ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಸಿಕೊಳ್ಳುತ್ತಿದೆ ಓಜೋನ್ ಪದರ: ಸುಸ್ಥಿರ ಭವಿಷ್ಯಕ್ಕೆ ಇನ್ನೂ ಏನೆಲ್ಲಾ ಆಗಬೇಕು

ಫ್ರಿಡ್ಜ್‌, ಎಸಿ ತಂತ್ರಜ್ಞಾನ ಸುಧಾರಿಸಲಿ
Last Updated 16 ಸೆಪ್ಟೆಂಬರ್ 2019, 14:45 IST
ಅಕ್ಷರ ಗಾತ್ರ

ವಾಯುಮಂಡಲದಲ್ಲಿ ಅವ್ಯಾಹತವಾಗಿ ಪಸರಿಸುತ್ತಿರುವ ಹೊಗೆಯಲ್ಲಿನ ನೈಟ್ರೊಜನ್ ಕಣಗಳು ವಿಷಕಾರಿ ಓಝೋನ್ ಅನಿಲವನ್ನು ಉತ್ಪಾದಿಸುತ್ತವೆ. ಓಝೋನ್ ಎತ್ತರದಲ್ಲಿ ಇದ್ದರೆ ಅದು ಭೂಮಿಗೆ ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತದೆ. ಬದಲಿಗೆ ನಮ್ಮದೇಹವನ್ನು ಹೊಕ್ಕರೆ ಶರೀರವೇ ನಂಜಿನ ಗೂಡಿನಂತಾಗುತ್ತದೆ. ಭೂಮಿಯ ಮೇಲೆ ಓಝೋನ್ ಪದರ ಆವರಿಸಿರುವುದರಿಂದ ಸೂರ್ಯನ ಉಗ್ರ ತಾಪ ನಮ್ಮನ್ನು ಬಾಧಿಸುತ್ತಿಲ್ಲ.

ಓಝೋನ್‌ ಪದರದ ಹಾನಿಯಿಂದ ನೇರಳಾತೀತ ಕಿರಣಗಳು ಭೂಮಿಯನ್ನು ನೇರವಾಗಿ ಪ್ರವೇಶ ಮಾಡಿ, ಮಾನವನ ದೇಹ ಹಾಗೂ ಜಲಚರ ಸೇರಿದಂತೆ ಜೀವ ಸಂಕುಲಕ್ಕೆ ಮಾರಕವಾಗಲಿದೆ. ಇದನ್ನು ತಡೆಯದಿದ್ದರೆ ಭೂಮಿಯ ನಾಶಕ್ಕೆ ನಾಂದಿ ಹಾಡಿದಂತೆ. ಅಂದಹಾಗೆ ಇಂದು (ಸೆ.16)ವಿಶ್ವ ಓಝೋನ್ ದಿನ. ವಿಶ್ವಸಂಸ್ಥೆಯ ಪರಿಸರ ವಿಭಾಗವು '32 ವರ್ಷ ಮತ್ತು ಗುಣಪಡಿಸುವ ಪ್ರಕ್ರಿಯೆ' (32 years and healing) ಎಂಬ ಪದಗುಚ್ಛವನ್ನು2019ರ ವಿಶ್ವ ಓಝೋನ್ ದಿನದ ವಿಶಿಷ್ಟ ಘೋಷಣೆಎಂದು ಪ್ರಕಟಿಸಿದೆ.

ಭೂಮಿಯ ಸ್ಯಾಟಲೈಟ್‌ ಚಿತ್ರ: ನಾಸಾ
ಭೂಮಿಯ ಸ್ಯಾಟಲೈಟ್‌ ಚಿತ್ರ: ನಾಸಾ

ಓಝೋನ್ ಪದರ ಮತ್ತು ಹವಾಮಾನವನ್ನು ರಕ್ಷಿಸಲು ಮೂರು ದಶಕಗಳ ಕಾಲ ಅಂತರರಾಷ್ಟ್ರೀಯ ಸಮುದಾಯ ಪರಸ್ಪರ ಸಹಕಾರ ನೀಡಬೇಕು ಎನ್ನುವುದು ಈ ಘೋಷಣೆಯ ಆಶಯ. ಆರೋಗ್ಯವಂತ ಜನರನ್ನು ಮತ್ತು ಆರೋಗ್ಯಕರ ಭೂಮಿಯನ್ನು ಉಳಿಸಿಕೊಳ್ಳಲು ಓಝೋನ್ ಅನಿವಾರ್ಯ ಎನ್ನುವುದನ್ನು ಇದು ನಮ್ಮೆಲ್ಲರಿಗೂ ನೆನಪಿಸಿದೆ.

ಓಝೋನ್ ಪದರ ಕ್ಷೀಣಿಸಲು ಹವಾನಿಯಂತ್ರಣ ಸಾಧನಗಳು (ಎಸಿ), ಪ್ರಿಡ್ಜ್ ಮತ್ತು ಇತರೆ ಉತ್ಪನ್ನಗಳಿಂದ ಬಿಡುಗಡೆಯಾಗುವ ಅಪಾಯಕಾರಿ ರಾಸಾಯನಿಕಗಳು ಶೇ99ರಷ್ಟು ಕಾರಣ.

ಚೇತರಿಸಿಕೊಳ್ಳುತ್ತಿದೆ ಓಝೋನ್

2018ಕ್ಕೆ ಕೊನೆಗೊಂಡಂತೆ ಓಝೋನ್ ಪದರದ ಹಾನಿಯ ಕುರಿತಾದ ಇತ್ತೀಚಿನ ವೈಜ್ಞಾನಿಕ ಅಧ್ಯಯನದ ವರದಿ ಪ್ರಕಾರ, ಓಝೋನ್ ಪದರದ ಹಾನಿಗೊಳಗಾದ ಭಾಗಗಳು 2000ನೇ ವರ್ಷದಿಂದೀಚೆಗೆ ಪ್ರತಿ ದಶಕಕ್ಕೆ ಶೇ1-3ರ ಪ್ರಮಾಣದಲ್ಲಿ ಚೇತರಿಸಿಕೊಳ್ಳುತ್ತಿದೆ. ಯೋಜಿತ ಪ್ರಮಾಣದಲ್ಲಿ ಚೇತರಿಕೆ ಮುಂದುವರಿದರೆ ಉತ್ತರಾರ್ಧ ಗೋಳಮತ್ತು ಸಮವಿಭಾಜಕ ರೇಖೆಯ ಮೇಲಿರುವಓಝೋನ್ 2030ರ ವೇಳೆಗೆ ಸಂಪೂರ್ಣವಾಗಿ ಸರಿಯಾಗಲಿದೆ. ಇದೇ ಪ್ರಮಾಣದಲ್ಲಿ ಚೇತರಿಕೆ ಮುಂದುವರಿದರೆದಕ್ಷಿಣಾರ್ಧಗೋಳವು2050ರ ದಶಕದಲ್ಲಿಮತ್ತು ಧ್ರುವ ಪ್ರದೇಶಗಳಲ್ಲಿ 2060ರ ವೇಳೆಗೆ ಓಝೋನ್ ಪದರವು ಚೇತರಿಕೆ ಕಾಣಲಿದೆ.

ಸಂರಕ್ಷಣಾ ಪ್ರಯತ್ನದ ಫಲ

ಹವಾಮಾನ ಬದಲಾವಣೆ ವಿರುದ್ಧದ ಹೋರಾಟಗಳು 1990ರಿಂದ 2010ರವರೆಗೆ ಅಂದಾಜು 13,500 ಕೋಟಿ ಟನ್‌ಗೆಸಮನಾದ ಇಂಗಾಲದ ಡೈ ಆಕ್ಸೈಡ್ ಹೊರ ಸೂಸುವಿಕೆಯನ್ನು ತಡೆದಿವೆ. ಈ ಮೂಲಕ ಓಝೋನ್ ಪದರ ಸಂರಕ್ಷಣಾ ಪ್ರಯತ್ನಗಳಿಗೆ ಸಹಕಾರಿಯಾಗಿವೆ ಎಂದು ವಿಶ್ವಸಂಸ್ಥೆ ಹೇಳಿದೆ.

ವಿಶ್ವ ಓಝೊನ್ ದಿನದಂದು ನಾವು ನಮ್ಮ ಯಶಸ್ಸನ್ನು ಆಚರಿಸಬಹುದು. ಆದರೆ, ನಾವೆಲ್ಲರೂ ಈ ಫಲಪ್ರದವಾದ ಬೆಳವಣಿಗೆಯನ್ನು ಹೆಚ್ಚಿಸಲು ಜಾಗರೂಕರಾಗಬೇಕು. ಓಝೋನ್ ಪದರವನ್ನು ಹಾನಿಗೊಳಿಸುವ ಅಕ್ರಮಣಕಾರಿ ಚಟುವಟಿಕೆಗಳನ್ನು ತಡೆಯಬೇಕು. ಈ ನಿಟ್ಟಿನಲ್ಲಿ 2019ರ ಜನವರಿಯಿಂದ ವಿಶ್ವಮಟ್ಟದಲ್ಲಿ ಜಾರಿಗೆ ತರಲಾದ ಮಾಂಟ್ರಿಯಲ್ ‘ಕಿಗಾಲಿ' ತಿದ್ದುಪಡಿ ನಿಯಮಗಳನ್ನು ಪೂರ್ಣ ಹೃದಯದಿಂದ ಬೆಂಬಲಿಸಬೇಕು ಎಂದು ವಿಶ್ವಸಂಸ್ಥೆ ಎಲ್ಲ ದೇಶಗಳಿಗೂಮನವಿ ಮಾಡಿದೆ.

ಹವಾಮಾನ ವೈಪರಿತ್ಯ ಹಾಗೂ ತಾಪಮಾನ ಏರಿಕೆಗೆ ಕಾರಣವಾಗುವ ಅನಿಲಗಳಾದ ಹೈಡ್ರೋಫ್ಲೋರೊಕಾರ್ಬನ್ (ಎಚ್ಎಫ್ಸಿ) ಅನ್ನು ಹಂತಹಂತವಾಗಿ ಕಡಿಮೆಗೊಳಿಸಬೇಕು. ಈ ಬದಲಾವಣೆಯ ಮೂಲಕ ಈ ಶತಮಾನದ ಅಂತ್ಯದ ವೇಳೆಗೆ 0.4 ಡಿಗ್ರಿ ಸೆಲ್ಸಿಯಸ್ ವರೆಗೆ ಏರಿಕೆಯಾಗಬಹುದಾದ ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕಿ,ಓಝೋನ್ ಪದರವನ್ನು ರಕ್ಷಿಸಬಹುದು.

ಎಸಿ, ಪ್ರಿಡ್ಜ್ ಇತರ ತಂಪುಕಾರಕ ಉತ್ಪನ್ನಗಳ ಉಧ್ಯಮಗಳಲ್ಲಿ ಇಂಧನ ದಕ್ಷತೆಯ ಸುದಾರಣೆಗಳೊಂದಿಗೆ ಎಚ್ಎಫ್ಸಿ ಅನಿಲ ಹೊರ ಸೂಸುವಿಕೆಯನ್ನು ಹಂತ ಹಂತವಾಗಿ ಕಡಿಮೆಗೊಳಿಸಬೇಕು. ಈ ಮೂಲಕ, ನಾವು ದೊಡ್ಡಮಟ್ಟದಲ್ಲಿ ಹವಾಮಾನ ಸುಧಾರಣೆಯನ್ನು ಸಾಧಿಸಿ, ಲಾಭ ಪಡೆಯಬಹುದು ಎಂದು ಹೇಳಿರುವ ವಿಶ್ವಸಂಸ್ಥೆ, ‘ನಾವು ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಗುಣಪಡಿಸುತ್ತೇವೆ’ ಎಂಬ ವಿಶ್ವ ಒಗ್ಗಟ್ಟಿನ ಮಂತ್ರ ಪಠಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT