ಮನಮೋಹಕ ಚಿತ್ರಗಳಿಗೆ ಪ್ರಶಸ್ತಿ

7

ಮನಮೋಹಕ ಚಿತ್ರಗಳಿಗೆ ಪ್ರಶಸ್ತಿ

Published:
Updated:
Deccan Herald

ಯೂಥ್ ಫೋಟೊಗ್ರಫಿ ಸೊಸೈಟಿಯು ಈಚೆಗೆ ಆಯೋಜಿಸಿದ್ದ 10ನೇ ‘ಅಂತರರಾಷ್ಟ್ರೀಯ ಡಿಜಿಟಲ್ ಛಾಯಾಚಿತ್ರ ಸ್ಪರ್ಧೆ’ಯ ವಿಜೇತರ ಪಟ್ಟಿಯನ್ನು ಪ್ರಕಟಿಸಿದೆ.

ಸ್ಪರ್ಧೆಯಲ್ಲಿ 16 ದೇಶಗಳ ಛಾಯಾಚಿತ್ರಕಾರರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗಿಯಾಗಿದ್ದ 3,639 ಚಿತ್ರಗಳ ಪೈಕಿ 86 ಚಿತ್ರಗಳು ವಿವಿಧ ರೀತಿಯ ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಆಯಾ ಚಿತ್ರಗಳ ಛಾಯಾಗ್ರಾಹಕರಿಗೆ ನಗರದಲ್ಲಿ ಶುಕ್ರವಾರ ಪ್ರಶಸ್ತಿ ಪ್ರದಾನ ಮಾಡಲಾಗಿದೆ.


ಹಾಂಕಾಂಗ್‌ನ ಎಚ್.ಡಬ್ಲ್ಯು.ಚಾನ್ ಅವರಿಗೆ ಪ್ರಶಸ್ತಿ ತಂದುಕೊಟ್ಟ ಚಿತ್ರ

ಉತ್ತಮ ಎಕ್ಸಿಬಿಟರ್, ಉತ್ತಮ ಭಾರತೀಯ ಎಕ್ಸಿಬಿಟರ್ ಮತ್ತು ಉತ್ತಮ ವೈಪಿಎಸ್‌ ಎಕ್ಸಿಬಿಟರ್ ಪ್ರಶಸ್ತಿಯನ್ನು ಕ್ರಮವಾಗಿ ಹಾಕಾಂಗ್‌ನ ಎಚ್.ಡಬ್ಲ್ಯು.ಚಾನ್, ಕೋಲ್ಕತ್ತಾದ ಪಾರ್ಥ ರಾಯ್ ಹಾಗೂ ಬೆಂಗಳೂರಿನ ಮೊಹಮ್ಮದ್ ಅರ್ಫಾನ್ ಆಸಿಫ್ ಪಡೆದುಕೊಂಡಿದ್ದಾರೆ. ಎಫ್‌ಐಎಪಿ ಗೋಲ್ಡ್ ಪ್ರಶಸ್ತಿಯು ಬೆಂಗಳೂರಿನ ಪ್ರೇಮಾ ಕಾಕಡೆ ಹಾಗೂ ನಿಖಿಲ್ ಭಕ್ತವತ್ಸಲ ಅವರಿಗೆ ದಕ್ಕಿದೆ. 

ಡಿಜಿಟಲ್ ಮತ್ತು ಮುದ್ರಣ ವಿಭಾಗ ಜೊತೆಗೂಡಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಛಾಯಾಚಿತ್ರ ಸಲಾನ್- ಸ್ಪರ್ಧೆಯ ತೀರ್ಪುಗಾರರಾಗಿದ್ದವರು ದೆಹಲಿಯ ಅದಿತ್ ಅಗರವಾಲ್, ಜೋಧ್‌ಪುರದ ಶಿವ್ ಜಿ ಜೋಷಿ, ಬಿ.ಶ್ರೀನಿವಾಸ, ಎ.ಜಿ.ಲಕ್ಷ್ಮೀನಾರಾಯಣ್, ಎಂ.ಎನ್.ಜಯಕುಮಾರ್ ಮತ್ತು  ಡಾ.ಮನೋಜ್ ಸಿ. ಸಿಂದಗಿ. ಪ್ರಕೃತಿ, ಪ್ರವಾಸ, ಕಪ್ಪುಬಿಳುಪು ಹಾಗೂ ವರ್ಣರಂಜಿತ ಎಂಬ ನಾಲ್ಕು ವಿಭಾಗಗಳಿಗೆ ಸ್ಪರ್ಧೆ ಆಯೋಜಿಸಲಾಗಿತ್ತು.


ಕೋಲ್ಕತ್ತಾದ ಪಾರ್ಥ ರಾಯ್ ಅವರು ಸೆರೆಹಿಡಿದ ಚಿತ್ರ

ಪ್ರಶಸ್ತಿ ಪಡೆದುಕೊಂಡ ಚಿತ್ರಗಳು ಹಾಗೂ ಪ್ರದರ್ಶನಕ್ಕೆ ಅರ್ಹತೆ ಗಳಿಸಿದ ಚಿತ್ರಗಳನ್ನು ಚಿತ್ರಕಲಾ ಪರಿಷತ್‌ನಲ್ಲಿ ಆಗಸ್ಟ್ 19ರ ವರೆಗೆ ಪ್ರದರ್ಶನಕ್ಕೀಡಲಾಗಿದೆ.

‌47 ವರ್ಷಗಳ ಇತಿಹಾಸವುಳ್ಳ ನಗರದ ಯೂತ್ ಫೋಟೊಗ್ರಫಿಕ್ ಸೊಸೈಟಿಯು (ವೈಪಿಎಸ್) 35 ರಾಷ್ಟ್ರಮಟ್ಟದ ಮತ್ತು 10 ಅಂತರರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಸಲಾನ್-ಸ್ಪರ್ಧೆಗಳನ್ನು ಏರ್ಪಡಿಸಿದ ಖ್ಯಾತಿ ಹೊಂದಿದೆ.


ಬೆಂಗಳೂರಿನ ನಿಖಿಲ್ ಭಕ್ತ ವತ್ಸಲ್ ಅವರು ಸೆರೆಹಿಡಿದ ಚಿತ್ರ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !