ಬೇಡವೆಂದವಳೇ ಬಾಳಿಗೆ ಬೆಳಕಾದಳು

7

ಬೇಡವೆಂದವಳೇ ಬಾಳಿಗೆ ಬೆಳಕಾದಳು

Published:
Updated:

ಸಾರಿಗೆ ಸಂಸ್ಥೆಯಲ್ಲಿ ಕಿರಿಯ ಸಹಾಯಕನಾಗಿ ಸೇರಿದ ಅಣ್ಣನಿಗೆ ಕನ್ಯಾನ್ವೇಷಣೆಯಲ್ಲಿ ಕನ್ಯೆ ಬೇಗನೇ ದೊರಯದಿದ್ದಾಗ ಅಪ್ಪ ಅವ್ವ ಕಂಗಾಲಾಗಿದ್ದರು. 

ಐವತ್ತು ಕನ್ಯೆ ನೋಡಿದ ಮೇಲೆ ಅವನು ಒಪ್ಪಿಗೆ ನೀಡಿದ. ಅದರ ಜೊತೆಗೆ ನನಗೂ ಕನ್ಯೆ ಹುಡುಕಲು ಆರಂಭಿಸಿದರು. ನನ್ನಣ್ಣ ‘ನೋಡಪ್ಪಾ, ಗರಗದಲ್ಲಿ ನಮ್ಮ ಗೆಳೆಯನ ತಂಗಿ ಇದ್ದಾಳೆ ನೋಡಿ ಬರೋಣವೇ’ ಅಂದಾಗ ನಾನು ಖಡಾಖಂಡಿತವಾಗಿ ‘ಬೇಡಣ್ಣಾ... ಅವಳ ಅಣ್ಣಾ ನಿನ್ನ ಗೆಳೆಯ. ನೀವಿಬ್ಬರೂ ಆತ್ಮೀಯರು. ಒಂದು ವೇಳೆ ನೋಡಿ ಬಂದ್ವಿ ಅಂತಿಟ್ಕೋ. ಆಗವಳು ನನ್ನ ಮನಸ್ಸಿಗೆ ಬರದಿದ್ದರೇ...?. ನಿಮ್ಮ ಸ್ನೇಹಕ್ಕೆ ಕುಂದುಂಟಾಗುತ್ತದೆ. ನಿಮ್ಮಲ್ಲಿ ಆತ್ಮೀಯತೆ ಮಾಯವಾಗಿ ಕಸಿವಿಸಿ ಮೂಡುತ್ತದೆ. ಬೇಡ’ ಎಂದೆ. ಮತ್ತೆ ಕನ್ಯಾ ಬೇಟೆಗೆ ಇಳಿದೆವು.

ಹೀಗೆ ಹದಿನೈದಿಪ್ಪತ್ತು ಕನ್ಯಾಮಣಿಗಳ ಮನೆ ಕದ ತಟ್ಟಿ ನಿರಾಸೆಯಾಗಿ ‘ಉಸ್ಸಪ್ಪಾ...’ ಎಂದು ಬಳಲಿದಾಗ ಅಣ್ಣ ನನ್ನಲ್ಲಿ  ‘ಈಗಲಾದರೂ ಏನಂತಿಯಪ್ಪಾ..! ಗೆಳೆಯನ ತಂಗಿಯನ್ನು ನೋಡಿ ಬರೋಣವೇ...?’ ಎಂದು ಹೇಳಿದಾಗ ನಾನು ಬೇರೆ ದಾರಿಕಾಣದೆ ‘ನನ್ನದು ಒಂದು ಕಂಡೀಶನ್. ಕನ್ಯೆ ನೋಡಲು ನಾವಿಬ್ಬರೇ ಹೋಗೋಣ. ಬೇರೆ ಯಾರೂ ಬೇಡ’ ಎಂದು ಮನವಿ ಇಟ್ಟಾಗ ‘ಆಯ್ತಪ್ಪಾ' ಎಂದ.

ನಮ್ಮೂರು ಮುಳಗುಂದದಿಂದ ನೂರು ಕಿ.ಮೀ ದೂರ ಇರುವ ಗರಗಕ್ಕೆ ಇಳಿದೆವು. ಪ್ಯಾಂಟ್ ಶರ್ಟ್‌ ಹಾಕಿಕೊಂಡು ಸ್ವಲ್ಪ ಜೋರಾಗಿದ್ದ ನಮ್ಮನ್ನು ಕಂಡ ಅಲ್ಲಿ ಜನ ಕಕ್ಕಾಬಿಕ್ಕಿಯಾಗಿ ನೋಡಹತ್ತಿದರು. ಗ್ರಾಮೀಣ ಗಟಿದಡಿ ಸೀರೆಯಲ್ಲಿ ಸೇಬು ಹಣ್ಣಿನ ಬಣ್ಣದ ಬೆಡಗಿ ತನ್ನ ಪ್ರೇಮ(ಕಳ್ಳ)ನೋಟ ಬೀರಿದಾಗ ನರಪೇತಲನಾಗಿದ್ದ (ಮೂವತ್ತೇಳು ಕೆ.ಜಿ) ನಾನು ಕುಸಿದು ಬೀಳುವದೊಂದೇ ಬಾಕಿ. ‘ಹುಡುಗಿ ಒಪ್ಪಿಗೆ’ ಎಂದು ನನ್ನಣ್ಣನಿಗೆ ಫಲಿತಾಂಶ ತಿಳಿಸಿದೆ. ಕೇವಲ ಹತ್ತನೇ ತರಗತಿ ಓದಿ ಸಣ್ಣ ಕಿರಾಣಿ ಅಂಗಡಿ ನಡೆಸುತ್ತಿದ್ದ ನನ್ನ ಮನೆಗೆ ಮನದನ್ನೆ ಪ್ರವೇಶ ಮಾಡಿದಳು. ಒಂದು ವರ್ಷ ಒಂದು ತಿಂಗಳಿಗೆ ನನಗೆ ಬೆಂಗಳೂರಲ್ಲಿ ಕಂಡಕ್ಟರ್ ನೌಕರಿ ಸಿಕ್ಕಿತು. ನೌಕರಿ ಸೇರಿ ಎರಡು ತಿಂಗಳಿಗೆ ‘ಅಪ್ಪನ ಪಟ್ಟ’. 

ಮಹಾಂತೇಶ ವೀ.ಕೋಳಿವಾಡ, ನವನಗರ ಹುಬ್ಬಳ್ಳಿ

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !