ- ಜಯಚಂದರಾವ್ ಮತ್ತು ಘಟ-ನಾರಾಯಣಮೂರ್ತಿ). ಉತ್ಸವದ ಏಕೈಕ ನೃತ್ಯ ಕಾರ್ಯಕ್ರಮ ನೀಡಿದ ಸತ್ಯನಾರಾಯಣರಾಜು ತಮ್ಮ ಶಿಷ್ಯರೊಂದಿಗೆ ಕೃಷ್ಣಕರ್ಣಾಮೃತದಿಂದ ಆಯ್ದ ಶ್ಲೋಕಗಳಿಗೆ ಭಾವಪೂರ್ಣವಾಗಿ ಹಾಗೂ ಆಕರ್ಷಕವಾಗಿ ನರ್ತಿಸಿ ಶೋತೃಗಳನ್ನು ರಂಜಿಸಿದರು. ಕಲಾಗಂಗೋತಿಯ ಸುಪರಿಚಿತ ನಾಟಕ ‘ಮುಖ್ಯಮಂತ್ರಿ ’ಯು ಡಾ| ಬಿ.ವಿ.ರಾಜಾರಾಂ ಅವರ ದಕ್ಷ ನಿರ್ದೇಶನದಲ್ಲಿ (ಕನ್ನಡ ರೂಪ - ಟಿ.ಎಸ್.ಲೋಹಿತಾಶ್ವ) ಡಾ| ಮುಖ್ಯಮಂತಿ ಚಂದ್ರು ಎಲ್ಲರ ಗಮನ ಸೆಳೆದರು.

ಪ್ರಖ್ಯಾತ ನಟ-ನಿರ್ದೇಶಕ ಟಿ.ಎನ್.ಸೀತಾರಾಂ ಸಮಾರೋಪ ಭಾಷಣದಲ್ಲಿ ಸಂಸ್ಥೆಗೆ ಶುಭ ಕೋರಿದರು. ಮಳೆಯ ನಡುವೆಯೂ ದೊಡ್ಡ ವರ್ಗದ ಪೇಕ್ಷಕರು ಸೇರಿ ಕಲೆಗೆ ಪ್ರೋತ್ಸಾಹಿಸಿದ ಉತ್ಸವವು ಡಾ| ಎ.ಎಚ್.ರಾಮರಾವ್ ಅವರ ಸಮರ್ಥ ನಿರ್ದೇಶನದಲ್ಲಿ ಯಶಸ್ವಿಯಾಗಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT