ಪರಸ್ಪರ ಅರ್ಥ ಮಾಡಿಕೊಳ್ಳುವ ಮದುವೆ

7

ಪರಸ್ಪರ ಅರ್ಥ ಮಾಡಿಕೊಳ್ಳುವ ಮದುವೆ

Published:
Updated:

ಮದುವೆ ಎಂದಾಕ್ಷಣ ನೆನಪಾಗುವುದು ಹಸಿರು ತೋರಣ, ಹೂ, ಪೂಜೆ, ಹೆಂಗಳೆಯರ ಘಲ್ ಘಲ್ ಎನ್ನುವ ಬಳೆ, ಗೆಜ್ಜೆನಾದ. ಆಡಂಬರದ ಆಚರಣೆಗಳಿಲ್ಲದೇ ನನ್ನ ಕನಸಿನ ಮದುವೆ ಸರಳವಾಗಿರಬೇಕು. ಅಂಗೈಯಲ್ಲಿರುವ ಮದರಂಗಿಯ ರಂಗಿನಲ್ಲಿ, ಮಲ್ಲಿಗೆ ಹೂಗಳ ಕಂಪಿನಲ್ಲಿ, ಹಸಿರು ಬಳೆಯ ನಾದದಲ್ಲಿ, ಮೊಗ್ಗಿನ ಜಡೆ ಹಾಕಿಕೊಂಡು, ನನ್ನಿಷ್ಟದ ನೀಲಿ ಬಣ್ಣದ ಸೀರೆ ಉಟ್ಟುಕೊಂಡಿರಬೇಕು. ಬಿಳಿ ಪಂಚೆಯಲ್ಲಿ ಮದುಮಗ ಕಂಗೊಳಿಸುತ್ತಿರಬೇಕು.ಎರಡೂ ಕುಟುಂಬ, ಸ್ನೇಹಿತರ, ಆಪ್ತರ ಮತ್ತು ದೇವರ ಸಮ್ಮುಖದಲ್ಲಿ, ದೇವಸ್ಥಾನದಲ್ಲಿ ಅಕ್ಷತೆ, ಹಾರೈಕೆಯೊಂದಿಗೆ ಪರಸ್ಪರ ಹಾರ ಬದಲಿಸಿಕೊಳ್ಳುವ ಮೂಲಕ ಮಾಂಗಲ್ಯವೆಂಬ ಮೂರು ಗಂಟು ನನ್ನ ಕತ್ತಿಗೆ ಬೀಳಬೇಕು. ಏಳು ಹೆಜ್ಜೆಯಿಟ್ಟು ಬಾಳ ಹೆಜ್ಜೆಯಿಡುವ ಬೆಸುಗೆಯಲ್ಲಿ ಬಾಳಬುತ್ತಿ ಸವಿಯುವ ಆಸೆ. ಜೀವ ಇರುವವರೆಗೂ ಜೊತೆಯಿರುವ ಕನಸು ನನ್ನದು.

ಮದುವೆ ಮನ-ಮನೆಗಳ ಮಿಲನ, ಅದು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬುದು ನಂಬಿಕೆ.  ಬಾಳನ್ನು ಅರ್ಥಪೂರ್ಣವಾಗಿಸುವ ದಾರಿಯಲ್ಲಿ ಜೊತೆಯಾಗಿ ಸಾಗಬೇಕು.
-ಬಸಮ್ಮ ಭಜಂತ್ರಿ, ಗದಗ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !