ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುದ್ಧ ಭೂಮಿಯ ಪ್ರೇಮಕತೆ

Last Updated 13 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಗಾಜಾದ 22 ವರ್ಷ ವಯಸ್ಸಿನ ಫಾದಿ ಅಲ್-ಘಝಾಲ್‌ ಮತ್ತು ಸಿರಿಯನ್ ಪಟ್ಟಣದ ಖಾನ್ ಶೇಖೌನ್‌ನ 21 ವರ್ಷ ವಯಸ್ಸಿನ ಯಾರಾ ಅಲ್-ಝೌಬಿ ನಡುವೆ ಫೇಸ್‌ಬುಕ್‌ ಮೂಲಕ ಸ್ನೇಹವಾಗಿತ್ತು. ಸ್ನೇಹ ಕ್ರಮೇಣ ಪ್ರೀತಿಯಾಗಿ ಬೆಳೆದಿತ್ತು. ಮೊದಲ ಭೇಟಿಯಲ್ಲೇ ಫಾದಿಗೆ ಯಾರಾ ಸಂಗಾತಿಯಂತೆ ಕಂಡಳು. ಯುದ್ಧ ಭೂಮಿಯಲ್ಲೇ ಬದುಕುತ್ತಿದ್ದ ಈ ಇಬ್ಬರೂ, ಯಾರೂ ಊಹಿಸಲಾರದಷ್ಟು ಘಟನೆಗಳನ್ನು ಕಂಡಿದ್ದರು.

ಸಿರಿಯಾದಲ್ಲಿ ಸಂಘರ್ಷಗಳು ಮತ್ತು ಯುದ್ಧದಂತಹ ವಿದ್ಯಮಾನಗಳು ಈ ಇಬ್ಬರ ನಡುವಿನ ಸಂಬಂಧ ಬಲವಾಗಲು ಕಾರಣವಾದವು. 2008, 2012 ಮತ್ತು 2014 ರಲ್ಲಿ ಗಾಜಾದಲ್ಲಿ ನಡೆದ ಮೂರು ಯುದ್ಧಗಳಲ್ಲೂ ಫಾದಿ ಬದುಕುಳಿದಿದ್ದರು. ಯಾರಾ ವಾಸವಿದ್ದ ಪಟ್ಟಣದ ಮೇಲೆಯೂ ರಾಸಾಯನಿಕ ದಾಳಿ ನಡೆದಿತ್ತು. ಆಗ ಆಕೆ ಅನುಭವಿಸಿದ ನೋವು ಕಂಡು ಫಾದಿಗೆ ಯಾರಾ ಮೇಲಿದ್ದ ಪ್ರೀತಿ ಮತ್ತಷ್ಟು ಹೆಚ್ಚಾಯಿತು. ಆಕೆಗೆ ಸುಂದರ ಬದುಕು ನೀಡುವ ಮಹಾದಾಸೆಯಿಂದ ಫಾದಿ ಮದುವೆಯಾಗಲು ನಿಶ್ಚಯಿಸಿದ.

ಸಿರಿಯಾ ಮುತ್ತಿಗೆ ಹಾಕಿದ ಗಾಜಾ ಪಟ್ಟಿಯಲ್ಲೇ ವಾಸಿಸುತ್ತಿದ್ದ ಫಾದಿ, ಕೆಲವೇ ದಿನಗಳಲ್ಲಿ ಯಾರಾಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡರು. ಮುಂದೆ ಎರಡೂ ಕುಟುಂಬಗಳು ಇವರಿಬ್ಬರ ಮದುವೆಗೆ ಪರಸ್ಪರ ಒಪ್ಪಿ ನಿಶ್ಚಿತಾರ್ಥಕ್ಕೂ ಸಿದ್ಧತೆ ನಡೆಸಿತು. ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರೂ, ಇವರು ಒಬ್ಬರನ್ನೊಬ್ಬರು ಭೇಟಿ ಮಾಡಿರಲಿಲ್ಲ. ಇಲ್ಲಿವರೆಗೂ ಎಲ್ಲ ವಿಚಾರಗಳೂ ಫೇಸ್‌ಬುಕ್‌ ಮೂಲಕವೇ ನಡೆದಿತ್ತು. ಈಗ ಮದುವೆಯ ಒಪ್ಪಿಗೆ ಸಿಕ್ಕಿದ ಮೇಲೆ ತನ್ನ ‍ಪ್ರೇಮಿ ಫಾದಿಯನ್ನು ಭೇಟಿಯಾಗಲು ಯಾರಾ ನಿರ್ಧರಿಸಿದರು.

ತನ್ನ ತವರಾದ ವಾಯವ್ಯ ಸಿರಿಯಾದಿಂದ ನಿರ್ಬಂಧಿತ ಗಾಜಾ ಪಟ್ಟಿಗೆ ಮದುವೆಯ ಸಾಮಾನು, ಉಡುಪು, ಕಸೂತಿ, ಸರಕುಗಳೊಂದಿಗೆ ಪ್ರಯಾಣ ಬೆಳೆಸಿದಳು. ಹಲವು ಮನವಿಗಳ ನಂತರ, ರಾಫಾ ಗಡಿ ದಾಟಿ, ಗಾಜಾ ಪಟ್ಟಿ ಪ್ರವೇಶಕ್ಕೆ ಯಾರಾಳಿಗೆ ಈಜಿಪ್ಟಿನ ಅಧಿಕಾರಿಗಳು ಅನುಮೋದನೆ ನೀಡಿದರು. ಫಾದಿ–ಯಾರಾ ಪ್ರೇಮ ಕಥೆ ಕೇಳಿದವರೆಲ್ಲ ಈಕೆಯ ಬೆಂಬಲಕ್ಕೆ ನಿಂತರು. ಸಿರಿಯಾದಿಂದ ಗಾಜಾಗೆ ಹೋಗಲು ನೆರವಾದರು. ಈಜಿಪ್ಟ್‌ ಪ್ರವೇಶಕ್ಕೆ ಬೇಕಾದ ವೀಸಾ ಪಡೆಯಲು 3 ವರ್ಷಗಳೇ ಬೇಕಾಯಿತು. ತಡ ಮಾಡದೆ, ತನ್ನ ಸಾಮಾನುಗಳ ಜೊತೆ ಈಜಿಪ್ಟ್‌ಗೆ ಹೊರಟಳು. ಅಲ್ಲಿಂದ ಗಾಜಾ ತಲುಪಲು ಅನೇಕ ದಿನ ದಣಿವರಿಯದೆ ಪ್ರಯಾಣ ಬೆಳೆಸಿದಳು.

ರಸ್ತೆಯುದ್ದಕ್ಕೂ ಯುದ್ಧಭೀತಿ, ಶೆಲ್ ದಾಳಿಗಳು. ಅಲ್ಲಲ್ಲಿ ಭದ್ರತಾ ತಪಾಸಣೆ ಎದುರಿಸುತ್ತಾ ಹೆಜ್ಜೆ ಹಾಕಿದಳು ಯಾರಾ. ಅಂತೂ ಹರಸಾಹಸದಿಂದ ಗಡಿದಾಟಿ ನವೆಂಬರ್‌ 8ರ ಮಧ್ಯರಾತ್ರಿ ಗಾಜಾ ನಗರಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಂತೆ ಆಕೆಯ ಕಣ್ಣಾಲಿಗಳು ತೇವವಾದವು. ನೋಟದಲ್ಲಿ ತುಂಬಿದ್ದ ಕನಸುಗಳು, ಫಾದಿಯನ್ನು ನೋಡುವ ಕಾತರವನ್ನು ಯಾರು ಬೇಕಾದರೂ ಊಹಿಸಬಹುದಿತ್ತು. ಈ ಐದು ವರ್ಷಗಳಲ್ಲಿ ಫಾದಿ, ಮಿಠಾಯಿ ಅಂಗಡಿಯಲ್ಲಿ ಕೆಲಸ ಮಾಡಿ, ಹಣ ಸಂಪಾದನೆ ಮಾಡಿ ಗಾಜಾ ನಗರದಲ್ಲಿ ಸ್ವಂತ ಅಪಾರ್ಟ್‌ಮೆಂಟ್‌ ಖರೀದಿಸಿ, ‘ಅಲ್‌ ರಹಮಾ’ ಎಂದು ಹೆಸರಿಟ್ಟಿದ್ದ. ಗಾಜಾ ನಗರಕ್ಕೆ ಬಂದ ಯಾರಾ, ಅದೇ ಮನೆಯಲ್ಲೆ ತನ್ನ ಪ್ರಿಯಕರನನ್ನು ಭೇಟಿಯಾದಳು.

ತಮ್ಮದು ಐದು ವರ್ಷಗಳ ಫೇಸ್‌ಬುಕ್‌ ಪ್ರೇಮವಾದರೂ, ಫಾದಿ ಭವಿಷ್ಯದ ಬದುಕಿನ ಬಗ್ಗೆ ಸಾಕಷ್ಟು ಯೋಚನೆ, ಯೋಜನೆ ಹಾಕಿಕೊಂಡಿದ್ದ. ಈ ಎಲ್ಲವನ್ನೂ ಯಾರಾಳೊಂದಿಗೆ ಹಂಚಿಕೊಂಡಿದ್ದ. ನವೆಂಬರ್‌ 18ರಂದು ವಿವಾಹ ನಿಶ್ಚಯವೂ ಆಗಿತ್ತು. ಅಂದು ಫಾದಿಯ ಜನ್ಮ ದಿನವೂ ಹೌದು. ಹೊಸ ಜೀವನದ ಸಂಭ್ರಮದ ಕನಸು ಕಾಣುತ್ತಿದ್ದ ಅವರಿಗೆ ಮತ್ತೊಂದು ದೊಡ್ಡ ಅಘಾತ ಎದುರಾಯಿತು. ಮದುವೆ ಇನ್ನು ಆರು ದಿನಗಳಿವೆ ಎನ್ನುವಾಗ ಇಸ್ರೇಲ್‌ ಪಡೆಗಳು ಗಾಜಾ ಪಟ್ಟಿ ಸುತ್ತ ನಡೆಸಿದ ವಾಯುದಾಳಿಗೆ, ಒಂಬತ್ತು ಬೃಹತ್‌ ಕಟ್ಟಡಗಳು ನೆಲಕಚ್ಚಿದವು. ಅವುಗಳಲ್ಲಿ ಅಲ್‌ ರಹಮಾ ಕಟ್ಟಡ ಕೂಡ ಒಂದು. ಆ ಕಟ್ಟಡ ಕುಸಿದರೂ, ಈ ಪ್ರೇಮಿಗಳು ಬಚಾವ್‌ ಆದರು. ಅಲ್ಲಿಂದ ಫಾದಿ ಯಾರಾಳೊಂದಿಗೆ ತಮ್ಮ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದರು. ‌

ಯುದ್ಧದ ಗಲಾಟೆ ಮುಗಿದ ಎರಡು ದಿನಗಳ ನಂತರ ಅಪಾರ್ಟ್‌ಮೆಂಟ್‌ಲ್ಲಿದ್ದ ಅಲ್- ರಹಮಾ ನೋಡಲು ಬಂದಾಗ, ಇಡೀ ಕಟ್ಟಡ ನೆಲಸಮವಾಗಿತ್ತು. ಅದರಲ್ಲಿಯೇ ಅವರ ಕನಸುಗಳು ನುಚ್ಚನೂರಾಗಿದ್ದವು. ಯಾರಾ ಮದುವೆ ಉಡುಪುಗಳು ಅವಶೇಷಗಳ ಅಡಿ ಸಿಲುಕಿತ್ತು. ಆಕೆ ಆಘಾತಗೊಂಡ ಕಣ್ಣುಗಳಲ್ಲಿ ನೋವಿನ ಅಲೆಗಳು ತುಂಬಿದ್ದವು. ಭಾಗಶಃ ನಾಶವಾದ ಅಪಾರ್ಟ್‌ಮೆಂಟ್‌ನ ಮಲಗುವ ಕೋಣೆಯಲ್ಲಿ ತೂಗಾಡುವ ಮದುವೆಯ ಉಡುಗೆ, ದೂಳಿನಿಂದ ಮುಚ್ಚಿಹೋಗಿತ್ತು.

‘ನನ್ನ ಇಡೀ ಜೀವನದಲ್ಲಿ ಯುದ್ಧದಿಂದ ದೂರ ಓಡುತ್ತಿದ್ದೇನೆ. ಆದರೆ ಆ ದೈತ್ಯ ಯುದ್ಧ ನನ್ನನ್ನು ಹಿಂಬಾಲಿಸುತ್ತಲೇ ಇದೆ. ಕಾಡುತ್ತಲೇ ಇದೆ’ ಎಂದು ಯಾರಾ ಕುಸಿದು ಬಿದ್ದಳು. ಇಷ್ಟೆಲ್ಲ ಯುದ್ಧ, ಸಂಘರ್ಷಗಳ ನಡುವೆಯೂ ತಮ್ಮ ಪ್ರೇಮವನ್ನು ಗೆಲ್ಲಿಸಿಕೊಂಡು, ಬೇರೆಡೆ ಬದುಕು ಕಟ್ಟಿಕೊಳ್ಳಲು ಹೊರಟರು. ಇವರ ಐದು ವರ್ಷಗಳ ಯುದ್ಧ ಭೂಮಿಯಲ್ಲಿ ನಡೆದ ಪ್ರೇಮದ ಕಥೆ ಗಾಜಾ ನಗರದ ನಾಗರಿಕರ ಮನಸ್ಸು ಕಲಕಿತ್ತು.. !

‘ಈ ಯುದ್ಧದೊಂದಿಗಿನ ಗುದ್ದಾಟ ಸಾಕಾಗಿದೆ. ಇಡೀ ಜೀವನದುದ್ದಕ್ಕೂ ಈ ಹಿಂಸೆಯ ಕೋರೆಯುಳ್ಳ ಯುದ್ಧರಕ್ಕಸನಿಂದ ದೂರ ಓಡುತ್ತಲೇ ಬಂದೆ. ಆದರೆ ಅದು ತನ್ನೆರಡೂ ಕೈಗಳನ್ನು ಚಾಚಿ ಹಿಂಬಾಲಿಸುತ್ತಲೇ ಇದೆ. ಕಾಡುತ್ತಲೇ ಇದೆ’

– ಹೀಗೆನ್ನುತ್ತಾ ಕುಸಿದು ಬಿದ್ದ ಆ ಹುಡುಗಿಯ ಕಂಬನಿದುಂಬಿದ ಕಂಗಳಲ್ಲಿ ಕುಸಿದುಬಿದ್ದ ಕಟ್ಟಡದ ದೂಳಿನ ಕಣಗಳು ತೇಲುತ್ತಿದ್ದವು. ಕಣ್ಣೆದುರು ದೂಳುಸಿಕ್ತವಾದ ತನ್ನದೇ ಮದುವೆಯ ಉಡುಪು ಗೋಡೆಗೆ ನೇಣುಬಿದ್ದಂತೆ ಜೋಲುತ್ತಿತ್ತು. ಯುದ್ಧದ ದಾಳಿಗೆ ಕುಸಿದುಬಿದ್ದ ಆ ಕಟ್ಟಡ ಅವಳ ಇನಿಯ ಫಾದಿ ಕಷ್ಟಪಟ್ಟು ಅವಳಿಗಾಗಿ ಖರೀದಿಸಿದಅಲ್‌ ರಹಮಾ’ ಅಪಾರ್ಟ್‌ಮೆಂಟ್‌. ಆ ಕ್ಷಣದಲ್ಲಿ ಹುಡುಗಿಯ ಕಣ್ಣಿನಲ್ಲಿನ ದೂಳ ಕಣಗಳು, ಮನುಷ್ಯನ ಹಿಂಸಾವೃತ್ತಿಯ ವಿಕೃತ ಅಲೆಯಲ್ಲಿ ಕೊಚ್ಚಿಕೋದ ಆ ಕುಸುಮಕೋಮಲೆಯ ಕನಸಿನ ಬಿಂಬಗಳ ಹಾಗೆಯೂ ಕಾಣುತ್ತಿದ್ದವು.

ಆ ಹುಡುಗಿಯ ಹೆಸರು ಯಾರಾ. ಅಂದು ಎದೆಯೊಳಗಿನ ಬದುಕಿನೆಡೆಗಿನ ಭರವಸೆಯೇ ಕುಸಿದು ನೆಲಕ್ಕುರುಳಿದವಳನ್ನು ಭುಜ ಹಿಡಿದು ಎತ್ತಿದ ಹುಡುಗನ ಹೆಸರು ಫಾದಿ.

ನಿರ್ಜೀವ ಗಡಿಗಳು, ಕಣ್ಣಿಗೆ ಕಾಣದ ಧರ್ಮ, ದೇಶ, ಮತ ಹೀಗೆ ಹಲವು ಕಾರಣಗಳಿಗೆ ಹುಟ್ಟಿಕೊಳ್ಳುವ ಯುದ್ಧ ಮನುಷ್ಯರನ್ನು, ದೇಶಗಳನ್ನು ವಿಭಜಿಸುತ್ತವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಇದೇ ಯುದ್ಧದ ಕಾರಣದಿಂದ ಮನಸ್ಸುಗಳನ್ನು ಬೆಸೆದುಕೊಂಡವರೂ ಇದ್ದಾರೆ ಎಂದರೆ ನಂಬುತ್ತೀರಾ? ವ್ಯತ್ಯಾಸವಿಷ್ಟೆ. ಯುದ್ಧಪ್ರೇಮ ವಿಭಜಿಸಿದರೆ, ಯುದ್ಧ ವಿರೋಧಿ, ಜೀವನಪ್ರೀತಿ ಮನಸ್ಸುಗಳನ್ನುಬೆಸೆಯುತ್ತದೆ.

ಎಷ್ಟೋ ದೂರದಲ್ಲಿ ಇದ್ದ, ಎಂದಿಗೂ ಮುಖವನ್ನೇ ನೋಡದ ಯಾರಾ ಮತ್ತು ಫಾದಿ ಇಬ್ಬರ ಮನಸುಗಳನ್ನು ಪ್ರೇಮದ ಪರಿಮಳದಂಟಿನ ಮೂಲಕ ಜೋಡಿಸಿದ್ದು ಯುದ್ಧವೇ. ಈ ನಂಟಿನ ಅಂಟಿಗೆ ವಾಹಿನಿಯಾಗಿದ್ದು ಫೇಸ್‌ಬುಕ್‌ ಎನ್ನುವುದು ಇನ್ನೂ ಅಚ್ಚರಿಯ ವಿಷಯ.

ಗಾಜಾದ 22 ವರ್ಷ ವಯಸ್ಸಿನ ಫಾದಿ ಅಲ್-ಘಝಾಲ್‌ ಮತ್ತು ಸಿರಿಯನ್ ಪಟ್ಟಣದ ಖಾನ್ ಶೇಖೌನ್‌ನ 21 ವರ್ಷ ವಯಸ್ಸಿನ ಯಾರಾ ಅಲ್-ಝೌಬಿ ನಡುವೆ ಫೇಸ್‌ಬುಕ್‌ ಮೂಲಕ ಸ್ನೇಹವಾಗಿತ್ತು. ಸ್ನೇಹ ಕ್ರಮೇಣ ಪ್ರೀತಿಯಾಗಿ ಬೆಳೆದಿತ್ತು. ಯುದ್ಧ ಭೂಮಿಯಲ್ಲೇ ಬದುಕುತ್ತಿದ್ದ ಈ ಇಬ್ಬರೂ ಮನುಷ್ಯಕ್ರೌರ್ಯದ ನಾನಾ ಮುಖಗಳನ್ನು ಕಂಡು ರೋಸಿಹೋಗಿದ್ದರು. ಪ್ರೇಮದ ಸಣ್ಣ ಎಳೆಗಾಗಿ ಹಸಿದಿದ್ದರು. ಲವ್‌ ಅಟ್ ಫಸ್ಟ್‌ ಸೈಟ್‌ ಅನ್ನುತ್ತಾರಲ್ಲಾ, ಅದು ಇಲ್ಲಿ ಲವ್‌ ಅಟ್‌ ಫೇಸ್‌ಬುಕ್‌ ಆಗಿ ಬದಲಾಗಿತ್ತು.

ಸಿರಿಯಾದಲ್ಲಿ ಸಂಘರ್ಷಗಳು ಮತ್ತು ಯುದ್ಧದಂತಹ ವಿದ್ಯಮಾನಗಳು ಈ ಇಬ್ಬರ ನಡುವಿನ ಸಂಬಂಧ ಬಲವಾಗಲು ಕಾರಣವಾದವು. 2008, 2012 ಮತ್ತು 2014 ರಲ್ಲಿ ಗಾಜಾದಲ್ಲಿ ನಡೆದ ಮೂರು ಯುದ್ಧಗಳಲ್ಲೂ ಫಾದಿ ಬದುಕುಳಿದಿದ್ದರು. ಯಾರಾ ವಾಸವಿದ್ದ ಪಟ್ಟಣದ ಮೇಲೆಯೂ ರಾಸಾಯನಿಕ ದಾಳಿ ನಡೆದಿತ್ತು. ಆಗ ಆಕೆ ಅನುಭವಿಸಿದ ನೋವು ಕಂಡು ಫಾದಿಗೆ ಯಾರಾ ಮೇಲಿದ್ದ ಪ್ರೀತಿ ಮತ್ತಷ್ಟು ಹೆಚ್ಚಾಯಿತು.

ಸಿರಿಯಾ ಮುತ್ತಿಗೆ ಹಾಕಿದ ಗಾಜಾ ಪಟ್ಟಿಯಲ್ಲೇ ವಾಸಿಸುತ್ತಿದ್ದ ಫಾದಿ, ಕೆಲವೇ ದಿನಗಳಲ್ಲಿ ಯಾರಾಗೆ ತಮ್ಮ ಪ್ರೇಮ ನಿವೇದನೆ ಮಾಡಿಕೊಂಡರು. ಮುಂದೆ ಎರಡೂ ಕುಟುಂಬಗಳು ಇವರಿಬ್ಬರ ಮದುವೆಗೆ ಪರಸ್ಪರ ಒಪ್ಪಿ ನಿಶ್ಚಿತಾರ್ಥಕ್ಕೂ ಸಿದ್ಧತೆ ನಡೆಸಿತು. ಐದು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರೂ, ಇವರು ಒಬ್ಬರನ್ನೊಬ್ಬರು ಭೇಟಿ ಮಾಡಿರಲಿಲ್ಲ. ಇಲ್ಲಿವರೆಗೂ ಎಲ್ಲ ವಿಚಾರಗಳೂ ಫೇಸ್‌ಬುಕ್‌ ಮೂಲಕವೇ ನಡೆದಿತ್ತು. ಈಗ ಮದುವೆಯ ಒಪ್ಪಿಗೆ ಸಿಕ್ಕಿದ ಮೇಲೆ ತನ್ನ ‍ಪ್ರೇಮಿ ಫಾದಿಯನ್ನು ಭೇಟಿಯಾಗಲು ಯಾರಾ ನಿರ್ಧರಿಸಿದರು.

ಸಂಕಷ್ಟದ ಪ್ರೇಮ ಪ್ರಯಾಣ:
ಪ್ರೇಮಿಗಳು ಸಾಗುವ ದಾರಿ ಸುಲಭದ್ದೇನೂ ಆಗಿರಲಿಲ್ಲ.ತನ್ನ ತವರಾದ ವಾಯವ್ಯ ಸಿರಿಯಾದಿಂದ ನಿರ್ಬಂಧಿತ ಗಾಜಾ ಪಟ್ಟಿಗೆ ಮದುವೆಯ ಸಾಮಾನು, ಉಡುಪು, ಕಸೂತಿ, ಸರಕುಗಳೊಂದಿಗೆ ಯಾರಾ ಪ್ರಯಾಣ ಬೆಳೆಸಿದಳು. ಹಲವು ಮನವಿಗಳ ನಂತರ, ರಾಫಾ ಗಡಿ ದಾಟಿ, ಗಾಜಾ ಪಟ್ಟಿ ಪ್ರವೇಶಕ್ಕೆ ಯಾರಾಳಿಗೆ ಈಜಿಪ್ಟಿನ ಅಧಿಕಾರಿಗಳು ಅನುಮೋದನೆ ನೀಡಿದರು.ಎಲ್ಲರ ಎದೆಯೊಳಗೂ ಚಿಗುರಲು ಕಾದಿರುವ ಪ್ರೇಮದ ಬೀಜವೊಂದು ಇದ್ದೇ ಇರುತ್ತದಲ್ಲವೇ? ಫಾದಿ–ಯಾರಾ ಪ್ರೇಮ ಕಥೆ ಕೇಳಿದವರೆಲ್ಲ ಈಕೆಯ ಬೆಂಬಲಕ್ಕೆ ನಿಂತರು. ಸಿರಿಯಾದಿಂದ ಗಾಜಾಗೆ ಹೋಗಲು ನೆರವಾದರು. ಈಜಿಪ್ಟ್‌ ಪ್ರವೇಶಕ್ಕೆ ಬೇಕಾದ ವೀಸಾ ಪಡೆಯಲು ಮೂರು ವರ್ಷಗಳೇ ಬೇಕಾಯಿತು. ವೀಸಾ ಸಿಕ್ಕ ಕೂಡಲೇ ಯಾರಾ ತಡ ಮಾಡದೆ, ತನ್ನ ಸಾಮಾನುಗಳ ಜೊತೆ ಈಜಿಪ್ಟ್‌ಗೆ ಹೊರಟಳು. ಅಲ್ಲಿಂದ ಗಾಜಾ ತಲುಪಲು ಅನೇಕ ದಿನ ದಣಿವರಿಯದೆ ಪ್ರಯಾಣ ಬೆಳೆಸಿದಳು.

ಗೆಳೆಯನ ಭೇಟಿಗಾಗಿ ಹೊರಟ ದಾರಿಯೇನೂ ಹೂವಿನ ಹಾದಿಯಾಗಿರಲಿಲ್ಲ.ರಸ್ತೆಯುದ್ದಕ್ಕೂ ಯುದ್ಧಭೀತಿ, ಶೆಲ್ ದಾಳಿಗಳು. ಮತ್ತೆ ಮತ್ತೆ ಅಲ್ಲಲ್ಲಿ ಭದ್ರತಾ ತಪಾಸಣೆ... ಚಿತ್ರವಿಚಿತ್ರ ಪ್ರಶ್ನೆಗಳು ಪರೀಕ್ಷೆ.. ಎಲ್ಲವನ್ನೂ ಎದುರಿಸಿ ಹೆಜ್ಜೆ ಹಾಕಿದಳು ಯಾರಾ. ಈ ಎಲ್ಲ ಸಂಕಷ್ಟಗಳ ದಾರಿಯ ಕೊನೆಯಲ್ಲಿ ತನಗಾಗಿ ಫಾದಿ ಕಾದಿರುತ್ತಾನೆ ಎಂಬ ಒಂದೇ ಒಂದು ಆಸೆ ಅವಳನ್ನು ಕೈ ಹಿಡಿದು ನಡೆಸುತ್ತಿತ್ತು.

ಅಂತೂ ಹರಸಾಹಸದಿಂದ ಗಡಿದಾಟಿ ನವೆಂಬರ್‌ 8ರ ಮಧ್ಯರಾತ್ರಿ ಗಾಜಾ ನಗರಕ್ಕೆ ಮೊದಲ ಹೆಜ್ಜೆ ಇಡುತ್ತಿದ್ದಂತೆ ಆಕೆಯ ಕಣ್ಣಾಲಿಗಳು ತೇವವಾದವು. ತುಳುಕುತ್ತಿದ್ದ ಕಂಗಳಲ್ಲಿ ತುಂಬಿನಿಂತಿದ್ದ ಫಾದಿಯ ಬಿಂಬ ಅದುವರೆಗಿನ ಎಲ್ಲ ನೋವುಗಳನ್ನೂ ಕ್ಷಣಾರ್ಧದಲ್ಲಿ ಮರೆಸಿತ್ತು. ಈ ಐದು ವರ್ಷಗಳಲ್ಲಿ ಫಾದಿ, ಮಿಠಾಯಿ ಅಂಗಡಿಯಲ್ಲಿ ಕೆಲಸ ಮಾಡಿ, ಹಣ ಸಂಪಾದನೆ ಮಾಡಿ ಗಾಜಾ ನಗರದಲ್ಲಿ ಸ್ವಂತ ಅಪಾರ್ಟ್‌ಮೆಂಟ್‌ ಖರೀದಿಸಿ, ‘ಅಲ್‌ ರಹಮಾ’ ಎಂದು ಹೆಸರಿಟ್ಟಿದ್ದ. ಗಾಜಾ ನಗರಕ್ಕೆ ಬಂದ ಯಾರಾ, ಅದೇ ಮನೆಯಲ್ಲೇ ತನ್ನ ಪ್ರಿಯಕರನನ್ನು ಭೇಟಿಯಾದಳು.

ತಮ್ಮದು ಐದು ವರ್ಷಗಳ ಫೇಸ್‌ಬುಕ್‌ ಪ್ರೇಮವಾದರೂ, ಫಾದಿ ಭವಿಷ್ಯದ ಬದುಕಿನ ಬಗ್ಗೆ ಸಾಕಷ್ಟು ಯೋಚನೆ, ಯೋಜನೆ ಹಾಕಿಕೊಂಡಿದ್ದ. ಈ ಎಲ್ಲವನ್ನೂ ಯಾರಾಳೊಂದಿಗೆ ಹಂಚಿಕೊಂಡಿದ್ದ. ನವೆಂಬರ್‌ 18ರಂದು ವಿವಾಹವೂ ನಿಶ್ಚಯವೂ ಆಗಿತ್ತು. ಅಂದು ಫಾದಿಯ ಜನ್ಮ ದಿನವೂ ಹೌದು. ಹೊಸ ಜೀವನದ ಸಂಭ್ರಮದ ಕನಸು ಕಾಣುತ್ತಿದ್ದ ಅವರಿಗೆ ಮತ್ತೊಂದು ದೊಡ್ಡ ಅಘಾತ ಎದುರಾಯಿತು. ಮದುವೆ ಇನ್ನು ಆರು ದಿನಗಳಿವೆ ಎನ್ನುವಾಗ ಇಸ್ರೇಲ್‌ ಪಡೆಗಳು ಗಾಜಾ ಪಟ್ಟಿ ಸುತ್ತ ನಡೆಸಿದ ವಾಯುದಾಳಿಗೆ, ಒಂಬತ್ತು ಬೃಹತ್‌ ಕಟ್ಟಡಗಳು ನೆಲಕಚ್ಚಿದವು. ಅವುಗಳಲ್ಲಿ ‘ಅಲ್‌ ರಹಮಾ’ ಕಟ್ಟಡ ಕೂಡ ಒಂದು. ಆ ಕಟ್ಟಡ ಕುಸಿದರೂ, ಈ ಪ್ರೇಮಿಗಳು ಬಚಾವ್‌ ಆದರು. ಅಲ್ಲಿಂದ ಫಾದಿ ಯಾರಾಳೊಂದಿಗೆ ತನ್ನ ಚಿಕ್ಕಮ್ಮನ ಮನೆಯಲ್ಲಿ ಆಶ್ರಯ ಪಡೆದರು. ‌

ಯುದ್ಧದ ಗಲಾಟೆ ಮುಗಿದ ಎರಡು ದಿನಗಳ ನಂತರ ಅಪಾರ್ಟ್‌ಮೆಂಟ್‌ಲ್ಲಿದ್ದ ಅಲ್- ರಹಮಾ ನೋಡಲು ಬಂದಾಗ, ಇಡೀ ಕಟ್ಟಡ ನೆಲಸಮವಾಗಿತ್ತು. ಅದರಲ್ಲಿಯೇ ಅವರ ಕನಸುಗಳು ನುಚ್ಚನೂರಾಗಿದ್ದವು. ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಕ್ಕಿದ್ದ ಯಾರಾಳ ಮದುವೆಯ ಗರ್ದಿನ ಉಡುಪುಗಳೇ ಆ ಎಳೆಯ ಜೋಡಿಗಳ ಮನಸ್ಸುಗಳ ಛಿದ್ರತೆಯನ್ನೂ ಸೂಚಿಸುತ್ತಿರುವಂತಿತ್ತು.

ಆದರೆ ಯುದ್ಧ ಜಗತ್ತಿನ ಭೌತಿಕ ಚಹರೆಗಳನ್ನು ನಾಶಮಾಡಬಹುದು; ಮನಸ್ಸಿನ ಪ್ರೇಮದ ಸೆಲೆಗಳನ್ನಲ್ಲವಲ್ಲ. ಅಂದು ಕುಸಿದುಬಿದ್ದ ಕಟ್ಟಡದ ಎದುರು ಮಂಡಿಯೂರಿ ಕೂತ ಯಾರಾಳನ್ನು ಫಾದಿ ಹೆಗಲು ಕೊಟ್ಟು ಎಬ್ಬಿಸಿದ್ದ. ಭುಜ ಹಿಡಿದು ನಿಧಾನಕ್ಕೆ ನಡೆಸಿಕೊಂಡು ಹೋದ. ಅವರ ಆ ನಡಿಗೆ ಸರ್ವನಾಶದಿಂದ ಜೀವಪ್ರೀತಿಯ ಕಡೆಗಿನ ನಡಿಯೆಯಂತಿತ್ತು. ಹೊಸ ಕನಸಿನ ಹಸಿರುತುಂಬಿದ ನಂದನವನವೊಂದು ಆ ಪ್ರೇಮಪಕ್ಷಿಗಳನ್ನು ಕೈ ಬೀಸಿ ಕರೆಯುತ್ತಿತ್ತು. ಅವರು ಅಲ್ಲಿಂದ ಎಲ್ಲಿಗೋ ಹೊರಟು ಹೋದರು. ಆದರೆ ಯುದ್ಧಭೂಮಿಯಲ್ಲಿ ಮದ್ದುಗುಂಡುಗಳ ದಾಳಿಯ ನಡುವೆಯೇ ಅರಳಿದ ಆ ಪ್ರೇಮಕುಸುಮದ ಕತೆಯಂತೂ ಗಾಜಾ ಜನರ ನೆನಪಿನಲ್ಲಿ ಇನ್ನೂ ಹಾಗೆಯೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT