ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದದ ಪಾದಾರವಿಂದ

Last Updated 9 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಚಳಿಗಾಲ ಆರಂಭವಾದರೆ ಸಾಕು, ಚರ್ಮ ಬಿರುಕು ಬಿಡಲು ಆರಂಭಿಸುತ್ತದೆ. ಪಾದ, ಕಾಲುಗಳಲ್ಲಿಯೇ ಮೊದಲು ಈ ಬಿರುಕು ಕಾಣಿಸಿಕೊಳ್ಳುವುದು. ಇದಕ್ಕೆ ವಿರುದ್ಧವಾಗಿ ಚಳಿಗಾಲದ ಫ್ಯಾಷನ್‌ನಲ್ಲಿ ಸ್ಕರ್ಟ್‌ಗಳೂ, ಗಣಿತೀಯ ಚಿತ್ರಗಳಿರುವ ಉಡುಗೆಗಳೂ ಹೆಚ್ಚಾಗಿರುತ್ತವೆ.

ಪಾದಗಳ ಅಂದವನ್ನು ಕಾಪಾಡಿಕೊಂಡರೆ ಚರ್ಮದ ಆರೋಗ್ಯವೂ, ಸೌಂದರ್ಯವೂ ಕಣ್ಸೆಳೆಯುವಂತಾಗುತ್ತದೆ.

ಪಾದದ ಆರೈಕೆಯನ್ನು ಅಕ್ಕರೆಯಿಂದ ಮಾಡಿಕೊಳ್ಳಬೇಕೆನಿಸಿದರೆ ನಿಯಮಿತವಾಗಿ ಪೆಡಿಕ್ಯೂರ್‌ ಮಾಡಿಸಿಕೊಳ್ಳಿ.

ಹೆಣ್ಣುಮಕ್ಕಳಾದರೆ ನಿಯಮಿತವಾಗಿ ವ್ಯಾಕ್ಸ್‌ ಮಾಡಿಸಿಕೊಳ್ಳಬೇಕು.

ನಿಮ್ಮ ಚರ್ಮದ ಗುಣವನ್ನು ಗುರುತಿಸಿಕೊಂಡು ಅಗತ್ಯವಿರುವ, ಚಾಕಲೇಟ್‌, ಚಾರ್ಕೋಲ್‌ ಅಥವಾ ಗೋಲ್ಡ್‌ ವ್ಯಾಕ್ಸ್‌ ಮಾಡಿಸಿಕೊಳ್ಳಬಹುದು.

ಪೆಡಿಕ್ಯೂರ್‌ನಿಂದಾಗಿ ಪಾದದಲ್ಲಿಯ ಮೇಲ್ಪದರದಲ್ಲಿರುವ ಸತ್ತ ಚರ್ಮದ ಕೋಶಗಳನ್ನು ನಿರ್ಮೂಲನೆ ಮಾಡಬಹುದು. ಉಗುರು ಬಿಸಿ ನೀರಿನಲ್ಲಿ ಕಾಲನ್ನು ಸ್ವಚ್ಛಗೊಳಿಸುವುದರಿಂದ ತ್ವಚೆಯ ಕೋಮಲತನ ಹಾಳಾಗದು. ಉಗುರುಗಳನ್ನು ಒಳಕ್ಕೆ ಒತ್ತಿ, ಹೆಚ್ಚುವರಿ ಚರ್ಮವನ್ನು ಹಿಂದಕ್ಕೆ ಒತ್ತಿ ಪಾದ, ಪಾದದ ಬೆರಳುಗಳನ್ನು ಸ್ವಚ್ಛವಾಗಿಡಲು ಅನುಕೂಲವಾಗುತ್ತದೆ.

ಪ್ರತಿದಿನವೂ ಸ್ನಾನ ಮಾಡುವಾಗ ಎಂಟ್ಹತ್ತು ಹನಿ ಕೊಬ್ಬರಿ ಎಣ್ಣೆಯನ್ನು ಬಿಸಿನೀರಿಗೆ ಬೆರೆಸಿ ಮಾಡಬೇಕು. ಚರ್ಮದ ತೇವಾಂಶ ಉಳಿದುಕೊಳ್ಳುತ್ತದೆ.

ಸ್ನಾನದ ನಂತರ ಬಾಡಿಲೋಷನ್‌ ಬಳಬಸುವುದರಿಂದ ಚರ್ಮ ಒಡೆಯುವುದು, ಬಿರುಕು ಬಿಡುವುದನ್ನು ನಿಯಂತ್ರಿಸಬಹುದು. ತುರಿಕೆಯೂ ಕಂಡು ಬರುವುದಿಲ್ಲ.

ಕಾಲುಗಳನ್ನು ಚಂದಗಾಣಿಸಲು, ಚಳಿಯಾಗದಂತೆ ಇರಲು ಬಳಸುವ ಬೆಚ್ಚನೆಯ ಬಟ್ಟೆಗಳನ್ನು ಬಿಸಿನೀರಿನಲ್ಲಿ ಸ್ವಚ್ಛಗೊಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT