ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ಛಾಯಾಚಿತ್ರ ಸ್ಪರ್ಧೆ: ಚೌಕಟ್ಟು ಮೀರಿದ ಚಿತ್ರಗಳು

Last Updated 25 ಜುಲೈ 2020, 19:45 IST
ಅಕ್ಷರ ಗಾತ್ರ
ADVERTISEMENT
""
""
""

ಬೆಂಗಳೂರಿನ ಯೂಥ್ ಫೋಟೊಗ್ರಾಫಿಕ್ ಸೊಸೈಟಿಯಿಂದ ಇತ್ತೀಚೆಗೆ 38ನೇ ಅಖಿಲ ಭಾರತ ಡಿಜಿಟಲ್ ಛಾಯಾಚಿತ್ರ ಸಲಾನ್ ಸ್ಪರ್ಧೆ ನಡೆಯಿತು. ನಾಲ್ಕು ವಿಭಾಗಗಳಿಗೆ ಸ್ಪರ್ಧೆಗೆ ಬಂದಿದ್ದ ಛಾಯಾಚಿತ್ರಗಳ ಸಂಖ್ಯೆ 3,377.

ತೀರ್ಪುಗಾರರ ಮಂಡಳಿಯಲ್ಲಿದ್ದ ಇಂದೋರ್‌ನ ಗುರುದಾಸ್ ದುವ, ಮುಂಬೈನ ಸುನಿಲ್ ಕಪಾಡಿಯ, ವಿನಯ್ ಪಾರೆಲ್ಕರ್, ಕೋಲ್ಕತ್ತದ ಪಿ.ಎಸ್. ಸರ್ಕಾರ್, ಸಂತೋಷ್ ಜಾನ, ಪಿ.ಆರ್. ತಾಲುಕ್ದರ್, ಬೆಂಗಳೂರಿನ ಕೆ.ಎಸ್. ನಿವಾಸ್, ದಿಗ್ವಾಸ್ ಬೆಳ್ಳೆಮನೆ, ದಿನೇಶ್ ಅಲ್ಲಮಪ್ರಭು ಈ ಫೋಟೊಗಳನ್ನು ಆಯ್ಕೆ ಮಾಡಿದ್ದಾರೆ. ಕೋವಿಡ್ -19 ‍ಪರಿಣಾಮ ತೀರ್ಪುಗಾರರ ಮಂಡಳಿಯ ಎಲ್ಲಾ ಸದಸ್ಯರು ಫೇಸ್‌ಬುಕ್ ಲೈವ್‌ ಮೂಲಕ ಅವರಿದ್ದ ಸ್ಥಳಗಳಿಂದಲೇ ಫೋಟೊಗಳನ್ನು ಆಯ್ಕೆ ಮಾಡಿರುವುದು ವಿಶೇಷ.

ಜುಲೈ 26ರಂದು ಬೆಳಿಗ್ಗೆ 10.30ಗಂಟೆಗೆ ವೈಪಿಎಸ್‌ನ ಫೇಸ್‌ಬುಕ್‌ ಪೇಜ್‌ ಲೈವ್‌ನಲ್ಲಿ(https://facebook.com/ypsbengaluru/live/) ಪ್ರಶಸ್ತಿ ವಿತರಣೆ ಹಾಗೂ ಸಲಾನ್ ಕೆಟಲಾಗ್ ಬಿಡುಗಡೆ ನಡೆಯಲಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ. ಶ್ರೀನಿವಾಸ್ ಹಾಗೂ ನೈನಿತಾಲ್‌ನ ‘ಪದ್ಮಶ್ರೀ’ ಪುರಸ್ಕೃತ ಅನುಪ್ ಶಾ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ವೈಪಿಎಸ್‌ ನಿರ್ದೇಶಕ ಕೆ.ಎಸ್. ರಾಜಾರಾಮ್‌ ತಿಳಿಸಿದ್ದಾರೆ.

ಕಲರ್ ವಿಭಾಗ
ಪ್ರಥಮ
: ಮೊಹಮ್ಮದ್ ಅರ್ಫಾನ್ ಆಸಿಫ್, ಬೆಂಗಳೂರು
ತೀಯ: ರಾಕೇಶ್ ರಾವಲ್, ಥಾಣೆ
ತೃತೀಯ: ರುಮ್ನಾ ಮುಖರ್ಜಿ, ನವದೆಹಲಿ

ನಗುವಿನ ಅಲೆ...ಚಿತ್ರ: ಷುವಶಿಸ್ ಸಹ (ಮೊನೊಕ್ರೋಮ್ ವಿಭಾಗ)

ಮೊನೊಕ್ರೋಮ್ ವಿಭಾಗ
ಪ್ರಥಮ:
ಷುವಶಿಸ್ ಸಹ, ರಾಯಿಗಂಜ್
ದ್ವಿತೀಯ: ಷುವಶಿಸ್ ಸಹ, ರಾಯಿಗಂಜ್
ತೃತೀಯ: ಸೌರಭ್ ಶಿರೋಹಿಯ, ಕೋಲ್ಕತ್ತ

ಚೀತಾದ ಬಿಗಿಹಿಡಿತಕ್ಕೆ ಸಿಲುಕಿದ ಬಲಿಪ್ರಾಣಿ ಚಿತ್ರ: ಬರುನ್ ಸಿನ್ಹಾ (ನೇಚರ್ ವಿಭಾಗ)

ನೇಚರ್ ವಿಭಾಗ
ಪ್ರಥಮ:
ಬರುನ್ ಸಿನ್ಹಾ, ಪಾಟ್ನಾ
ದ್ವಿತೀಯ: ಸುಧೀಂದ್ರ ಕೆ.ಪಿ., ಕುಣಿಗಲ್
ತೃತೀಯ: ಅರ್ಜುನ್ ಹಾರಿತ್, ಬೆಂಗಳೂರು

ಅರ್ಮೇನಿಯನ್ ಮಾಂಟೆಸರಿ ಚಿತ್ರ: ಮೊಹಮ್ಮದ್ ಅರ್ಫಾನ್ ಆಸಿಫ್, ಬೆಂಗಳೂರು (ಟ್ರಾವೆಲ್ ವಿಭಾಗ)

ಟ್ರಾವೆಲ್ ವಿಭಾಗ
ಪ್ರಥಮ
: ಮೊಹಮ್ಮದ್ ಅರ್ಫಾನ್ ಆಸಿಫ್, ಬೆಂಗಳೂರು
ದ್ವಿತೀಯ: ಮೊಹಮ್ಮದ್ ಅರ್ಫಾನ್ ಆಸಿಫ್, ಬೆಂಗಳೂರು
ತೃತೀಯ: ಅನಿತಾ ಮೈಸೂರ್, ಬೆಂಗಳೂರು

ಯೂಥ್ ಪ್ರಶಸ್ತಿಗಳು
ಬೆಂಗಳೂರಿನ ಅನಘಾ ಮೋಹನ್, ಶಾರಿಕಾ ವಿ. ಶ್ರೇಯಸ್ ಹೊಳ್ಳ ಮತ್ತು ಯುಕ್ತಿ ಪದ್ಮಾಕರ್, ಮೂಡಬಿದರೆಯ ಪರಮ್ ಜೈನ್, ಕೋಲ್ಕತ್ತದ ಆದಿತ್ಯ ದಾಸ್, ಹೂಗ್ಲಿಯ ಸುವಾಮಿತ್ ಕರ್ಮಾಕರ್, ಪುರುಲಿಯಾದ ಅದಿತಿ ರಂಜನ್ ಘೋಶ್ ಮತ್ತು ಪುಣೆಯ ದಿವ್ಯಾ ಚಕ್ರಬೊರ್ತಿ.

ಅತ್ಯುತ್ತಮ ಪ್ರದರ್ಶಕ ಪ್ರಶಸ್ತಿ: ಮೊಹಮ್ಮದ್ ಅರ್ಫಾನ್ ಆಸಿಫ್, ಬೆಂಗಳೂರು
ಅತ್ಯುತ್ತಮ ಛಾಯಾಗ್ರಹಣ ಕೂಟ ಪ್ರಶಸ್ತಿ: ಕಲೇಯ್ಡೋಸ್ಕೋಪ್ ಫೋಟೊಗ್ರಫಿ ಕ್ಲಬ್, ಪಶ್ಚಿಮ ಬಂಗಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT