ಖುಷಿ ನೀಡಿದ ನಮ್ಮೂರಿನ ಮಳೆ....!

7

ಖುಷಿ ನೀಡಿದ ನಮ್ಮೂರಿನ ಮಳೆ....!

Published:
Updated:

‘ಏಯ್...! ರವಿ.. ಎನ್ ಮಾಡಾಕತ್ತಿ..

ಮಳಿ ಬರಾಕಹತ್ತೇತಿ. ನೀ ಅದರಾಗ ಆಟಾ ಆಡಾಕ ಹತ್ತಿಯಲ್ಲೊ.., ಬುದ್ದಿಗಿದ್ದಿ ಐತೋ ಇಲ್ಲೋ...? ನೀ ಮಾತ್ರ ಅಲ್ಲದೇ ನಿನ್ನ ಮಕ್ಕಳನ್ನ ಕರಕೊಂಡು ಮಳ್ಯಾಗ ಕುಣಿದಾಡ್ಯಾಕತ್ತಿಯಲ್ಲೊ ಬಾ ಒಳಗ.....! ದೊಡ್ಡ ದನಿಯಲ್ಲಿ ಜೋರಾಗಿ ಸಿಟ್ಟಿನಿಂದ ನಮ್ಮ ಸೋದರ ಮಾವ (ಅವ್ವನ ತಮ್ಮ) ನನ್ನನ್ನು ಮನೆಯೊಳಗಿನಿಂದ ಕರೆಯುತ್ತಿದ್ದರು.

ರಭಸವಾಗಿ ಸುರಿಯುತ್ತಿದ್ದ ಮಳೆ ಕಂಡು ಮನದಲ್ಲಿ ಖುಷಿಯಿಂದ ಪುಟಿಯುತ್ತಿದ್ದ ನಾನು ನನ್ನ ಮಕ್ಕಳಾದ ಲೀನಾ ಹಾಗೂ ಓಂ ಅವರನ್ನು ಕರೆದುಕೊಂಡು ಕುಣಿದಾಡುವಂತಾಯಿತು. ಕಾರಣವಿಷ್ಟೇ ನಾನು ದುಬೈನಲ್ಲಿ ವಾಸವಾಗಿದ್ದೆನೆ. ಅಲ್ಲಿ ಮಳೆ ಬಹಳ ಅಪರೂಪ. ಅದೂ ಬಂದರೂ ನವಂಬರ್‌ ಡಿಸೆಂಬರ್‌ ತಿಂಗಳಲ್ಲಿ. ಅದೂ ಕೂಡಾ ಸಣ್ಣಗೆ ಸೋನೆ ಮಳೆ ತರಹ ಬಂದು ತಕ್ಷಣವೇ ಮಾಯವಾಗುವ ಮಳೆ. ಆ ಮಳೆಗೆ ಮೈಮೇಲಿನ ಅಂಗಿಯೂ ನೆನೆಯಲಾರದು.

ನಮ್ಮ ಅಪ್ಪ, ಅವ್ವ ಹುಬ್ಬಳ್ಳಿ ನವನಗರ ವಾಸಿಗಳು. ಅವರನ್ನು ಕಾಣಲು ನಾನು ಆಗಾಗ ಇಲ್ಲಿಗೆ ಬರುತ್ತಿರುತ್ತೇನೆ. ಕಳೆದ ಮಳೆಗಾಲದ ಸಮಯದಲ್ಲಿ ನಾನು ಇಲ್ಲಿಗೆ ಬಂದಾಗ ಹಾಯಾಗಿ ಮನೆಯಲ್ಲಿ ವಿಹರಿಸುತ್ತಿರುವ ವೇಳೆಯಲ್ಲಿ...... ಹೊರಗೆ ದಿಢೀರನೇ ಮಳೆ ಪ್ರಾರಂಭವಾಗಿ ಕ್ರಮೇಣ ಜೋರಾಗಿ ಸುರಿಯಲಾರಂಭಿಸಿತು.

ಮಳೆಯ ಅಬ್ಬರವನ್ನು ನೋಡಲು ಹೊರಗೆ ಬಂದ ನನಗೆ ಮನದಲಿ ಏನೋ ಖುಷಿ ತುಂಬಿ, ಆತುರವಾಗಿ ಅಂಗಳಕೆ ಜಿಗಿದು ಮಳೆಯಲಿ ತಿರುಗಲು ಪ್ರಾರಂಭಿಸಿದೆ. ನನ್ನನ್ನು ಕಂಡು ನನ್ನ ಮಕ್ಕಳು ಸಹ ನನ್ನನ್ನು ಅನುಸರಿಸಿ ಗಿರಕಿ ಹೊಡೆಯುತ್ತ ಹರುಷದಿಂದ ಕುಣಿದಾಡುತ್ತಿರುವಾಗ ನಮ್ಮ ಮಾಮಾನ ಈ ಮಾತುಗಳು ನನ್ನನ್ನು ಎಚ್ಚರಿಸಿದವು!

ಕಡು ಬಿಸಿಲಿನ ಮರಳುಗಾಡಿನ ಒಡಲಲ್ಲಿ ದಿನ ನೂಕುತ್ತಿದ್ದ ನನಗೆ ಈ ಮಳೆ ಚೈತನ್ಯ ಮೂಡಿಸಿದಂತಾಗಿತ್ತು. ಮಕ್ಕಳ ಕೇಕೇ ಕೂಗು ಮುಗಿಲು ಮುಟ್ಟಿತ್ತು. ಮಳೆಗಾಲದ, ಮಳೆಯೊಂದಿಗಿನ ಬಾಲ್ಯದ ನೆನಪುಗಳು ಅಚ್ಚಳಿಯದೆ ಬೆಚ್ಚಗೆ ನನ್ನ ಮನದಲ್ಲಿ ಹುದುಗಿದೆ.

-ರವೀಂದ್ರ, ಹುನಗುಂದ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !