ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಕ ವ್ಯಸನ ವಿರುದ್ಧದ ಅಂತರರಾಷ್ಟ್ರೀಯ ದಿನ 2022: ಏನಿದರ ಹಿನ್ನೆಲೆ?

ಅಕ್ಷರ ಗಾತ್ರ

ಬೆಂಗಳೂರು: ಪ್ರತಿವರ್ಷ ಜೂನ್‌ 26ನೇ ದಿನ ವಿಶ್ವದಾದ್ಯಂತ ಮಾದಕ ವ್ಯಸನ ಮತ್ತು ಮಾನವ ಕಳ್ಳಸಾಗಣೆ ವಿರೋಧಿ ದಿನವಾಗಿ ಆಚರಿಸಲಾಗುತ್ತದೆ. ಮಾನವ ಕಳ್ಳಸಾಗಣೆ ಮತ್ತು ಮಾದಕ ವ್ಯಸನ ಮುಕ್ತ ವಿಶ್ವವನ್ನಾಗಿಸುವ ದೃಷ್ಟಿಯಿಂದ ಈ ದಿನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ.

ಮಾದಕ ವ್ಯಸನದ ಪರಿಣಾಮಗಳ ಬಗ್ಗೆ ಮತ್ತು ಮಾನವ ಕಳ್ಳಸಾಗಣೆ ಬಗ್ಗೆ ಅರಿವು ಮೂಡಿಸಲು ವಿಶ್ವದಾದ್ಯಂತ ಅನೇಕ ಸಂಘಟನೆಗಳು ಈ ದಿನವನ್ನು ಆಚರಿಸುತ್ತವೆ. ಮಾದಕ ವ್ಯಸನದ ಸವಾಲುಗಳು ಮತ್ತು ಮಾನವೀಯ ಬಿಕ್ಕಟ್ಟಿನ ಕುರಿತು ಮಾತನಾಡುವುದೇ ಈ ವರ್ಷದ ಥೀಮ್‌ ಆಗಿದೆ.

ಕೋವಿಡ್‌ 19 ಜಾಗತಿಕವಾಗಿ ಆರೋಗ್ಯ ಬಿಕ್ಕಟ್ಟನ್ನು ತಂದೊಡ್ಡಿರುವ ನಡುವೆ ಅಫ್ಗಾನಿಸ್ತಾನ ಮತ್ತು ಉಕ್ರೇನ್‌ನಲ್ಲಿ ಸಂಭವಿಸಿರುವ ಮಾನವೀಯ ಬಿಕ್ಕಟ್ಟುಗಳ ಬಗ್ಗೆ ಗಂಭೀರ ಚಿಂತನೆಗೆ ಈ ಥೀಮ್‌ ಮೂಲಕ ಕರೆ ನೀಡಲಾಗಿದೆ.

1987, ಡಿಸೆಂಬರ್‌ 7ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು (ಯುಎನ್‌ಜಿಎ) ಮಾದಕ ವ್ಯಸನ ಮತ್ತು ಮಾನವ ಕಳ್ಳಸಾಗಣೆ ವಿಚಾರವನ್ನು ಮಹತ್ವವಾಗಿ ಪರಿಗಣಿಸಿ ಅದರ ವಿರುದ್ಧ ನಿರ್ಣಯ ಅಂಗೀಕರಿಸಲಾಯಿತು. ಜೂನ್‌ 26ನೇ ದಿನವನ್ನು ವಿಶ್ವದಾದ್ಯಂತ ಮಾದಕ ವ್ಯಸನ ಮತ್ತು ಮಾನವ ಕಳ್ಳಸಾಗಣೆ ವಿರುದ್ಧ ಜಾಗೃತಿ ಮೂಡಿಸುವ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.

18-19ನೇ ಶತಮಾನದ ಚೀನಾದ ರಾಜಕಾರಣಿ ಮತ್ತು ಚಿಂತಕ ಲಿನ್‌ ಜೆಕ್ಸು ಅವರ ಸ್ಮರಣಾರ್ಥವಾಗಿ ಜೂನ್‌ 26ನೇ ದಿನವನ್ನು ಆಯ್ಕೆ ಮಾಡಲಾಗಿದೆ. ಬ್ರಿಟಿಷ್‌ ವ್ಯಾಪಾರಿಗಳ ಮೂಲಕ ಚೀನಾಗೆ ಆಮದು ಮಾಡಿಕೊಳ್ಳಲಾಗಿದ್ದ ಸುಮಾರು 12 ಲಕ್ಷ ಕೆಜಿ ಗಾಂಜಾವನ್ನು (ಒಪಿಯಮ್‌) ಲಿನ್‌ ಜೆಕ್ಸು ಅವರು ನಾಶ ಪಡಿಸಿದ್ದರು. 1839, ಜೂನ್‌ 3ರಂದು ಆರಂಭಿಸಿ 23 ದಿನಗಳ ಕಾಲ ಗಾಂಜಾ ನಾಶಪಡಿಸುವ ಕಾರ್ಯಾಚರಣೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT