ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬಾಲಕಿ ಭಾರತದ ಕಿರಿಯ ಕಾದಂಬರಿಕಾರ್ತಿ!

Last Updated 15 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಶ್ರಿಯಾದಿತಾ ತನ್ನ ಮೊದಲನೆಯ ಕಾದಂಬರಿ ‘ಸೇಸೋಸ್ ಡ್ರೀಮ್ ಅಡ್ವೆಂಚರ್’ ಬರೆದಾಗ ಆಕೆ ಕೇವಲ ಎಂಟು ವರ್ಷದ ಬಾಲಕಿ. ಹದಿನಾಲ್ಕು ಅದ್ಯಾಯಗಳ ಆ ಕಾದಂಬರಿ 2016 ರಲ್ಲಿ ಧಾರವಾಡದಲ್ಲಿ ಬಿಡುಗಡೆಯಾದಾಗ, ಆಕೆ ಭಾರತದ ಅತ್ಯಂತ ಕಿರಿಯ ಕಾದಂಬರಿಕಾರ್ತಿ!

ಈಗ ಶ್ರಿಯಾದಿತಾ ಹತ್ತು ವರ್ಷದ ಬಾಲಕಿ. ಬೆಂಗಳೂರಿನ ಸರ್ಜಾಪುರದಲ್ಲಿರುವ ‘ಗ್ರೀನವುಡ್ ಹೈ’ ಶಾಲೆಯಲ್ಲಿ ಗ್ರೇಡ್-5ರ ವಿದ್ಯಾರ್ಥಿನಿ. ಮೀರಾ ಹಾಗೂ ಪ್ರವೀಣ್ ರಾವ್ ಪುತ್ರಿ. ಈ ಬಾಲಕಿಯ ಮತ್ತೆರಡು ಕಾದಂಬರಿಗಳು ಪ್ರಕಟಣೆಗೆ ಸಿದ್ಧಗೊಳ್ಳುತ್ತಿವೆ. ಒಂದು ಕವನ ಸಂಕಲನ ಹಾಗೂ ಕಥಾ ಸಂಕಲನಗಳನ್ನು ಹೊರತರುವಲ್ಲಿ ನಿರತಳಾಗಿದ್ದಾಳೆ. ಚೆಸ್ ಆಟಗಾರ್ತಿ, ಈಜುಪಟು, ಭರತನಾಟ್ಯ ಕಲಾವಿದೆ. ಈ ಬಾಲಕಿಯಲ್ಲಿ ಒಬ್ಬ ಫಿಲ್ಮ್ ಮೇಕರ್ ಕೂಡ ಇದ್ದಾಳೆ.

‘ಇನ್ನೂ ಶಾಲೆಯ ಮೆಟ್ಟಿಲು ತುಳಿಯವ ಮೊದಲೇ ಆಕೆ ಪುಸ್ತಕ ಓದುವುದನ್ನು ಕರಗತ ಮಾಡಿಕೊಂಡಿದ್ದಳು. ಆಕೆಯದ್ದು ಅದ್ಬುತ ಗ್ರಹಿಕೆ. ಆಕೆಗೆ ಒಂದೂವರೆ ವರ್ಷ ತುಂಬುವ ಹೊತ್ತಿಗೆ ನಂಬಲಸದಳ ಶಬ್ದಸಂಗ್ರಹ ಆಕೆಯ ನೆನಪಿನಲ್ಲಿತ್ತು’. ಅವಳು ಫಾಸ್ಟ್ ಲರ್ನರ್’ ಎಂದು ನೆನಪಿಸಿಕೊಳ್ಳುತ್ತಾರೆ ಶ್ರಿಯಾದಿತಾಳ ಅಮ್ಮ ಡಾ ಮೀರಾ.

ಓದುವುದು ಆಕೆಗೆ ಪ್ರಿಯವಾದ ಹವ್ಯಾಸ. ಹೀಗಾಗಿ ಮೀರಾ ತನ್ನ ಮಗಳಿಗೆ ಸಾಹಿತ್ಯದ ಪುಸ್ತಕಗಳನ್ನು ಕೊಟ್ಟು ಓದುವಂತೆ ಪ್ರೇರೇಪಿಸುತ್ತಿದ್ದರು. ಪ್ರತಿ ರಾತ್ರಿ ಮಲಗುವ ಮುನ್ನ ಕಥೆಯೊಂದನ್ನು ಹೇಳುತ್ತಿದ್ದರು. ಆ ಎಲ್ಲಾ ಕ್ರಿಯೆಗಳು ಆಕೆಯಲ್ಲಿದ್ದ ಲೇಖಕಿಯನ್ನು ಹೊರತರಲು ಸಹಾಯ ಮಾಡಿದವು.

‘ಗ್ರೀನವುಡ್ ಹೈ’ ಶಾಲೆಯಲ್ಲಿ ಪ್ರಕಟಗೊಳ್ಳುವ ಮ್ಯಾಗಝಿನ್‍ನಲ್ಲಿ ಶ್ರಿಯಾದಿತಾಳ ಕಥೆ ಹಾಗೂ ಕವನಗಳು ಟಾಪ್ ರೇಟೆಡ್. ಫೋಟೊಗ್ರಫಿ ಹಾಗೂ ವಿಡಿಯೋಗ್ರಫಿ ಕಲಿಯುತ್ತಿರುವ ಈ ಬಾಲಕಿಗೆ ಚಲನಚಿತ್ರ ನಿರ್ದೇಶಕಳಾಗುವ ಕನಸು. ಚಲನಚಿತ್ರ ರಂಗ ಆಕೆಯ ಕ್ರಿಯಾಶೀಲತೆಗೆ ತಕ್ಕುದಾದ ತಾಣ ಎಂಬುದ ಮೀರಾ ಅವರ ಗೃಹಿಕೆ.

‘ಪುಸ್ತಕಗಳು ಜ್ಞಾನ ನೀಡುತ್ತವೆ. ಓದು ಅನೇಕ ವಿಷಯಗಳ ತಿಳುವಳಿಕೆ ಸಹಾಯಕಾರಿ. ಓದಿನ ಜ್ಞಾನವನ್ನು ನಮಗೆ ಬೇಕಾದಾಗ ಉಪಯೋಗಿಸಬಹುದು. ಹೀಗಾಗಿ ಓದುವುದು ನನ್ನ ಇಷ್ಟದ ಕಾಯಕ’ ಎಂಬುದು ಶ್ರಿಯಾದಿತಾ ಮಾತು. ಶ್ರಿಯಾದಿತಾಳ ಅಜ್ಜಿ ಕನ್ನಡದ ಖ್ಯಾತ ಲೇಖಕಿ ಡಾ ವೀಣಾ ಶಾಂತೇಶ್ವರ್.

ಯುನಿವರ್ಸಿಟಿ ಆಫ್ ವೆಸ್ಟ್ ಲಂಡನ್ ನೆಡೆಸುವ ಲಂಡನ್ ಕಾಲೇಜ್ ಆಫ್ ಮ್ಯೂಸಿಕ್‌ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಪಡೆದದ್ದಕ್ಕೆ ಡಿಸ್ಟಿಂಕ್ಷನ್ ಸರ್ಟಿಫಿಕೆಟ್‌; ಪ ಮಾಡ್ರನ್‌ ಇಂಟರ್‍ನ್ಯಾಷನಲ್ ಸ್ಪೆಲ್ಲಿಂಗ್ ಬೀ ಕಾಂಪಿಟೇಷನ್ ಇನ್ ಏಷ್ಯಾ ಫಾರ್‌ ಸ್ಕೂಲ್ ಚಿಲ್ಡ್ರನ್ ಸ್ಪೆಲ್ಲಿಂಗ್ ಬೀ ಸ್ಪರ್ದೆಯಲ್ಲಿ ಚಾಂಪಿಯನ್‍ಷಿಪ್; ಕಲಾಲೋಕ ನೆಡೆಸಿದ ಸಾಲಂಘೈ ಪೂಜೈ ಭರತನಾಟ್ಯಮ್ ಕಾರ್ಯಕ್ರಮದಲ್ಲಿ ಸರ್ಟಿಫಿಕೇಟ್ ಆಫ್ ಡಿಸ್ಟಿಂಗ್ವಿಷ್ಡ್ ಪರ್ಫಾಮರ್‌; ಅಸೆಸ್ಮೆಂಟ್‌ ಆಫ್ ಸ್ಕೋಲಾಸ್ಟಿಕ್ ಸ್ಕಿಲ್ಸ್ ಥ್ರೂ ಎಜ್ಯುಕೇಷನಲ್ ಟೆಸ್ಟಿಂಗ್ ನಲ್ಲಿ ಸರ್ಟಿಫಿಕೆಟ್‌ ಆಫ್ ಡಿಸ್ಟಿಂಗ್ವಿಷ್ಡ್ ಪರಫಾಮನ್ಸ್; ಯುನೈಟೆಡ್ ಕರ್ನಾಟಕ ಚೆಸ್ ಅಸೋಷಿಯೇಷನ್ ಆಯೋಜಿಸುವ ಕರ್ನಾಟಕ ಸ್ಟೇಟ್ ಸ್ಕೂಲ್ಸ್ ಟೀಮ್ ಚೆಸ್ ಚಾಂಪಿಯನ್‍ಷಿಪ್‍ನಲ್ಲಿ ಮೆರಿಟ್ ಆಫ್ ಸರ್ಟಿಫಿಕೆಟ್‌. ಇವು ಇಲ್ಲಿಯ ತನಕ ಆಕೆಯ ಪ್ರತಿಭೆಗೆ ಸಂದ ಗೌರವಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT