ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನವರ ಸಿದ್ಧಿ

Last Updated 22 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಬಸವಣ್ಣ ‘ನವಯುಗ ನಿರ್ಮಾಪಕ’ ಎಂದು ಎಲ್ಲರೂ ಹೇಳುವುದುಂಟು. ಹಾಗೆಂದರೇನು? ಅವರು ಯಾವ ನವಯುಗವನ್ನು ನಿರ್ಮಾಣ ಮಾಡಿದರು?...

ಮಾನವನ ಜೀವನರಥಕ್ಕೆ ಧರ್ಮ, ನೀತಿ, ತತ್ತ್ವಗಳೆಂಬ ನೊಗ (ಯುಗ)ವನ್ನು ಕಟ್ಟಿ ಎಳೆದರು. ಧರ್ಮಕ್ಷೀರದಲ್ಲಿ ನೀತಿ ನವನೀತವನ್ನೇ ತೆಗೆದರು; ನೀತಿ ನವನೀತದಲ್ಲಿ ತತ್ತ್ವವೆಂಬ ತುಪ್ಪವನ್ನು ಅಭಿವ್ಯಕ್ತಗೊಳಿಸಿದರು. ಧರ್ಮವೇ ಅಂಗ, ನೀತಿಯೇ ಪ್ರಾಣ; ತತ್ತ್ವವೇ ಆತ್ಮವೆಂದು ಸಿದ್ಧಾಂತ ಮಾಡಿದರು. ಈ ಬಗೆಯಾಗಿ ಬಾಳಿನಲ್ಲಿ ಈ ಮೂರರ ಸಮನ್ವಯವನ್ನು ಸಾಧಿಸಿದರು. ಇದರಿಂದಾಗಿ ಕಲಿಯುಗ ಕೃತಯುಗವಾಯಿತು. ಯುಗಧರ್ಮವನ್ನು ನವೀಕರಿಸಿದರು.

– ಶ್ರೀ ಜ. ಚ. ನಿ.

(‘ಶ್ರೀಬಸವೇಶ್ವರರು’ ಕೃತಿಯಿಂದ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT