ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪನೇ ನನ್ನ ಇಂಗ್ಲಿಷ್‌ ಗುರು: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

Last Updated 15 ಜೂನ್ 2019, 13:34 IST
ಅಕ್ಷರ ಗಾತ್ರ

‘ತಂದೆಯಿಂದ ಇಂಗ್ಲಿಷ್‌ ವ್ಯಾಕರಣ ಹೇಳಿಸಿಕೊಂಡ ನಾನು, ನನ್ನ ತಂದೆ ಮಾಡಿದ ಪಾಠವನ್ನು ನನ್ನ ಮಕ್ಕಳಿಗೆ ಹೇಳಿಕೊಡಲಾಗಿಲ್ಲ’ ಎಂದು ತಮ್ಮ ಅನಿಸಿಕೆಯನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಂಚಿಕೊಂಡಿದ್ದಾರೆ.

ನಿಮ್ಮ ತಂದೆ ಕಲಿಸಿದ ಪಾಠ..

ಇವತ್ತಿಗೂ ನನ್ನನ್ನು ಸದಾ ಎಚ್ಚರಿಸುವುದು ನಮ್ಮ ತಂದೆ ವೆಂಕಟೇಶ ಜೋಶಿ ಅವರಿಗೆ ಇದ್ದ ಬದ್ಧತೆ; ಪ್ರಾಮಾಣಿಕತೆ. 50ರ ದಶಕದಲ್ಲಿ 10ನೇ ತರಗತಿಯಲ್ಲಿ ರ‍್ಯಾಂಕ್‌ ಬಂದಿದ್ದರೂ ಬಡತನದ ಕಾರಣಕ್ಕೆ ಅವರಿಗೆ ಉನ್ನತ ವ್ಯಾಸಂಗ ಮಾಡಲು ಆಗಲಿಲ್ಲ. ಆದರೂ ಮಕ್ಕಳಿಗೆ ಒಳ್ಳೆ ಶಿಕ್ಷಣ ಕೊಡಿಸಿದರು. ನಿತ್ಯ ಬೆಳಿಗ್ಗೆ ಎದ್ದು ಇಂಗ್ಲಿಷ್‌ ವ್ಯಾಕರಣ ಹೇಳಿಕೊಡುತ್ತಿದ್ದರು. ಅವರು ಅಂದು ಹೇಳಿದ್ದೇ ಇವತ್ತು ನನಗೆ ನೆರವಾಗಿದ್ದು. ಇದನ್ನು ನಾನು ಹೇಗೆ ಮರೆಯಲಿ? ಸಂಸತ್ತಿನಲ್ಲಿ ನಿರರ್ಗಳವಾಗಿ ಮಾತನಾಡಲು ಅವರ ಪಾಠವೇ ಇವತ್ತಿಗೂ ನೆರವಾಗಿದ್ದು.

ಲೇ... ಎಂದೂ ಈ ಕೆಲಸ ಮಾಡಬೇಡ ಅಂದಿದ್ದು ಏನಾದರೂ ಇದೆಯೇ?

ಒಮ್ಮೆ ವೈದ್ಯರೊಬ್ಬರಿಗೆ ನಾನು ಕೊಟ್ಟ ಪತ್ರದ ಮೇಲೆ ವರ್ಗಾವಣೆ ಆಯಿತು. ಆಗ ಅವರು ಚುನಾವಣೆ ಖರ್ಚಿಗೆಂದು ಹಣ ಕೊಡಲು ಬಂದರು. ಇದನ್ನು ನೋಡಿದ ನನ್ನ ತಂದೆ, ಒಳಗೆ ಕರೆದು ಎಂತಹದ್ದೇ ಅನಿವಾರ್ಯ ಇದ್ದರೂ ವೈದ್ಯರಿಂದ ಹಣ ತೆಗೆದುಕೊಳ್ಳಬೇಡ ಎಂದು ಕಟ್ಟಪ್ಪಣೆ ಮಾಡಿದ್ದರು. ವೈದ್ಯರದ್ದು ಬಡವರ ಔಷಧಿ ಹಣ ಅಂದ್ರು. ಲಂಚ ಯಾರಿಂದಲೂ ಪಡೆಯಬೇಡ ಅಂದರು. ಇಂತಹ ಸಾಕಷ್ಟು ಸನ್ನಿವೇಶಗಳಲ್ಲಿ ನನ್ನ ತಂದೆ ನನಗೆ ಮಾರ್ಗದರ್ಶನ ಮಾಡಿದ್ದಾರೆ.

ಮೊದಲ ಬಾರಿ ಸಂಸದರಾದಾಗ ನಿಮ್ಮ ತಂದೆ ಏನು ಹೇಳಿದ್ದರು?

ನಾಳೆ ಇರಲ್ಲ ಅಂದುಕೊಂಡು ಇವತ್ತು ಕೆಲಸ ಮಾಡು. ಯಾರೂ ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಆಗಲ್ಲ. ಜನರ ಜತೆ ಸೌಜನ್ಯದಿಂದಇರು; ದರ್ಪ ಬೇಡ ಎಂದಿದ್ದರು. ಅದನ್ನೇ ನಾನು ಮೈಗೂಡಿಸಿಕೊಂಡಿದ್ದೇನೆ.

ನೀವೂ ಒಬ್ಬ ತಂದೆಯಾಗಿ ಏನು ಹೇಳುತ್ತೀರಾ?

ನಮ್ಮ ತಂದೆ ನನಗೆ ಹೇಳಿದ್ದನ್ನೇ ನನ್ನ ಮಕ್ಕಳಿಗೂ ಹೇಳುತ್ತಿರುತ್ತೇನೆ. ಆದರೆ, ನನ್ನ ತಂದೆ ನನಗೆ ಪಾಠ ಮಾಡಿದ ಹಾಗೆ ನಾನು ನನ್ನ ಮಕ್ಕಳಿಗೆ ಹೇಳಿಕೊಡಲು ಆಗಲಿಲ್ಲ. ಆ ಕೆಲಸವನ್ನು ನನ್ನ ಪತ್ನಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT