ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಟ್‌ ಕ್ರಿಸ್‌ಮಸ್‌

Last Updated 20 ಡಿಸೆಂಬರ್ 2018, 19:39 IST
ಅಕ್ಷರ ಗಾತ್ರ

ನಗರದಲ್ಲಿ ಕ್ರಿಸ್‌ಮಸ್‌ ಸಡಗರ ದಿನೇ ದಿನೇ ಹೆಚ್ಚಾಗುತ್ತಿದೆ. ಇಲ್ಲಿರುವ ನೂರಾರು ಚರ್ಚ್‌ಗಳು ಕ್ರಿಸ್‌ಮಸ್‌ ಸಲುವಾಗಿ ಡಿಸೆಂಬರ್‌ ತಿಂಗಳಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಅಂತೆಯೇ ಕೆಲ ಚರ್ಚ್‌ಗಳಲ್ಲಿ ವೈಟ್‌ ಕ್ರಿಸ್‌ಮಸ್‌ ಕೂಡ ವಿಶೇಷ ಆಚರಣೆ.

ಕೆಲ ಚರ್ಚ್‌ಗಳು ವೈಟ್‌ ಕ್ರಿಸ್‌ಮಸ್‌ ಅನ್ನು ಡಿಸೆಂಬರ್‌ ಆರಂಭದಲ್ಲಿಯೇ ಆಚರಿಸಿದ್ದರೆ ಇನ್ನೂ ಕೆಲ ಚರ್ಚ್‌ಗಳು ಕ್ರಿಸ್‌ಮಸ್‌ ಹಿಂದಿನ ಒಂದೆರಡು ದಿನಗಳಲ್ಲಿ ಆಚರಿಸುತ್ತವೆ.

ನಗರದಲ್ಲಿ ಹಡ್ಸನ್‌ ವೃತ್ತದಲ್ಲಿರುವ ‘ಹಡ್ಸನ್‌ ಚರ್ಚ್‌’ನಲ್ಲಿ ಇದೇ 23ರಂದು ‘ವೈಟ್‌ ಕ್ರಿಸ್‌ಮಸ್‌’ ಆಚರಿಸಲಾಗುತ್ತಿದೆ. ಕ್ರಿಸ್‌ಮಸ್‌ ಹಬ್ಬದ ದಿನವಾದ ಡಿ. 25ರಂದು ಸಾಮಾನ್ಯವಾಗಿ ಆರಾಧನೆ, ಪೂಜೆ, ಭಜನೆಗಳು ನಡೆಯುತ್ತವೆ. ಅದಕ್ಕಿಂತ ಹೆಚ್ಚಿನ ಸಂಭ್ರಮ, ಸಡಗರ ‘ವೈಟ್‌ ಕ್ರಿಸ್‌ಮಸ್‌’ ಆಚರಣೆ ಸಂದರ್ಭದಲ್ಲಿ ಕಂಡು ಬರುತ್ತದೆ.

ಕನ್ನಡದ ಮಾತೃಚರ್ಚ್‌ ಎಂದು ಕರೆಯಲಾಗುವ ಈ ಚರ್ಚ್‌ನಲ್ಲಿ ಒಂದೂವರೆ ದಶಕದಿಂದೀಚೆಗೆ ‘ವೈಟ್‌ಕ್ರಿಸ್‌ಮಸ್‌’ ಆಚರಣೆ ನಡೆಯುತ್ತಿದ್ದು, ಹೆಚ್ಚು ಜನಪ್ರಿಯವಾಗಿದೆ. ಅಂದು ಕ್ರಿಸ್ತನ ಆರಾಧನೆಯ ಜತೆಗೆ ವಿಶೇಷ ಸ್ತಬ್ಧಚಿತ್ರಗಳ ಪ್ರದರ್ಶನ ಇರುತ್ತದೆ. ಮಹಿಳಾ ಸಂಘ, ಯುವ ಸಮುದಾಯ ಹಾಗೂ ಶಾಲಾ ಮಕ್ಕಳು ಪ್ರತ್ಯೇಕವಾಗಿ ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕಿಡುವುದು ವಿಶೇಷ.

ಕ್ರಿಸ್ತನ ಜನನವನ್ನು ನೆನಪಿಸುವ ಗೋದ್ಲಿ ಮತ್ತು ಹಟ್ಟಿಯನ್ನು ಆಕರ್ಷಕವಾಗಿ ನಿರ್ಮಿಸಿ ಈ ಸಂದರ್ಭದಲ್ಲಿ ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಏಸುವಿನೊಂದಿಗೆ ಮೇರಿ, ಜೋಸೆಫ್‌, ಕುರಿಗಳೊಂದಿಗೆ ಕುರುಬರು ಇರುವ ಬೊಂಬೆಗಳು ಇರುತ್ತವೆ ಎನ್ನುತ್ತಾರೆ ಚರ್ಚ್‌ನ ಗೌರವ ಕಾರ್ಯದರ್ಶಿ ಪಿ. ಸತೀಶ್‌.

ಅಂದು 10 ವರ್ಷದೊಳಗಿನ ಮಕ್ಕಳಿಗೆ ಕ್ರಿಸ್‌ಮಸ್‌ ಉಡುಗೊರೆ ನೀಡಲಾಗುತ್ತದೆ. ಚರ್ಚ್‌ನ ಎಲ್ಲ ಸದಸ್ಯರಿಗೆ ಕೇಕ್‌, ಪಪ್ಸ್‌ನ ವಿತರಣೆಯೂ ಇರುತ್ತದೆ.

ಕ್ರಿಸ್‌ಮಸ್‌ ಹ್ಯಾಂಪರ್‌ ಕೇಕ್‌ ಡ್ರಾ ಕೂಡ ವೈಟ್‌ಕ್ರಿಸ್‌ಮಸ್‌ ದಿನದಂದು ಇರುತ್ತದೆ. 1ನೇ ಬಹುಮಾನ 4 ಕೆ.ಜಿ ಕೇಕ್‌, 2ನೇ ಬಹುಮಾನ 3 ಕೆ.ಜಿ ಕೇಕ್‌, 3ನೇ ಬಹುಮಾನ 2 ಕೆ.ಜಿ ಕೇಕ್‌ ಹಾಗೂ ಸಮಾಧಾನಕರ ಬಹುಮಾನವಾಗಿ ತಲಾ 1 ಕೆ.ಜಿ ಕೇಕ್‌ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಏನಿದು ವೈಟ್‌ ಕ್ರಿಸ್‌ಮಸ್‌?: ಯುರೋಪ್‌ ಮತ್ತು ಅಮೆರಿಕದಲ್ಲಿ ಡಿಸೆಂಬರ್‌ ತಿಂಗಳಿನಲ್ಲಿ ಹೆಚ್ಚಾಗಿ ಹಿಮಪಾತವಾಗುತ್ತದೆ. ಹಾಗಾಗಿ ಈ ತಿಂಗಳಲ್ಲಿ ಒಂದು ದಿನವನ್ನು ವೈಟ್‌ ಕ್ರಿಸ್‌ಮಸ್‌ ಆಗಿ ಆಚರಿಸಲಾಗುತ್ತದೆ. ಆ ಸಂಪ್ರದಾಯ ಭಾರತದಲ್ಲೂ ಕೆಲ ಚರ್ಚ್‌ಗಳಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT