ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಯಂತ್ರದಲ್ಲಿ ತಾಂತ್ರಿಕ ದೋಷ ಗಂಟೆಗಟ್ಟಲೆ ಮತದಾನ ಸ್ಥಗಿತ

Last Updated 12 ಮೇ 2018, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಳ್ಳಾರಿ, ಧಾರವಾಡ, ಉತ್ತರ ಕನ್ನಡ ಮತ್ತು ಬಾಗಲಕೋಟೆ ಜಿಲ್ಲೆಗಳ ಹಲವೆಡೆ ಮತ ಯಂತ್ರ ಮತ್ತು ಮತ ಖಾತರಿ ಯಂತ್ರಗಳು ಕೆಟ್ಟಿದ್ದರಿಂದ ಮತದಾನ ಸ್ಥಗಿತಗೊಂಡು, ಮತದಾರರು ಗಂಟೆಗಟ್ಟಲೆ ಕಾಯುತ್ತಾ ಕುಳಿತುಕೊಳ್ಳಬೇಕಾಯಿತು.

ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದ ಕುರುಗೋಡು, ಗೆಣಕಿಹಾಳ್‌, ಕಪ್ಪಗಲ್ಲು, ದೇವಸಮುದ್ರ, ಮುದ್ದಾಪುರ, ಹೂವಿನ ಹಡಗಲಿ ಕ್ಷೇತ್ರದ ಕಂದಗಲ್ಲು, ರಾಯರಾಳ ತಾಂಡ, ಜಿ.ನಾಗಲಾಪುರ, ಗರಗ, ಕೂಡ್ಲಿಗಿ ಕ್ಷೇತ್ರದ ಸುಳದಹಳ್ಳಿ, ಸಂಡೂರು ಪಟ್ಟಣ ಮತ್ತು ಕುಡಿತಿನಿಯಲ್ಲಿ ಮತದಾನ ಸ್ಥಗಿತಗೊಂಡಿತ್ತು.

ಕೆಲವೆಡೆ ಮತದಾನ ಯಂತ್ರಗಳ ಬದಲಾವಣೆ ನಡೆಯಿತು. ಇನ್ನು ಕೆಲವೆಡೆ ತಾಂತ್ರಿಕ ದೋಷ ಸರಿಪಡಿಸಿದ ಬಳಿಕ ಮತದಾನ ಆರಂಭವಾಯಿತು.

ಧಾರವಾಡ ಜಿಲ್ಲೆಯ ಗುಲಗಂಜಿಕೊಪ್ಪದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆ ಹಾಗೂ ಕುಂದಗೋಳ ತಾಲ್ಲೂಕಿನ ತರ್ಲಘಟ್ಟ ಮತ್ತು ದ್ಯಾವನೂರಿನಲ್ಲಿ ತಲಾ ಒಂದು ತಾಸು ಮತದಾನ ಸ್ಥಗಿತಗೊಂಡಿತ್ತು.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಿರೇಗುತ್ತಿ, ಯಲ್ಲಾಪುರ ತಾಲ್ಲೂಕಿನ ನಿಂಗ್ಯಾನಕೊಪ್ಪ ಹಾಗೂ ಪಟ್ಟಣದ ಪಿಂಕ್‌ ಮತಗಟ್ಟೆ, ಸಿದ್ದಾಪುರ ತಾಲ್ಲೂಕಿನ ಶಿವಳಮನೆ, ಕರ್ಜಗಿ, ಹೇರೂರ, ಹೂವಿನಮನೆ, ಕಾನಗೋಡ ಮತಗಟ್ಟೆ ಹಾಗೂ ಹೊನ್ನಾವರ ತಾಲ್ಲೂಕಿನ ಹಳದಿಪುರ, ಕೋಡ್ಕಣಿ ಕೆಲವೆಡೆ ಮತಯಂತ್ರ ಕೈಕೊಟ್ಟಿದ್ದರಿಂದ ಮತದಾನ ಅರ್ಧತಾಸು ವಿಳಂಬವಾಗಿದೆ.

ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದ ಮತಗಟ್ಟೆ ಸಂಖ್ಯೆ 92ರಲ್ಲಿ ಸಂಜೆ ಆರು ಗಂಟೆಗೆ ಮತದಾನ ಸ್ಥಗಿತಗೊಂಡಿತ್ತು. ಆ ವೇಳೆ ಮತ ಚಲಾಯಿಸಲು ಸರ
ದಿಯಲ್ಲಿ 400 ಮಂದಿ ನಿಂತಿದ್ದರು. ಯಲ್ಲಾಪುರದಲ್ಲಿ ಅರ್ಧತಾಸು ಸ್ಥಗಿತವಾಗಿತ್ತು.

ಹುಬ್ಬಳ್ಳಿಯ ಕಿಮ್ಸ್‌ ಆವರಣದ ಮತಗಟ್ಟೆಯಲ್ಲಿ 40 ನಿಮಿಷ, ಕುಂದಗೋಳದ ತರ್ಲಘಟ್ಟ ಮತ್ತು ದ್ಯಾವನೂರಿನಲ್ಲಿ ತಲಾ ಒಂದು ತಾಸು ಮತದಾನ ಸ್ಥಗಿತ
ಗೊಂಡಿತ್ತು. ಬೆಳಗಾವಿ ಜಿಲ್ಲೆಯ ಹಾರೂಗೇರಿಯಲ್ಲಿ 3 ತಾಸು ವಿಳಂಬವಾಯಿತು.

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಒಂದು ತಾಸು ಮತ್ತು ಕಲಾದಗಿಯಲ್ಲಿ 45 ನಿಮಿಷ ಮತದಾನ ನಿಂತಿತ್ತು. ಪರ್ಯಾಯ ವ್ಯವಸ್ಥೆ ಮಾಡಿದ ನಂತರ ಮತದಾನ ಆರಂಭವಾಯಿತು ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT