ಮುಳ್ಳಯ್ಯನಗಿರಿಯಲ್ಲಿ ಕನ್ನಡ ಬಾವುಟ!

ಆಫೀಸ್ ಅಲ್ಲಿ ಏನೋ ಒಂದು ಸುಳ್ಳು ಹೇಳಿ ಶನಿವಾರದಿಂದ ಸೋಮವಾರತನಕ ರಜೆ ತಗೊಂಡೆ. ಕೆಲಸ ಮಾಡಿ ಮಾಡಿ ಬೇಸರ ಆಗಿತ್ತು. ಬೇಸರ ಸ್ವಲ್ಪ ದೂರ ಮಾಡುವ ಎಂದು ಫ್ರೆಂಡ್ ಬೈಕ್ ತಗೊಂಡು ಏಕಾಂಗಿ ಆಗಿ ಹೊರಟೆ.
ಆದರೆ ಎಲ್ಲಿಗೆ ಹೋಗಬೇಕು ಎಂದು ಏನೂ ಪ್ಲಾನ್ ಮಾಡಿರಲಿಲ್ಲ. ಬೆಳಿಗ್ಗೆ 3 ಗಂಟೆಗೆ ಹಾಸನ ತಲುಪಿದೆ. ಅಲ್ಲಿ ಮೊಬೈಲ್ ತಗೊಂಡು ಗೂಗಲ್ ಮ್ಯಾಪ್ನಲ್ಲಿ ಹತ್ತಿರದ ಪ್ರವಾಸಿ ಸ್ಥಳಗಳ ಹುಡುಕಾಟ ನಡೆಸಿದೆ. ಮುಳ್ಳಯ್ಯನ ಗಿರಿ ಎಂದು ತೋರಿಸಿತು. ಮುಳ್ಳಯಗಿರಿಗೆ ಶನಿವಾರ ಬೆಳಿಗ್ಗೆ 9 ಗಂಟೆಗೆ ತಲುಪಿದೆ. ನನ್ನ ಹತ್ತಿರ ಕನ್ನಡ ಹಾಗೂ ಭಾರತದ ಬಾವುಟ ಇತ್ತು. ಎಷ್ಟೋ ಜನ ನನ್ನ ಹತ್ತಿರ ಬರೋದು ಬಾವುಟ ಜೊತೆ ಅವರ ಸೆಲ್ಫಿ ಫೋಟೋ ತೆಗೆದುಕೊಂಡು ಹೋದರು. ಅಲ್ಲಿ ನನ್ನ ಎಷ್ಟೋ ಜನ ಬಾವುಟ ಮಾರುವ ಹುಡುಗ ಅಂದುಕೊಂಡಿದ್ದರು.
ಅಲ್ಲಿಂದ ಮಧ್ಯಾಹ್ನ 12 ಗಂಟೆಗೆ ಬೆಟ್ಟೆ ಹೆಬ್ಬೆ ಫಾಲ್ಸ್ಗೆ ಹೊರಟೆ. ಅದನ್ನು ನೋಡಿ ಖುಷಿಪಡುತ್ತಿರಬೇಕಾದರೆ, ಏರ್ಟೆಲ್ ಆಫೀಸ್ನಿಂದ ಕಾಲ್ ಬಂತು. ಆಗ ಅದರಲ್ಲಿ ಹಲೋಟ್ಯೂನ್ಗಾಗಿ ‘ಹುಟ್ಟಿದರೆ ಕನ್ನಡ ನಾಡಲ್ಲಿ’ ಹಾಡು ಹಾಕಿದ್ದರು. ಇದು ಪ್ಲೇ ಆಗುತ್ತಿದ್ದಂತೆ ಅಲ್ಲಿದ್ದ ಎಲ್ಲರೂ ಆ ಹಾಡಿಗೆ ಹೆಜ್ಜೆ ಹಾಕಿದೆವು. ಅದು ನಿಂತಾಗ ಅಲ್ಲಿದ್ದ ಯಾರೋ ಒಬ್ಬರು ಕಾರಲ್ಲಿ ಅದೇ ಹಾಡನ್ನು ಹಾಡಿದರು. ಮತ್ತೆ ಡಾನ್ಸ್ ಆರಂಭವಾಯಿತು.
ಸಂಜೆ 7 ಗಂಟೆಗೆ ಅಲ್ಲಿಂದ ಹೊರಟೆ. ಭಾನುವಾರ ಬೆಳಿಗ್ಗೆ 3 ಗಂಟೆಗೆ ಹಾಸನಕ್ಕೆ ಬಂದೆ. ಅಲ್ಲಿ ಒಂದು ರೂಮ್ ಮಾಡ್ಕೊಂಡು ರೆಸ್ಟ್ ಮಾಡಿದೆ. ಬೆಳಿಗ್ಗೆ 11 ಗಂಟೆಗೆ ಎದ್ದು ಅಲ್ಲೇ ಸ್ವಲ್ಪ ಹೊತ್ತು ತಿರುಗಾಡಿದೆ. ಮತ್ತೆ ಸಂಜೆ ಬೆಂಗಳೂರು ಕಡೆ ಪಯಣ ಮಾಡಿದೆ. ರಾತ್ರಿ 11 ಗಂಟೆಗೆ ಮನೆ ಸೇರಿದೆ.
ಬೊಮ್ಮಸಂದ್ರ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.