ಬದುಕಿದೆಯಾ ಬಡಜೀವ?

7

ಬದುಕಿದೆಯಾ ಬಡಜೀವ?

Published:
Updated:
Deccan Herald

ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು.  ಅಂದು (ಮೇ 15 – ಅದು ನನ್ನ ವಿವಾಹವಾದ ದಿನವೂ ಹೌದು). ಹುಬ್ಬಳ್ಳಿ ಬಿವಿವಿ ಕಾಲೇಜಿನ ಆವರಣದಲ್ಲಿ ‘ಇನ್ ಕಾಮೆಕ್ಸ್‌’ ಎಂಬ ಬೃಹತ್ ಪ್ರದರ್ಶನ ನಡೆಯುತ್ತಿತ್ತು. ಜೊತೆಗೆ ಕಲಾವಿದರಿಂದ ಮನರಂಜನೆಯ ಕಾರ್ಯಕ್ರಮಗಳೂ ಏರ್ಪಾಡಾಗಿದ್ದವು. ನಾನು, ನನ್ನ ಮೈದುನ ,ಓರಗಿತ್ತಿ, ಅತ್ತಿಗೆ, ಚಿಕ್ಕಮಕ್ಕಳನ್ನೆಲ್ಲಾ ಕರೆದುಕೊಂಡು ಅಲ್ಲಿಗೆ ಹೋಗಿದ್ದೆವು. ಸಮಾರಂಭಕ್ಕಾಗಿ ಕಬ್ಬಿಣದ ಕಂಬಗಳಿಂದ ಗಟ್ಟಿ ಮುಟ್ಟಾಗಿ ಕಟ್ಟಲ್ಪಟ್ಟ ವರ್ಣರಂಜಿತ ವೇದಿಕೆ ಸಿದ್ದಗೊಂಡಿತ್ತು. 

ಆ ಸಾಯಂಕಾಲದ ಸನ್ನಿವೇಶದಲ್ಲಿ ಎಲ್ಲಿದ್ದನೋ ಆ ಮಳೆರಾಯ ನಾನರಿಯೆ... ಇದ್ದಕ್ಕಿದ್ದಂತೆಯೇ ಮೋಡ ಕವಿದ ವಾತಾವರಣ, ಗುಡುಗಿನ ಆರ್ಭಟ, ಸಿಡಿಲಿನ ಮಿಂಚು, ಒಮ್ಮಿಂದೊಮ್ಮಲೇ ಆವರಿಸಿದ ಕಾರ್ಗತ್ತಲು, ಜೊತೆಗೆ ಧೋ ಎಂದು ಮಳೆ ಆರಂಭ. ಅಯ್ಯೋ ಮಳೆ. . . ಮಳೆ. . . ಎಂದು ನೆರೆದವರು ಕಿರುಚುತ್ತಿರುವಾಗಲೇ ಹಾಕಿದ್ದ ಪೆಂಡಾಲು ಕ್ಷಣಾರ್ಧದಲ್ಲಿ ನೆಲಕಚ್ಚ್ಟಿ ಅಲ್ಲಿದ್ದ ಮೈಕು, ಕುರ್ಚಿ ಮತ್ತಿತರ ಸಾಮಾನು- ಸರಂಜಾಮಗಳು ಆ ಭಾರೀ ಮಳೆಯ ರಭಸಕ್ಕೆ -  ತೇಲತೊಡಗಿದವು. ಮನೆಯಿಂದ ಹೊರಡುವಾಗ ಮಳೆಯ ಸೂಚನೆಯಿಲ್ಲದ್ದರಿಂದ ನಾವು ಆ ಬಗ್ಗೆ ಯಾವುದೇ ಸಿದ್ಧತೆ ಮಾಡಿಕೊಂಡಿರಲಿಲ್ಲ. ನಮಗೆಲ್ಲ ಗಾಬರಿಯಿಂದ ದಿಕ್ಕೇ ತೋಚದಂತಾಯಿತು. ಆದರೂ, ಸತ್ತೇನೋ ಕೆಟ್ಟೆನೋ ಎನ್ನುತ್ತ ಮಕ್ಕಳನ್ನೆಲ್ಲಾ ಎತ್ತಿಕೊಂಡು, ಹೇಗೋ ಸಾವರಿಸಿಕೊಂಡು ರಸ್ತೆ ಮುಟ್ಟಿದ್ದಾಯಿತು.

ಅಲ್ಲಿಯ ದೃಶ್ಯಾವಳಿಯೇ ಬೇರೆ. ಬಸ್ಸುಗಳು ಸಂಚರಿಸದೇ ರಸ್ತೆ ಬಿಕೋ ಎನ್ನುತ್ತಿತ್ತು. ಆಘಾತಗೊಂಡ ನಾವೆಲ್ಲ ಆತಂಕದಿಂದ ಅತ್ತಿತ್ತ ಅಡ್ಡಾಡುತ್ತಿರುವಾಗಲೇ ಆಪದ್ಬಾಂಧವನಂತೆ ಟ್ರಕ್ಕೊಂದು ಬಂತು. ಉಳಿದವರೊಡನೆ ನಾವು ಕಷ್ಟ ಪಟ್ಟು ಟ್ರಕ್ಕಿನಲ್ಲಿ ಸ್ಥಳ ಹೊಂದಿಸಿಕೊಂಡೆವು. ಸ್ವಲ್ಪ ಹೊತ್ತಿನ ನಂತರ ನವನಗರ ತಲುಪಿದ ನಮಗೆ ಹೋದ ಜೀವ ಬಂದಂತಾಗಿತ್ತು. ಆದರೆ ಮಳೆ ಮಾತ್ರ ತನ್ನ ಪಾಡಿಗೆ ತಾನು ಅಟ್ಟಹಾಸ ಮೆರೆಯುತ್ತಲೇ ಇತ್ತು! ಅಲ್ಲಿ ಸಿಕ್ಕ ಒಂದೇ ಒಂದು ಅಟೋದಲ್ಲಿ 9 ಜನ ಹೇಗೋ ಹತ್ತಿ ಮನೆ ಸೇರಿದೆವು.  ನನ್ನ ಎರಡನೇ ಮಗಳಿಗೆ  ಆಗ 3/4 ವರ್ಷಇರಬಹುದು, ಅವಳು ‘ಅಮ್ಮ ನಾವು ಸಾಯುತ್ತೇವಾ’ ಅಂತ ಕೇಳಿದ್ದು, ಅಂಗೈನಲ್ಲೇ ಜೀವ ಹಿಡಿದುಕೊಂಡು ಮನೆ ಮುಟ್ಟಿದ್ದು ಎಂದಿಗೂ ಮರೆಯಲಾಗದು.
-ಪದ್ಮಜಾ ನಾರಾಯಣ ಭಾದ್ರಿ, ನವನಗರ, ಹುಬ್ಬಳ್ಳಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !