ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

World Radio Day 2022: ರೇಡಿಯೊದ ಚರಿತ್ರೆ, ಮಹತ್ವದ ಕುರಿತ ಮಾಹಿತಿ ಇಲ್ಲಿದೆ

Last Updated 13 ಫೆಬ್ರುವರಿ 2022, 10:26 IST
ಅಕ್ಷರ ಗಾತ್ರ

ಬೆಂಗಳೂರು: ಜಗತ್ತಿನಲ್ಲಿ ಅತಿ ಹೆಚ್ಚು ಬಳಕೆಯಾದ ಸಂವಹನ ಮಾಧ್ಯಮಗಳಲ್ಲಿ ರೇಡಿಯೊ ಸಹ ಒಂದು. ಸರ್ಕಾರದ ಸಂದೇಶಗಳನ್ನು ಸಾರ್ವಜನಿಕರಿಗೆ ತಲುಪಿಸಲು, ಜನರಿಗೆ ಜ್ಞಾನ, ಶಿಕ್ಷಣ ಹಾಗೂ ಮನರಂಜನೆ ನೀಡಲು ವ್ಯಾಪಕವಾಗಿ ಬಳಸಲ್ಪಟ್ಟ ಮಾಧ್ಯಮ ರೇಡಿಯೊ.

ಈ ಮಹತ್ವದ ದಿನವನ್ನು ‘ವಿಶ್ವ ರೇಡಿಯೊ ದಿನ’ ವನ್ನಾಗಿ ಆಚರಿಸಲು ಯುನೆಸ್ಕೊ ಹತ್ತು ವರ್ಷಗಳ ಹಿಂದೆ ತೀರ್ಮಾನಿಸಿತು. ವಿಶ್ವ ರೇಡಿಯೊ ದಿನದ ಹಿನ್ನೆಲೆಯಲ್ಲಿ ‘ರೇಡಿಯೊ’ ಬಗೆಗಿನ ಚರಿತ್ರೆ ಮತ್ತು ಸಂಬಂಧಿಸಿದ ಮಾಹಿತಿಗಳ ಬಗ್ಗೆ ಇಲ್ಲಿ ತಿಳಿಯಬಹುದು...

ವಿಶ್ವ ರೇಡಿಯೊ ದಿನ: ದಿನಾಂಕ

ಪ್ರತಿ ವರ್ಷ ಫೆಬ್ರವರಿ 13ರಂದು ವಿಶ್ವ ರೇಡಿಯೊ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ರೇಡಿಯೋ ದಿನ 2022: ಥೀಮ್

'ರೇಡಿಯೊ ಮತ್ತು ವಿಶ್ವಾಸ' ಎಂಬುದು ‘ವಿಶ್ವ ರೇಡಿಯೊ ದಿನದ 2022‘’ರ ಮುಖ್ಯ ಥೀಮ್‌ ಆಗಿದೆ. ಅತ್ಯಂತ ವಿಶ್ವಾಸಾರ್ಹ ಸುದ್ದಿ ಸಂಪನ್ಮೂಲಗಳಲ್ಲಿ ರೇಡಿಯೊ ಸಹ ಒಂದಾಗಿದೆ. ಆ ಹಿನ್ನೆಲೆಯಲ್ಲಿ 'ರೇಡಿಯೊ ಮತ್ತು ವಿಶ್ವಾಸ’ ವನ್ನು ಮುಖ್ಯ ಥೀಮ್‌ ಆಗಿ ಪರಿಗಣಿಸಲಾಗಿದೆ.

ಮೂರು ಸಬ್‌ ಥೀಮ್‌ಗಳು

*ರೇಡಿಯೊ ಮಾಧ್ಯಮದಲ್ಲಿ ವಿಶ್ವಾಸ
*ವಿಶ್ವಾಸ ಮತ್ತು ಪ್ರವೇಶಾವಕಾಶ
*ರೇಡಿಯೊ ಕೇಂದ್ರಗಳ ವಿಶ್ವಾಸ ಮತ್ತು ಕಾರ್ಯಸಾಧ್ಯತೆ

ವಿಶ್ವ ರೇಡಿಯೊ ದಿನ: ಇತಿಹಾಸ

2012 ರಲ್ಲಿ ಈ ದಿನವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಂತರಾಷ್ಟ್ರೀಯ ದಿನವನ್ನಾಗಿ ಘೋಷಿಸಿತು.

ವಿಶ್ವ ರೇಡಿಯೋ ದಿನ 2022: ಮಹತ್ವ

ರೇಡಿಯೊ ಅತ್ಯಂತ ಮಹತ್ವದ ಸಂವಹನ ಮಾಧ್ಯಮವಾಗಿದೆ. ಶೋಷಣೆಯ ವಿರುದ್ಧ ಧ್ವನಿ ಎತ್ತುವ ಮೂಲಕ ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ರೇಡಿಯೊ ಪ್ರಬಲ ಸಂವಹನ ಸಾಧನವಾಗಿದೆ. ನೈಸರ್ಗಿಕ ವಿಕೋಪದಂತಹ ಸಮಯದಲ್ಲಿ ತುರ್ತು ಸಂವಹನಕ್ಕಾಗಿ ರೇಡಿಯೊ ಮಹತ್ವದ ಪಾತ್ರ ವಹಿಸಿದೆ. ರೇಡಿಯೊದ ಈ ನಿರ್ಣಾಯಕ ಪಾತ್ರದ ಕುರಿತು ಜನರಿಗೆ ಅರಿವು ಮೂಡಿಸುವುದು ಈ ದಿನದ ಮಹತ್ವವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT