ಸರಳ ಮದುವೆ ಕನಸಾಗೇ ಉಳಿಯಿತು

7

ಸರಳ ಮದುವೆ ಕನಸಾಗೇ ಉಳಿಯಿತು

Published:
Updated:

ಮದುವೆ ಒಂದು ಸುಂದರ ಮಧುರ ಕ್ಷಣ! ನನ್ನ ಮದುವೆ ಸರಳವಾಗಿ ಬೌದ್ಧ ಸಂಪ್ರದಾಯದಂತೆ ಸರಳವಾಗಿ ನಡೆಯಬೇಕು ಎಂದು ನಾನು ಕನಸು ಕಂಡಿದ್ದೆ. ಆದರೆ ಆದ್ದುದೇ ಬೇರೆ! ನಾನು ಸರಳ ಮದುವೆ ಎಂದರೂ ಕೇಳದೇ ನನ್ನ ಮದುವೆ ದಿನ ಅರಶಿನ, ಕುಂಕುಮ, ವಿಭೂತಿ, ಎಣ್ಣೆ, ಸುರಗಿ ಸುತ್ತೋದು, ಕೊಡ ತರೋದು... ಹೀಗೆ ಶಾಸ್ತ್ರಗಳು ಆರಂಭವಾಗಿತ್ತು. 

ನನ್ನ ಮನಸ್ಸಿನ ಇಚ್ಛೆ ಆಗದೆ ಇದ್ದಾಗ ನನ್ನ ಮನಸ್ಸಿಗೆ ತುಂಬಾನೆ ಕಸಿವಿಸಿಯಾಗಿತ್ತು. ನಮ್ಮ ಚಿಕ್ಕಮ್ಮನಿಗೆ ಕರೆದು ಈ ಸಂಪ್ರದಾಯ ನನಗೆ ಇಷ್ಟವಿಲ್ಲ. ಈ ರೀತಿ ಮದುವೆ ಮಾಡುವುದಾದರೆ ನನಗೆ  ಮದುವೆಯೇ ಬೇಡ ! ಬೀಗರಿಗೆ ಹೇಳು ಇಲ್ಲಾ ನಾನೇ ಹೇಳುತ್ತೇನೆ ಎಂದು ಹಠ ಹಿಡಿದೆ. ಆಗ ಸಂಬಂಧಿಕರೆಲ್ಲಾ ಗಾಬರಿಯಿಂದ ‘ಏನು ತಲೆಗಿಲೆ ಕೆಟ್ಟಿದಿಯಾ ಮದುವೆ ಶಾಸ್ತ್ರ ನಡಿಯುತ್ತಿರಬೇಕಾದರೆ ಈ ರೀತಿ ಹೇಳಿದರೆ ಏನು ಗತಿ’ ಎಂದು ಗದರಿಸಿದರು. ಶಾಸ್ತ್ರಗಳ ಮಹತ್ವ ವಿವರಿಸಿದರು. ಎಲ್ಲರೂ ಹೇಳಿದಾಗ ಅನಿವಾರ್ಯವಾಗಿ ಒಪ್ಪಬೇಕಾಯಿತು. ಆದರೆ ನನ್ನಾಸೆಯಂತೆ ಸರಳವಾಗಿ ಮದುವೆ ನಡೆಯಲಿಲ್ಲವಲ್ಲಾ ಎಂಬ ಕೊರಗು ನನ್ನಲ್ಲಿ ಇನ್ನೂ ಇದೆ. ಈಗ ಮದುವೆಯಾಗಿ ಒಂದೂವರೆ ವರ್ಷ ಕಳೆಯಿತು.  
ಶಿವಾನಂದ ಹೊಸಮನಿ, ಕಲಬುರಗಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !