ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೈಯಲ್ಲೇ ಚುನಾವಣಾ ಮಾಹಿತಿ

ಜಿಲ್ಲಾಡಳಿತದಿಂದ ವಿಶೇಷ ವೆಬ್‌ ಪುಟ ಬಿಡುಗಡೆಗೆ ಸಿದ್ಧತೆ
Last Updated 3 ಏಪ್ರಿಲ್ 2018, 13:31 IST
ಅಕ್ಷರ ಗಾತ್ರ

ರಾಮನಗರ: ಚುನಾವಣೆಯ ಕುರಿತು ಅಂಗೈಯಲ್ಲಿ ಮತದಾರರಿಗೆ ಮಾಹಿತಿ ನೀಡುವ ಸಲುವಾಗಿ ಜಿಲ್ಲಾಡಳಿತ ವಿಶೇಷ ವೆಬ್ ಪುಟವೊಂದನ್ನು ರೂಪಿಸುತ್ತಿದೆ.ಜಿಲ್ಲಾ ಚುನಾವಣಾ ಅಧಿಕಾರಿ ಹೆಸರಿನಲ್ಲಿ ವಿನ್ಯಾಸಗೊಂಡಿರುವ ಈ ಪುಟದ ಲಿಂಕ್‌ ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ನ್ಯಾಷನಲ್ ಇನ್‌ಫಾರ್‌ಮೆಟಿಕ್‌ ಕೇಂದ್ರ (ಎನ್‌ಐಸಿ) ರಾಮನಗರದ ಸಿಬ್ಬಂದಿ ಇದನ್ನು ವಿನ್ಯಾಸಗೊಳಿಸಿದ್ದಾರೆ. ಸದ್ಯಕ್ಕೆ ಇದು ಪ್ರಯೋಗದ ಹಂತದಲ್ಲಿದೆ.ಜಿಲ್ಲೆಯಲ್ಲಿ ಎಷ್ಟು ಜನಸಂಖ್ಯೆ ಇದೆ. ಎಷ್ಟು ಮತದಾರರು ಇದ್ದಾರೆ. ಕ್ಷೇತ್ರವಾರು ಮತದಾರರ ಸಂಖ್ಯೆ ಎಷ್ಟು. ಮೊದಲಾದ ಅಂಕಿ–ಅಂಶವನ್ನು ಇಲ್ಲಿ ಪಡೆಯಬಹುದು. ಯಾವ ಕ್ಷೇತ್ರದಲ್ಲಿ ಎಷ್ಟೆಷ್ಟು ಮತದಾರರು ಇದ್ದಾರೆ, ಎಷ್ಟೆಲ್ಲ ಮತಗಟ್ಟೆ ಇವೆ ಎಂಬುದರ ಮಾಹಿತಿಯೂ ಇಲ್ಲಿದೆ.ನಮ್ಮ ಮತಗಟ್ಟೆ ಎಲ್ಲಿ ಬರುತ್ತದೆ, ಎಲ್ಲಿ ಮತ ಹಾಕಬೇಕು ಎನ್ನುವ ಮಾಹಿತಿಯನ್ನು ಮತದಾರರು ಕುಳಿತಲ್ಲೇ ಪಡೆಯಬಹುದು. ಹೊಸ ಮತದಾರರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ಅವಕಾಶವನ್ನು ರಾಜ್ಯ ಚುನಾವಣಾ ಆಯೋಗವು ಕಲ್ಪಿಸಿದೆ. ಅದರ ಲಿಂಕ್‌ ಕೂಡ ಲಭ್ಯವಿದೆ.

ರಾಮನಗರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ವಿಧಾನಸಭಾ ಕ್ಷೇತ್ರಗಳಿವೆ. ಮತಗಟ್ಟೆವಾರು ಮಾಹಿತಿ ಇಲ್ಲಿ ಸಿಗುತ್ತದೆ. ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತವು ಕೈಗೊಂಡ ಜಾಗೃತಿ ಕಾರ್ಯಕ್ರಮಗಳು ಕಾಲಕಾಲಕ್ಕೆ ಬಿತ್ತರಗೊಳ್ಳಲಿದೆ.ಮುಂದಿನ ದಿನಗಳಲ್ಲಿ ಮತದಾರರು, ಅಭ್ಯರ್ಥಿಗಳು, ರಾಜಕೀಯ ಪಕ್ಷಗಳಿಗೆ ಅಗತ್ಯ ಮಾಹಿತಿ ಮತ್ತು ಮಾರ್ಗದರ್ಶನ ಇಲ್ಲಿ ಸಿಗಲಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ, ಅಭ್ಯರ್ಥಿಗಳ ಪ್ರಮಾಣಪತ್ರ ಎಲ್ಲವೂ ಸಾರ್ವಜನಿಕ ಮಾಹಿತಿಗಾಗಿ ಈ ವೈಬ್‌ಪುಟದಲ್ಲಿ ಲಭ್ಯವಾಗಲಿದೆ.

ಆಸಕ್ತರು www.ramanagara.nic.in/deormg ವೆಬ್ ಪುಟಕ್ಕೆ ಭೇಟಿ ನೀಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT