ಸೋಮವಾರ, ಸೆಪ್ಟೆಂಬರ್ 27, 2021
22 °C
ತಾರೀಖು 3–11–2019 ರಿಂದ 11–10–2019ರ ವರೆಗೆ

ಈ ವಾರ ಹೇಗಿದೆ ನಿಮ್ಮ ಭವಿಷ್ಯ: ಯಾವ ರಾಶಿಯವರಿಗೆ ಏನು ಫಲ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಷ: ಅಶ್ವಿನಿ, ಭರಣಿ, ಕೃತ್ತಿಕಾ 1ನೇ ಪಾದ
ನಿಮಗೆ ಶುಭ ವಾರ್ತೆಗಳು ಸ್ಥಳ ಬದಲಾವಣೆಯ ಬಗ್ಗೆ ಕೇಳಿ ಬರಲಿದೆ ಮತ್ತು ನಿಮ್ಮ ಮಹತ್ತರವಾದ ಆಸೆಗಳು ಈಡೇರುತ್ತವೆ. ರಾಜಕೀಯ ವ್ಯಕ್ತಿಗಳಿಗೆ ಸಂತಸದ ದಿನ. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಈಗ ದೊರೆಯುತ್ತವೆ. ಹಂತ ಹಂತವಾಗಿ ಮೇಲೇರುವ ಸಾಧ್ಯತೆಗಳಿವೆ. ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆ ತೆಗೆದುಕೊಳ್ಳುವುದು ಒಳ್ಳೆಯದು. ಆದಾಯವು ಸಾಮಾನ್ಯವಾಗಿದ್ದರೂ ಖರ್ಚು ಮಾತ್ರ ಹೆಚ್ಚಾಗುವ ಸಾಧ್ಯತೆಗಳಿವೆ. ಆದ್ದರಿಂದ ಖರ್ಚಿಗೆ ಕಡಿವಾಣವನ್ನು ಹಾಕುವುದು ಅತೀ ಒಳ್ಳೆಯದು.

ವೃಷಭ: ಕೃತ್ತಿಕಾ 2,3,4, ರೋಹಿಣಿ, ಮೃಗಶಿರಾ 1,2
ಮಾತಿನ ಮೂಲಕ ನಿಮ್ಮ ವ್ಯವಹಾರಗಳ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಿರಿ. ಕಚೇರಿ ಕೆಲಗಳು ಸರಾಗವಾಗಿ ಆಗುತ್ತವೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಜಯವಿರುತ್ತದೆ. ನಿಮ್ಮ ಮಾತಿನಿಂದ ನಿಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವಿರಿ ಮತ್ತು ಅಂತಹ ಅವಕಾಶಗಳು ಹೆಚ್ಚಾಗಿ ಒದಗಿ ಬರುತ್ತವೆ. ನಿಮ್ಮ ಧನಾದಾಯವು ಉತ್ತಮವಾಗಿರುತ್ತದೆ. ಕೌಟುಂಬಿಕ ವಿಚಾರಗಳಲ್ಲಿ ಅತಿಯಾಗಿ ಹಠಬೇಡ. ನಿಮ್ಮ ಬುದ್ಧಿವಂತಿಕೆಯಿಂದ ನಿಮ್ಮ ಎದುರಾಳಿಗಳನ್ನು ಮಣಿಸುವಿರಿ. 

ಮಿಥುನ: ಮೃಗಶಿರಾ 3,4, ಆರಿದ್ರಾ, ಪುನರ್ವಸು 1,2,3
ಯಾರಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ. ಹಾಗಂತ ಎಲ್ಲನ್ನೂ ಎದುರು ಹಾಕಿಕೊಳ್ಳುವುದು ಬೇಡ. ನೂತನ ವಾಹನದ ಖರೀದಿಯನ್ನು ಸ್ವಲ್ಪ ಮುಂದೂಡಿರಿ. ನಿಮ್ಮ ಅಸಲಿ ಪ್ರತಿಭೆಗಳಿಗೆ ಹೆಚ್ಚಿನ ಪ್ರಶಂಸೆಗಳು ಕೇಳಿ ಬರುವುದು. ಸತ್ಯದ ಹಾದಿಯಿಂದ ನಿಮ್ಮ ಪ್ರಗತಿಯ ದಾರಿಗಳು ಸುಗಮವಾಗುವುದು. ನಿಮ್ಮ ಬಾಂಧವರು ನಿಮ್ಮ ಕಾರ್ಯಗಳಿಗೆ ಸಹಕಾರ ನೀಡುವರು. ನಿಮ್ಮ ಪ್ರಯಾಣದಲ್ಲಿ ಸ್ವಲ್ಪ ಎಚ್ಚರವಾಗಿರುವುದು ಒಳ್ಳೆಯದು ಮತ್ತು ನಿಮ್ಮ ವಸ್ತುಗಳ ಬಗ್ಗೆ ಸ್ವಲ್ಪ ಗಮನವಿಟ್ಟುಕೊಳ್ಳುವುದು ಒಳ್ಳೆಯದು. 

ಕಟಕ: ಪುನರ್ವಸು 4, ಪುಷ್ಯ, ಆಶ್ಲೇಷ
ನಿಮ್ಮ ಪರಿಸರದಲ್ಲಿರುವ ಜನರು ನಿಮ್ಮ ಬುದ್ಧಿವಂತಿಕೆಯನ್ನು ಕೊಂಡಾಡುವರು. ನಿಮ್ಮ ಒಡಹುಟ್ಟಿದವರಿಗೆ ಮತ್ತು ಬಂಧುಗಳಿಗೆ ಸಾಕಷ್ಟು ಸಹಾಯವನ್ನು ಮಾಡುವಿರಿ. ಅನಿರೀಕ್ಷಿತವಾಗಿ ಪ್ರೇಮ ಪ್ರಸಂಗಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ. ನಿಮ್ಮ ಸಂಗಾತಿಯ ಮನೆಯವರು ನಿಮ್ಮ ಬಳಿಗೆ ಧನ ಸಹಾಯಕ್ಕಾಗಿ ಬರುವರು. ಆದರೆ ನಿಷ್ಠೂರ ಮಾಡಿಕೊಳ್ಳದೆ ಸಮಾಧಾನವಾಗಿ ಮಾತನಾಡಿರಿ. ಹಣದ ವ್ಯವಹಾರ ಅಷ್ಟು ಒಳಿತಲ್ಲ. ವ್ಯವಹಾರದಲ್ಲಿ ಸಾಕಷ್ಟು ಹೊಸ ಅವಕಾಶಗಳಿರುತ್ತವೆ. 

ಸಿಂಹ: ಮಖ, ಪೂರ್ವ ಫಲ್ಗುಣಿ, ಉತ್ತರ ಫಲ್ಗುಣಿ 1
ನೀವು ಧೈರ್ಯಶಾಲಿಗಳು ಆದರೆ ಭಂಡ ಧೈರ್ಯ ಬೇಡ. ಹಿರಿಯರ ಆರೋಗ್ಯಗಳಲ್ಲಿ ಇದ್ದ ಭಯ ಅವರ ವೈದ್ಯಕೀಯ ಪರೀಕ್ಷೆಗಳಿಂದ ಇದ್ದ ಆತಂಕವು ದೂರವಾಗುತ್ತವೆ. ಮಕ್ಕಳಿಂದ ಸಂಸಾರದ ಖರ್ಚು ವೆಚ್ಚಗಳಿಗೆ ಬೇಕಾದ ಧನ ಸಹಾಯವು ಸಿಗುತ್ತದೆ. ಕೃಷಿ ಚಟುವಟಿಕೆಗೆ ಬೇಕಾದ ಸೂಕ್ತ ಧನ ಸಹಾಯವು ಒದಗಿ ಬರುತ್ತದೆ. ನಿಮಗೆ ಆಗಾಗ ಕಾಟ ಕೊಡುವವರನ್ನು ಉಪೇಕ್ಷಿಸದೆ ಸ್ವಲ್ಪ ಹತೋಟಿಯಲ್ಲಿಡುವುದು ಉತ್ತಮ. ಇಲ್ಲವಾದಲ್ಲಿ ದೊಡ್ಡ ತೊಂದರೆ ಬರುವುದು.

ಕನ್ಯಾ: ಉತ್ತರ ಫಲ್ಗುಣಿ 2,3,4, ಹಸ್ತ, ಚಿತ್ತಾ 1, 2
ಬಂಧುವೊಬ್ಬರಿಂದ ಕೆಲವು ಆಸ್ಥಿಯ ವಿಚಾರಗಳಲ್ಲಿ ನಿಮಗೆ ಲಾಭವಾಗುವುದು. ಮನೆಯನ್ನು ಮಾಡಿಕೊಳ್ಳಲಿಲ್ಲ ಎಂಬ ಕೊರಗಿದ್ದರೂ ಸೂಕ್ತ ಸಮಯಕ್ಕಾಗಿ ಕಾಯುವುದು ಒಳ್ಳೆಯದು. ಹಿಂದಿನ ಅನುಭವಗಳನ್ನು ಆಧರಿಸಿ ನಿಮ್ಮ ವ್ಯವಹಾರಗಳನ್ನು ನಡೆಸಿರಿ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯ ಹೆಜ್ಜೆಯನ್ನು ಇಡಿರಿ. ಧನಾದಾಯವು ಸಾಮಾನ್ಯವಾಗಿರುತ್ತದೆ. ಪರರ ಬಗ್ಗೆ ಸಣ್ಣ ಮಾತುಗಳನ್ನು ಆಡುವುದು ಬೇಡ. ಅದು ನಿಮಗೆ ತಿರುಗುಬಾಣವಾಗುವುದು. 

ತುಲಾ: ಚಿತ್ತಾ 3,4, ಸ್ವಾತಿ, ವಿಶಾಖೆ 1,2,3
ಧನಾದಾಯವು ಬಹಳ ಉತ್ತಮವಾಗಿರುತ್ತದೆ. ಯಾವುದೇ ಕೆಲಸವನ್ನು ಮಾಡುವಾಗ ಕ್ರಮಬದ್ಧವಾಗಿ ಯೋಚಿಸಿ ಮಾಡಿರಿ. ನಿಮ್ಮ ಧೋರಣೆಯ ಮಾತಿನಿಂದ ಬಂಧುಗಳೊಡನೆ ನಿಷ್ಠೂರವನ್ನು ಕಟ್ಟಿಕೊಳ್ಳುವಿರಿ. ವಿದೇಶಿ ನೆಲದಲ್ಲಿ ಉದ್ಯೋಗದಲ್ಲಿರುವವರಿಗೆ ಅಭಿವೃದ್ಧಿ ಇದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಿಧಾನಗತಿಯ ಪ್ರಗತಿ ಇರುತ್ತದೆ. ನಿಮಗೆ ಸಾಲ ಕೊಟ್ಟವರು ಈಗ ನಿಮ್ಮ ಮೇಲೆ ವಾಪಸ್ ಕೊಡುವಂತೆ ಒತ್ತಡವನ್ನು ಹೇರಬಹುದು. ನಿಮಗೆ ಸಾಲ ತೀರಿಸಲು ಹಲವಾರು ದಾರಿಗಳು ಸಿಗುತ್ತವೆ. 

ವೃಶ್ಚಿಕ: ವಿಶಾಖ 4, ಅನುರಾಧ, ಜ್ಯೇಷ್ಠ
ಬೆಟ್ಟದಂತೆ ಬಂದಿದ್ದ ದುಗುಡವೊಂದು ಕರಗಿ ತಲೆ ಮೇಲಿದ್ದ ಭಾರವೊಂದು ಇಳಿದು ಮನಸ್ಸು ಹಗುರವಾಗುವುದು. ಧನಾದಾಯ ಉತ್ತಮವಾಗಿದ್ದು ಧನ ಸಂಗ್ರಹ ಹೆಚ್ಚಿಸುವ ಕಾಳಜಿ ಇರಲಿ. ಕೆಲವು ಸಂದರ್ಭಗಳಲ್ಲಿ ಬರೀ ಮಾತಿನಿಂದ ಹೆಚ್ಚಿನ ಕೆಲವು ಕೆಲಸಗಳು ಆಗುವುದು. ನಿಮಗೆ ಪುಗಸಟ್ಟೆ ಸಲಹೆಯನ್ನು ಕೊಡುವವರ ಸಹವಾಸದಿಂದ ದೂರವಿರಿ. ನಿಮ್ಮ ಹೊಸ ವ್ಯವಹಾರಗಳು ಈಗ ಅಭಿವೃದ್ಧಿಯತ್ತ ನಡೆದು ಲಾಭವನ್ನು ಗಳಿಸುವುದು. ಹೊಸ ಅವಕಾಶಗಳು ಬರುವುದು.

ಧನಸ್ಸು: ಮೂಲ, ಪೂರ್ವಾಷಾಢ, ಉತ್ತರಾಷಾಡ 1
ಕೆಲಸ ಕಾರ್ಯಗಳಲ್ಲಿ ಮಂದಗತಿಯ ಪ್ರಗತಿ ಇರುತ್ತದೆ. ಕಠಿಣ ಪರಿಶ್ರಮವಿದ್ದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಹಿರಿಯರು ಕೂತಲ್ಲೇ ಎಲ್ಲಾ ವ್ಯವಸ್ಥೆಗಳು ದೊರೆಯಬೇಕೆಂದರೆ ಅದು ಕಷ್ಠ ಸಾಧ್ಯ. ಮನೆಯಲ್ಲಿ ಹಿರಿಯರ ಕಾರ್ಯ ವೈಖರಿ ಸ್ವಲ್ಪ ಬೇಸರವನ್ನು ತರಬಹುದು. ಹಿರಿಯ ಅಧಿಕಾರಿಗಳಿಗೆ ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಬಹುದು. ಭೂ ದಾಖಲಾತಿಯನ್ನು ಸಿದ್ಧಪಡಿಸುವ ಕಚೇರಿಯಲ್ಲಿ ಕೆಲಸ ಮಾಡುವವರು ಸ್ವಲ್ಪ ಎಚ್ಚರವಾಗಿರಿ. ನಿಮ್ಮ ಮೇಲೆ ದೂರು ಬರಬಹುದು. 

ಮಕರ: ಉತ್ತರಾಷಾಡ 2,3,4, ಶ್ರವಣ, ಧನಿಷ್ಠ 1, 2
ಯಾತ್ರೆಗೆ ಹೋದಾಗ ಸಮುದ್ರ ಅಥವಾ ನದೀ ಸ್ನಾನದ ಬಗ್ಗೆ ಸ್ವಲ್ಪ ಎಚ್ಚರವಾಗಿರಿ. ಜವಳಿ ಉದ್ಯಮಕ್ಕೆ ಕಚ್ಛಾ ವಸ್ತುಗಳನ್ನು ಪೂರೈಕೆ ಮಾಡುವವರಿಗೆ ಬೇಡಿಕೆ ಹೆಚ್ಚಾಗುವುದು. ಕೆಲವರಿಗೆ ಉದ್ಯೋಗದ ಸ್ಥಳದಲ್ಲಿ ಪದೋನ್ನತಿ ಇರುತ್ತದೆ. ಹಿರಿಯರು ತಮ್ಮ ಆಸ್ಥಿಯನ್ನು ಹಂಚುವಾಗ ನಿಮಗೂ ಸಹ ಕೊಡುವರು. ನೀವು ಯೋಜಿಸಿದ್ದ ಕಾರ್ಯ ನೆರವೇರಲು ಅಧಿಕ ಹಣ ಖರ್ಚಾಗುವ ಸಾಧ್ಯತೆಗಳಿವೆ. ಸಾಮಾಜಿಕ ಹೋರಾಟದಲ್ಲಿ ಭಾಗವಹಿಸಲು ನಿಮಗೆ ಕರೆ ಬರಬಹುದು.

ಕುಂಭ: ಧನಿಷ್ಠ 3,4, ಶತಭಿಷ, ಪೂರ್ವಾಭಾದ್ರ 1,2,3
ಲೇವಾದೇವಿ ಮಾಡುವವರ ಹಳೇ ಬಾಕೀ ಹಣ ವಸೂಲಾಗುವುದು. ಕೃಷಿಯನ್ನು ವಿಸ್ತರಣೆಯನ್ನು  ಮಾಡುವವರಿಗೆ ಈಗ ಉತ್ತಮ ಕಾಲ. ನವೀನ ಕೃಷಿಯನ್ನು ಅಳವಡಿಸಿಕೊಳ್ಳುವವರಿಗೆ ಉತ್ತಮ ಸಹಾಯಧನ ಸಿಗುತ್ತದೆ. ನಿಮ್ಮ ಹೆಸರನ್ನು ಕೆಲವರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಬಹುದು. ಅತಿಥಿಗಳನ್ನು ಆದರದಿಂದ ಸತ್ಕರಿಸಿ ಸಂತೋಷಿಸುವಿರಿ. ನಿಮ್ಮ ವೈಯಕ್ತಿಕ  ಆಗು ಹೋಗುಗಳನ್ನು ಸರಿಯಾಗಿ ಗಮನಿಸಿರಿ. ಅದರಿಂದ ನಿಮಗೇ ಲಾಭ.

ಮೀನ: ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ
ನಿಮ್ಮ ಪ್ರೀತಿ ಪ್ರೇಮಗಳು ಬಹಿರಂಗಗೊಂಡು ಹಿರಿಯರು ಮುನಿಸು ತೋರಿದರೂ ನಂತರ ಅವರು ಒಪ್ಪಿಗೆಯನ್ನು ಸೂಚಿಸುವರು. ಆಟೋಮೋಬೈಲ್ ದುರಸ್ತಿಗಾರರಿಗೆ ಉತ್ತಮ ವ್ಯವಹಾರ ನಡೆದು ಸಂಪಾದನೆ ಹೆಚ್ಚಾಗುವುದು. ಸ್ವಂತ ಉದ್ದಿಮೆಯನ್ನು ನಡೆಸುತ್ತಿರುವವರಿಗೆ ಸ್ವಲ್ಪ ಪ್ರಗತಿ ಇದೆ. ನಿಂತಿದ್ದ ಆದೇಶಗಳು ಪುನಃ ಚಾಲನೆಯಾಗಿ ಉತ್ಪಾದನೆ ಹೆಚ್ಚುವುದು. ಅತಿಯಾದ ಆತ್ಮವಿಶ್ವಾಸದಿಂದ ದೊಡ್ಡ ಮಟ್ಟದ ಹೂಡಿಕೆಯನ್ನು ಮಾಡಬೇಡಿರಿ. ಹಂತ ಹಂತವಾಗಿ ಹೂಡಿಕೆಯನ್ನು ಮಾಡಿರಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.