ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಪ್ರಜಾವಾಣಿ’ ವರ್ಷದ ಸಾಧಕಿ: ಕನ್ನಡ ಸೇವೆಗೆ ಭಾಗೀರಥಿ ಕನ್ನಡತಿ

Last Updated 1 ಜನವರಿ 2022, 6:15 IST
ಅಕ್ಷರ ಗಾತ್ರ

ಕನ್ನಡೇತರರಿಗೆ ಕನ್ನಡ ಭಾಷೆ ಕಲಿಸುವ, ಪರಭಾಷಿಕರಲ್ಲಿ ನಾಡು–ನುಡಿಯ ಕುರಿತು ‘ಪ್ರೀತಿ’ ಮೂಡಿಸುವ ಭಾಗೀರಥಿ,ಹೆಸರಿನೊಂದಿಗೇ ‘ಕನ್ನಡ’ ಜೋಡಿಸಿಕೊಂಡು ‘ಭಾಗೀರಥಿ ಕನ್ನಡತಿ’ ಎಂದೇ ಗುರುತಿಸಿಕೊಂಡಿದ್ದಾರೆ.

ಹಾಸನ ಜಿಲ್ಲೆ ಕೆಂಚಮ್ಮನ ಹೊಸಕೋಟೆ (ಸಕಲೇಶಪುರ) ಕಟ್ಟಿಹೊಳೆ ಗ್ರಾಮದವರಾದ ಭಾಗೀರಥಿ, ಬೆಂಗಳೂರಿನ ಕೆ.ಆರ್‌. ಪುರದಲ್ಲಿ ನೆಲೆಸಿದ್ದಾರೆ. ಎಸ್ಸೆಸ್ಸೆಲ್ಸಿ ಮುಗಿಸಿದ ಬಳಿಕ ಬೆಂಗಳೂರಿಗೆ ಬಂದ ಅವರು ಈಗ, ವಿದೇಶಿಯರಿಗೆ ಆನ್‌ಲೈನ್‌ ಮೂಲಕ ಕನ್ನಡ ಕಲಿಸುವ ‘ಕನ್ನಡತಿ’, ಯೋಗ ಕಲಿಸುವ ‘ಯೋಗ ಮಾ’.

2001ರಲ್ಲಿ ಎಸ್‌ಎಸ್‌ಬಿ ಸೇವಾ ಫೌಂಡೇಷನ್ ಚಾರಿಟಬಲ್ ಟ್ರಸ್ಟ್‌ ಆರಂಭಿಸಿದ ಭಾಗೀರಥಿ, ಶಿಕ್ಷಣ, ಆರೋಗ್ಯ, ಯೋಗ ವಿಷಯಗಳಲ್ಲಿ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದಾರೆ. ‌20 ವರ್ಷಗಳಲ್ಲಿ 26 ಸಾವಿರಕ್ಕೂ ಹೆಚ್ಚು ಕನ್ನಡೇತರರಿಗೆ ಉಚಿತವಾಗಿ ಕನ್ನಡ ಹೇಳಿಕೊಟ್ಟಿದ್ದಾರೆ. 2019ರಲ್ಲಿ ದುಬೈನಲ್ಲಿ ದೈಹಿಕ ಮತ್ತು ಸಾಂಸ್ಕೃತಿಕತರಬೇತುಗಾರ್ತಿ (ಫಿಸಿಕಲ್ ಆ್ಯಂಡ್‌ ಕಲ್ಚರಲ್ ಟ್ರೈನರ್‌) ಕೆಲಸಕ್ಕೆ ಸೇರಿದ್ದ ಅವರು, ಕೋವಿಡ್ ಕಾರಣದಿಂದ ಕೆಲಸ ಕಳೆದುಕೊಂಡಿದ್ದರು. ಅದೇ ವೇಳೆ ಆನ್‌ಲೈನ್‌ನಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಯೋಗ ತರಬೇತಿ ನೀಡುತ್ತಿದ್ದರು. ಆ ನಂತರ ಬ್ರಿಟನ್‌ನ ‘ಕನ್ನಡಿಗರು ಯುಕೆ’ ಸಂಘಟನೆಯ ಸಂಪರ್ಕದ ಮೂಲಕ ಯುಕೆ ನಿವಾಸಿಗಳಿಗೆ ಏಳೆಂಟು ತಿಂಗಳುಗಳಿಂದ ಪ್ರತಿ ವಾರ ಆನ್‌ಲೈನ್‌ನಲ್ಲಿ ಯೋಗ ಕಲಿಸುತ್ತಿದ್ದಾರೆ.

ಕೇರಳ, ಆಂಧ್ರಪ್ರದೇಶ, ಗುಜರಾತ್‌, ದೆಹಲಿ ರಾಜ್ಯಗಳಲ್ಲಿ ಇವರು ಯೋಗ ತರಬೇತಿ ನೀಡಿದ್ದಾರೆ. ರಷ್ಯಾ, ಪಾಕಿಸ್ತಾನ, ಫಿಲಿಪ್ಪಿನ್ಸ್‌, ಅಮೆರಿಕ, ಕೆನಡಾ, ಥಾಯ್ಲೆಂಡ್, ನೇಪಾಳದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಸಿಬ್ಬಂದಿಗೆ ಯೋಗ ಕಲಿಸಿದ್ದಾರೆ. ಯುಎಇಯಲ್ಲಿ ಬುದ್ದಿಮಾಂದ್ಯ ಯುವಕರಿಗೆ ಯೋಗ ಪರಿಚಯಿಸಿದ ಮೊದಲಿಗರಿವರು. ಅಲ್ಲಿನ ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ಸಿಬ್ಬಂದಿಗೆ ಪ್ರಸವಪೂರ್ವ ಮತ್ತು ಪ್ರಸವನಂತರದ ಯೋಗ ಕಾರ್ಯಾಗಾರ, ಸ್ಲಿಪ್‌ ಡಿಸ್ಕ್‌, ಆಸ್ತಮಾ, ಮೈಗ್ರೇನ್‌, ತೂಕ ಇಳಿಸುವ ಯೋಗಗಳನ್ನು ಕಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT