ಹಳೇ ಹಾಳೆಗಳ ಹೊಸ ಪುಸ್ತಕ!

ಬುಧವಾರ, ಜೂನ್ 19, 2019
32 °C
ಗುಜರಿ ಸೇರಲಿದ್ದ ಹಾಳೆಗಳಿಂದ ಪುಸ್ತಕ ತಯಾರಿಸಿ ಬಡ ಮಕ್ಕಳಿಗೆ ನೀಡಿದ ಸುಳ್ಯದ ಯುವ ಬ್ರಿಗೇಡ್

ಹಳೇ ಹಾಳೆಗಳ ಹೊಸ ಪುಸ್ತಕ!

Published:
Updated:

ಗುಜರಿ ಸೇರಲಿದ್ದ ಸುಮಾರು 60 ಸಾವಿರಕ್ಕೂ ಹೆಚ್ಚು ಕಾಗದದ ಹಾಳೆಗಳು, ಬಡ ವಿದ್ಯಾರ್ಥಿಗಳಿಗೆ ಪುಸಕ್ತಗಳಾಗಿವೆ. ಶಿಕ್ಷಣದ ಮಹತ್ವಾಕಾಂಕ್ಷಿ ಹೊತ್ತ ಈ ವಿದ್ಯಾರ್ಥಿಗಳಿಗೆ ಬರೆಯಲು ಸಹಕಾರಿಯಾಗಿದೆ. ಹೌದು, ಸುಳ್ಯದ ಯುವ ಬ್ರಿಗೇಡ್ ತಂಡವು ‘ನೋಟ್ ಪ್ಯಾಡ್ ಮ್ಯಾನ್’ ಯೋಜನೆಯಡಿ ಗುಜರಿ ಸೇರಲಿದ್ದ ಹಾಳೆಗಳನ್ನು ಸಂಗ್ರಹಿಸಿ, ನೋಟ್ ಪುಸ್ತಕ ಮಾಡಿ ನೀಡಿದೆ. ಎಲ್ಲೋ ಎಸೆದು ಗುಜರಿ ಅಂಗಡಿ ಸೇರುತ್ತಿದ್ದ ಪುಸ್ತಕದ ಖಾಲಿ ಹಾಳೆಗಳು ಒಂದಾಗಿ 100 ಪುಟದ ಸುಮಾರು 600 ಪುಸ್ತಕಗಳಾಗಿವೆ.

ಖಾಲಿ ಹಾಳೆಗಳೆಂದು ಎಸೆದು ಬಿಡಬೇಡಿ. ಸಂಗ್ರಹಿಸಿ ಇಡಿ. ಅದು ಪುಸ್ತಕವಾಗುತ್ತದೆ. ಬಡ ವಿದ್ಯಾರ್ಥಿಗಳಿಗೆ ಓದಲು ಸಹಾಯವಾಗುತ್ತದೆ. ಪರಿಸರವೂ ಉಳಿಯುತ್ತದೆ. ಇಂತಹದ್ದೊಂದು ವಿಶೇಷ ಯೋಚನೆಯನ್ನು ಯುವ ಬ್ರಿಗೆಡ್ ಮಾಡಿತ್ತು. ಮಾತ್ರವಲ್ಲ ಈ ವಿಷಯವನ್ನು ನೂರಾರು ಪೋಷಕರ ಮುಂದೆಟ್ಟಿತ್ತು. ಇದಕ್ಕೆ ಸ್ಪಂದನೆ ದೊರೆತಿತ್ತು. 

ಇದಕ್ಕಾಗಿ ವರ್ಷದ ಕೊನೆಗೆ ವಿವಿಧ ಶಾಲೆಗಳಿಗೆ, ಪೋಷಕರ ಮನೆಗೆ ಬ್ರಿಗೇಡ್‌ ತಂಡ ಭೇಟಿ ನೀಡಿತ್ತು. ಖಾಲಿ ಹಾಳೆಗಳನ್ನು ಸಂಗ್ರಹಿಸಿತ್ತು. ಅದನ್ನು ಸುಳ್ಯದ ಗಣೇಶ್ ಪ್ರಿಂಟರ್ಸ್ ಮಾಲೀಕರು ಸುಂದರವಾಗಿ ಜೋಡಿಸಿ ಕೊಟ್ಟರು. ಆಗ 100 ಪುಟದ 600 ಪುಸ್ತಕಗಳು ಸಿದ್ಧಗೊಂಡಿದ್ದವು. 

‘ನಾವು ಬಡಮಕ್ಕಳ ಜೊತೆ ಪರಿಸರಕ್ಕೂ ಕೊಡುಗೆ ನೀಡಿದ ತೃಪ್ತಿ ಇದೆ. ಇದೇ ದೇಶಸೇವೆ’ ಎಂದು ಸುಳ್ಯ ಯುವ ಬ್ರಿಗೆಡ್‌ನ ಶರತ್ ತಮ್ಮ ತಂಡದ ಕಾರ್ಯದ ಕುರಿತು ಸಂತಸ ವ್ಯಕ್ತಪಡಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !