ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ರಾಷ್ಟ್ರಪತಿಗೆ ₹1 ಲಕ್ಷ ಕಚೇರಿ ವೆಚ್ಚ

Last Updated 29 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕಚೇರಿ ವೆಚ್ಚದ ರೂಪದಲ್ಲಿ ಮಾಜಿ ರಾಷ್ಟ್ರಪತಿಗೆ ₹1 ಲಕ್ಷ ಮತ್ತು ಮಾಜಿ ಉಪರಾಷ್ಟ್ರಪತಿಗೆ ವಾರ್ಷಿಕ ₹90 ಸಾವಿರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ರಾಷ್ಟ್ರಪತಿಗಳ ಪಿಂಚಣಿ ನಿಯಮ– 1956 ಮತ್ತು ಉಪರಾಷ್ಟ್ರಪತಿಗಳ ವಸತಿ ಮತ್ತು ಇತರ ಸೌಲಭ್ಯಗಳ ನಿಯಮ –1999 ತಿದ್ದುಪಡಿ ಮಾಡಿ ಈ ಹೊಸ ಸೌಲಭ್ಯವನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ.

ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಅವರ ಪ್ರತಿ ತಿಂಗಳ ಸಂಬಳವನ್ನು ಕ್ರಮವಾಗಿ ₹5 ಲಕ್ಷ ಮತ್ತು ₹4 ಲಕ್ಷಕ್ಕೆ ನಾಲ್ಕು ತಿಂಗಳ ಹಿಂದೆ ಹೆಚ್ಚಿಸಲಾಗಿತ್ತು. ರಾಜ್ಯಪಾಲರ ಸಂಬಳವನ್ನು ಸಹ ಪ್ರತಿ ತಿಂಗಳು ₹3.5 ಲಕ್ಷಕ್ಕೆ ಹೆಚ್ಚಿಸಲಾಗಿತ್ತು.

ನಿಧನರಾಗಿರುವ ರಾಷ್ಟ್ರಪತಿ ಅವರ ಪತ್ನಿಗೆ ನೆರವು ನೀಡಲು ಸಿಬ್ಬಂದಿ ನಿಯೋಜಿಸಲು ಸಹ ನಿರ್ಧರಿಸಲಾಗಿದೆ. ಇವರಿಗಾಗಿಯೇ ಒಬ್ಬ ಆಪ್ತ ಕಾರ್ಯದರ್ಶಿ ಮತ್ತು ಜವಾನ ಅವರನ್ನು ನೇಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಪ್ರತೀ ಹಣಕಾಸು ವರ್ಷದಲ್ಲಿ ₹20 ಸಾವಿರಕ್ಕೂ ಮೀರದಂತೆ, ಕಚೇರಿ ವೆಚ್ಚ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT