ಹುತ್ತದ ಮಣ್ಣಿನ ನಾಗರ ಪೂಜಿಸಿ

7

ಹುತ್ತದ ಮಣ್ಣಿನ ನಾಗರ ಪೂಜಿಸಿ

Published:
Updated:
Deccan Herald

ಆಷಾಢ ಮುಗಿಯಿತು. ಇನ್ನೇನಿದ್ದರೂ ಹಬ್ಬಗಳದ್ದೇ ಕಾರುಬಾರು. ಶ್ರಾವಣ ಪ್ರಾರಂಭದಲ್ಲೇ ಬರುವ ಹಬ್ಬ ನಾಗರ ಪಂಚಮಿ. ಬೆಂಗಳೂರಿನಲ್ಲಂತೂ ನಾಗರ ಪಂಚಮಿ ವಿಶೇಷ ಮಹತ್ವ ಪಡೆದುಕೊಂಡಿದೆ. ಶ್ರದ್ಧೆ ಹಾಗೂ ಕಟ್ಟುನಿಟ್ಟಾಗಿ ಈ ಹಬ್ಬ ಆಚರಿಸಲಾಗುತ್ತದೆ.

ಹುತ್ತದ ಮಣ್ಣಿನಿಂದ ನಾಗರ ಮೂರ್ತಿಗಳನ್ನು ತಯಾರಿಸಿ, ಅವುಗಳನ್ನು ಪೂಜಿಸಿ, ನಂತರ ಎಕ್ಕದ ಗಿಡಗಳ ಬಳಿ ವಿಸರ್ಜಿಸುವುದು ಹಿಂದಿನ ಕಾಲದಲ್ಲಿದ್ದ ಸಂಪ್ರದಾಯ. ಬದುಕು ಆಧುನೀಕರಣಗೊಂಡಿದ್ದರಿಂದ ಆ ಸಂಪ್ರದಾಯ ನಶಿಸಿ, ಹುತ್ತ ಹಾಗೂ ಕಲ್ಲಿನ ನಾಗರಗಳ ಮೇಲೆ ಹಾಲೆರೆದು ಪೂಜಿಸುವ ವಾಡಿಕೆ ಚಾಲ್ತಿಗೆ ಬಂದಿದೆ.

ಮತ್ತೆ ಹಳೆಯ ಸಂಪ್ರದಾಯಕ್ಕೆ ಚಾಲನೆ ನೀಡಲು ರಾಜಾಜಿನಗರದ ‘ಸಮರ್ಪಣ’ ಸಂಸ್ಥೆ ಮುಂದಾಗಿದೆ. ಹುತ್ತದ ಮಣ್ಣಿನಲ್ಲಿ ಕಲಾವಿದರು ಸಿದ್ಧಪಡಿಸಿದ ಪುಟಾಣಿ ನಾಗರಮೂರ್ತಿಗಳನ್ನು ನಗರದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಿಕೊಟ್ಟಿದೆ ಈ ಸಂಸ್ಥೆ.

‘ನಗರ ಪ್ರದೇಶದಲ್ಲಿ ಹುತ್ತಗಳೇ ಕಣ್ಮರೆಯಾಗಿವೆ. ಇನ್ನು ಅವುಗಳ ಮಣ್ಣಿನಿಂದ ಮಾಡಿದ ನಾಗರ ಮೂರ್ತಿಗಳು ಸಿಗುತ್ತವೆಯೇ?. ಹೀಗಾಗಿ, ನಾವು ದೂರದ ಊರುಗಳಿಂದ ಹುತ್ತದ ಮಣ್ಣನ್ನು ತರಿಸಿ, ಅದಕ್ಕೆ ಜೇಡಿ ಮಣ್ಣನ್ನು ಬೆರೆಸಿ ನಾಗರ ಮೂರ್ತಿಗಳನ್ನು ಸಿದ್ಧಪಡಿಸುತ್ತೇವೆ. ಹಾಗಂತ ಎಲ್ಲ ಹುತ್ತಗಳನ್ನು ನಾಶಪಡಿಸುವುದಿಲ್ಲ’ ಎನ್ನುತ್ತಾರೆ ಸಮರ್ಪಣ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್ ಹೊಸಮನಿ.

ಕಲಾವಿದರಾದ ಗೋಕಾಕದ ಶಿವಬಸಪ್ಪ, ಮಾಗಡಿಯ ಕುಮಾರ್, ಟಿ. ನಾರಾಯಣಪುರದ ಮಹೇಶ್ ಹಾಗೂ ಶ್ರೀನಿವಾಸ್ ಅವರು ಈ ನಾಗರ ಮೂರ್ತಿಗಳನ್ನು ಸುಂದರವಾಗಿ ತಯಾರಿಸಿದ್ದಾರೆ. ಇವರು ತಮ್ಮ ಪ್ರದೇಶಗಳಲ್ಲಿ ಲಭ್ಯವಿರುವ ಹುತ್ತದ ಮಣ್ಣನ್ನು ಸಂಗ್ರಹಿಸಿ ಅದಕ್ಕೆ ಜೇಡಿ ಮಣ್ಣನ್ನು ಮಿಶ್ರಣ ಮಾಡಿ ಈ ಮೂರ್ತಿಗಳನ್ನು ತಯಾರಿಸಿದ್ದಾರೆ. 

‘ಈ ಮಣ್ಣಿನ ನಾಗರಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ, ಪೂಜಿಸಿ ನಂತರ ಹೂವಿನ ಕುಂಡಗಳಲ್ಲಿ ಅಥವಾ ಎಕ್ಕದ ಗಿಡಗಳ ಬಳಿ ವಿಸರ್ಜಿಸಬಹುದು. ಇದು ಪರಿಸರಕ್ಕೂ ಪೂರಕ. ಈ ಬಾರಿ ಎರಡು ಸಾವಿರಕ್ಕೂ ಅಧಿಕ ನಾಗರಮೂರ್ತಿಗಳನ್ನು ತಯಾರಿಸಲಾಗಿದ್ದು, ಭಕ್ತರಿಂದ ಬೇಡಿಕೆ ಹೆಚ್ಚಿದರೆ ಅಗತ್ಯವಿದ್ದಷ್ಟು ಮೂರ್ತಿಗಳನ್ನು ಸ್ಥಳದಲ್ಲಿಯೇ ತಯಾರಿಸಿಕೊಡಲು ಕಲಾವಿದರು ಸಿದ್ಧರಿದ್ದಾರೆ’ ಎನ್ನುತ್ತಾರೆ ಶಿವಕುಮಾರ್.

ಜೀವಂತ ಹಾವಿಗೆ, ದೊಡ್ಡ ದೊಡ್ಡ ಹುತ್ತಗಳಿಗೆ ಹಾಗೂ ಕಲ್ಲಿನ ಮೂರ್ತಿಗಳಿಗೆ ಹಾಲೆರೆದು ವ್ಯರ್ಥ ಮಾಡುವುದು ಸರಿಯಲ್ಲ. ಅದನ್ನು ವಿರೋಧಿಸುವುದೂ ಇಲ್ಲ. ಆ ಪದ್ಧತಿಗೆ ಪರ್ಯಾಯವಾಗಿ ಹುತ್ತದ ಮಣ್ಣಿನ ನಾಗರ ಮೂರ್ತಿಗಳನ್ನು ತಯಾರಿಸಿದ್ದೇವೆ. ಭಕ್ತರು ಇವುಗಳನ್ನು ಮನೆಗೆ ಕೊಂಡೊಯ್ದು ಪೂಜಿಸುವುದು ಒಳಿತು ಎನ್ನುವುದು ಅವರ ಅಭಿಪ್ರಾಯ.

ಸಂಪೂರ್ಣವಾಗಿ ಹುತ್ತಗಳನ್ನು ನಾಶ ಮಾಡಿ, ಅದರ ಮಣ್ಣಿನಿಂದ ನಾಗರ ಮೂರ್ತಿಗಳನ್ನು ಮಾಡುತ್ತಿಲ್ಲ. ಈ ಮೂರ್ತಿಗಳು ಪರಿಸರಕ್ಕೂ ಹಾನಿಕಾರಕವಲ್ಲ.‌

ಎಲ್ಲೆಲ್ಲಿ ಲಭ್ಯ

* ಜಯನಗರದ ಬಿಗ್‌ಬಜಾರ್ ಬಳಿ

* ರಾಜಾಜಿನಗರದ ಸಮರ್ಪಣ ಕಚೇರಿ

* ಅತ್ತಿಗುಪ್ಪೆಯ ಗ್ರಾಮೀಣ ಕುಟುಂಬ ಮಳಿಗೆ

* ಬಸವನಗುಡಿಯ ವಿಜಯಲಕ್ಷ್ಮಿ ಸ್ಟೋರ್ಸ್

ಹೆಚ್ಚಿನ ಮಾಹಿತಿಗೆ: 9606402979

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !