ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೆಂಬರ್ 1ರಂದು ಪ್ರಜಾವಾಣಿ ನಾಡ ಹಬ್ಬ ಲೈವ್

Last Updated 30 ಅಕ್ಟೋಬರ್ 2020, 12:36 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಆನ್‌ಲೈನ್ ಆಚರಣೆಯ ಪ್ರಯುಕ್ತ ಪ್ರಜಾವಾಣಿಯ ಫೇಸ್‌ಬುಕ್ ಪುಟದಲ್ಲಿ (fb.com/prajavani.net) ನ.1ರಂದು ನಾಡು-ನುಡಿಯ ಹಬ್ಬ ಮೂಡಿಬರಲಿದೆ.

ಭಾನುವಾರ ಬೆಳಿಗ್ಗೆ 9 ಗಂಟೆಗೆ ಮೈಸೂರು ದೇವಾನಂದ್ ವರಪ್ರಸಾದ್ ಅವರಿಂದ ಜನಪದ ಕಥನ ಕಾವ್ಯಗಳಾದ ಮಲೆ ಮಹದೇಶ್ವರ, ಮಂಟೇಸ್ವಾಮಿ, ಬಿಳಿಗಿರಿ ರಂಗಯ್ಯ, ಚಾಮುಂಡಿ, ನಂಜುಡೇಶ್ವರನ ಗಾಯನ ಕಾರ್ಯಕ್ರಮ ನಡೆಯಲಿದೆ. ಪ್ರದೀಪ್ ಮತ್ತು ನಾರಾಯಣ್ ಅವರಿಂದ ಸಹಗಾಯನ, ರಮೇಶ್ ಧನ್ನೂರು ತಬಲ, ಗಣೇಶ್ ಈಶ್ವರ್ ಭಟ್ ಕೀಬೋರ್ಡ್ ಹಾಗೂ ಕಿರಣ್ ರಿದಂ ಪ್ಯಾಡ್‌ನಲ್ಲಿ ಸಹಕರಿಸುವರು.

ಬೆಳಕೇ ಕಾಣದ ಕಣ್ಣುಗಳಿಗೆ ನಾಡ ಹಬ್ಬವು ಹೊಸ ಭರವಸೆ ಮೂಡಿಸಲಿ ಎಂಬ ಆಶಯದೊಂದಿಗೆ, ಸಮರ್ಥನಂ ಅಂಗವಿಕಲರ ಸಂಸ್ಥೆಯ 'ಸುನಾದ' ತಂಡದಿಂದ ಗಾಯನ ಕಾರ್ಯಕ್ರಮವು ಸಂಜೆ 5ರಿಂದ ನಡೆಯಲಿದೆ.

ಸಂಜೆ 6ರಿಂದ ಚಲನಚಿತ್ರ ಹಿನ್ನೆಲೆ ಗಾಯಕಿ ಡಾ.ಶಮಿತಾ ಮಲ್ನಾಡ್ ಅವರಿಂದ ಕನ್ನಡ ಜನಪದ ಗೀತೆ, ಸುಗಮ ಸಂಗೀತ, ಚಲನಚಿತ್ರ ಗೀತೆಗಳ ರಸದೌತಣವಿದೆ.

ಇದು ಎರಡು ವಾರಗಳ ಪ್ರಜಾವಾಣಿ ನಾಡು-ನುಡಿಯ ಹಬ್ಬಕ್ಕೆ ಮುನ್ನುಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT