ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ರಾಜತರಂಗಿಣಿ'ಯಲ್ಲಿ ಖಗೋಳೀಯ ಘಟನೆಗಳು

Last Updated 5 ಜನವರಿ 2019, 19:30 IST
ಅಕ್ಷರ ಗಾತ್ರ

ಏಸು ಕ್ರಿಸ್ತನ ಆಗಮನದ ಸೂಚನೆಯನ್ನು ಆಕಾಶದಲ್ಲಿ ತೋರಿಸಿಕೊಟ್ಟದ್ದು ಒಂದು ಪ್ರಕಾಶಮಾನ ನಕ್ಷತ್ರ ಎಂಬುದು ಅನೇಕರ ಗಮನ ಸೆಳೆದಿದೆ. ಆ ನಕ್ಷತ್ರ ಯಾವುದು ಎಂಬುದನ್ನು ಹುಡುಕುವ ಕೆಲಸವೂ ನಡೆದಿದೆ. ಹ್ಯಾಲೀ ಧೂಮಕೇತುವನ್ನು ಕಂಡ ಮಹಾನ್ ಚಿತ್ರಕಾರ ಗಿಯೋತೋ ಅದನ್ನೇ ಈ ಸಂದರ್ಭಕ್ಕೆ ಹೊಂದಿಸಿ ರಚಿಸಿದ ಕಲಾಕೃತಿ ಇಂದು ಮಹತ್ವ ಪಡೆದಿದೆ.

ಭಾರತದಲ್ಲಿ ಇಂತಹ ಖಗೋಳೀಯ ವಿದ್ಯಮಾನಗಳ ದಾಖಲೆಗಳಿವೆಯೇ ಎಂದು ಹುಡುಕಲು ಹೊರಟವರಿಗೆ ನಿರಾಶೆ ಕಾದಿದೆ. ಏಕೆಂದರೆ ಚಿತ್ರವಿರಲಿ, ಯಾವುದೇ ಬಗೆಯ ದಾಖಲೆಯೂ ಸಿಗುವುದಿಲ್ಲ. ಖಗೋಳ ಪಠ್ಯಗಳಲ್ಲೂ ವಿಶೇಷ ಘಟನೆಗಳು ಮತ್ತು ಧೂಮಕೇತುವನ್ನು ಕಂಡ ಬಗ್ಗೆ ಪ್ರಸ್ತಾಪವಿಲ್ಲ. ಈ ಸಂದರ್ಭದಲ್ಲಿ ಒಂದು ಪರೋಕ್ಷ ಉಲ್ಲೇಖ ದೊರಕಿದೆ.

ಕಲ್ಹಣನ ರಾಜತರಂಗಿಣಿ ಎಂಬ ಗ್ರಂಥ ಇತಿಹಾಸಕಾರರಿಗೆ ಒಂದು ಅಮೂಲ್ಯ ಆಕರಗ್ರಂಥ. ಸುಮಾರು ಕ್ರಿ.ಪೂ. 2000ದಿಂದ ಕ್ರಿ.ಶ. 1600ವರೆಗಿನ ಕಾಶ್ಮೀರದ ಇತಿಹಾಸವನ್ನು ಇದು ಬಹಳ ಸ್ಪಷ್ಟವಾಗಿ ದಾಖಲಿಸಿದೆ. ವಾಸ್ತವದಲ್ಲಿ ಇದು ನಾಲ್ಕು ಗ್ರಂಥಗಳ ಒಂದು ಸಂಪುಟವೆನ್ನಬಹುದು. ಮೊದಲನೆಯ ಗ್ರಂಥವನ್ನು ಕಲ್ಹಣ 12ನೆಯ ಶತಮಾನದಲ್ಲಿ ಬರೆದಿದ್ದಾನೆ.

ಎರಡನೆಯದನ್ನು ಅವನ ಶಿಷ್ಯನಾದ ಜೋನರಾಜ ಬರೆದಿದ್ದು. ಕ್ರಿ.ಶ. 1459ರವರೆಗೂ ಅದು ಚರಿತ್ರೆಯನ್ನು ನಿರೂಪಿಸುತ್ತದೆ. ಶ್ರೀವರ ಎಂಬಾತ 1512ರಿಂದ 1600ವರೆಗಿನ ಇತಿಹಾಸವನ್ನು ಬರೆದಿದ್ದಾನೆ. ಇದಕ್ಕೆ ಜೈನ ರಾಜತರಂಗಿಣಿ ಎಂಬ ಹೆಸರಿದೆ. ಪ್ರಾಜ್ಞಭಟ್ಟ ಎಂಬಾತ ರಚಿಸಿದ್ದು 1512ರವರೆಗೆ; ಇದಕ್ಕೆ ರಾಜವಲ್ಲಿಪದಕ ಎಂಬ ಹೆಸರಿದೆ. 1512ರಿಂದ 1596ರವರೆಗಿನದನ್ನು ಶುಕ ಪೂರೈಸಿದ್ದಾನೆ. ಇದನ್ನು ಚತುರ್ಥ ರಾಜತರಂಗಿಣಿ ಎಂದು ಕರೆಯಲಾಗಿದೆ.

ಕಲ್ಹಣನು ತನ್ನ ಹಿಂದಿನ ಇತಿಹಾಸ ತಿಳಿಸುವ ಸಲುವಾಗಿ ಆಗ ಲಭ್ಯವಿದ್ದ ಎಲ್ಲ ಆಕರಗಳನ್ನೂ ಬಳಸಿಕೊಂಡಿದ್ದಾಗಿ ಹೇಳಿದ್ದಾನೆ. ಆದ್ದರಿಂದ ಆ ಮೂಲ ಆಕರಗ್ರಂಥಗಳು ನಮಗೆ ಲಭ್ಯವಿಲ್ಲವಾದರೂ ಕಲ್ಹಣ ಸೂಚಿಸಿರುವ ಕಾಲಾನುಕ್ರಮಣಿಕೆಯನ್ನು ಅನುಸರಿಸಿ ಇತಿಹಾಸದ ಮೈಲುಗಲ್ಲುಗಳನ್ನು ಗುರುತಿಸಬಹುದಾಗಿದೆ.

ರಾಜತರಂಗಿಣಿ ಕೃತಿಯುದ್ದಕ್ಕೂ ಬಳಸಿರುವ ಕಾಲಗಣನೆಯ ಮಾಪಕವನ್ನು ಲೌಕಿಕವರ್ಷ ಎಂದು ಕರೆಯಲಾಗಿದೆ. ಇದು ಕಾಶ್ಮೀರದಲ್ಲಿ ಪ್ರಚಲಿತವಿದ್ದ ಕಾಲ ಮಾಪಕ. ಇದನ್ನೇ ಸಪ್ತರ್ಷಿ ಸಂವತ್ ಎಂದೂ ಗುರುತಿಸಲಾಗಿದೆ. ಇದನ್ನು ಅರ್ಥೈಸಿಕೊಳ್ಳಲು ಅಗತ್ಯವಾದ ಸೂಚಿಯನ್ನು ಕಲ್ಹಣ ಒದಗಿಸಿದ್ದಾನೆ. ಆತ ಕಾರ್ಯರಚನೆ ಆರಂಭಿಸಿದ್ದು 4224ನೆಯ ಲೌಕಿಕ ವರ್ಷ; ಅಂದರೆ 1070ನೆಯ ಶಕವರ್ಷ.

ಶಕವರ್ಷ ಎಂಬುದು ಕ್ರಿ.ಶ.78 ರಿಂದ ಆರಂಭವಾಗುವುದರಿಂದ ಇದು ಕ್ರಿ.ಶ.1148 ಆಗುತ್ತದೆ. ಇದೇ ರೀತಿ ಇತರ ಸಂಪುಟಗಳ ರಚನೆಯ ಕಾಲವನ್ನೂ ತಿಳಿಯಬಹುದು. ಜೋನರಾಜನದು ಕ್ರಿ.ಶ. 1459ರಿಂದ 1470. ಶ್ರೀವರನ ರಚನೆ ಕ್ರಿ.ಶ. 1459 ಮತ್ತು ಶುಕನ ರಚನೆ ಇನ್ನೂ ತಡವಾಗಿ 16ನೆಯ ಶತಮಾನದಲ್ಲಿ. ಈ ಅಂಶವನ್ನು ಬಳಸಿ ಈ ಕೃತಿಯಲ್ಲಿ ಉಲ್ಲೇಖವಾಗಿರುವ ಖಗೋಳ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳಬಹುದು.

ಈ ಗ್ರಂಥಗಳಲ್ಲಿರುವ ಖಗೋಳೀಯ ಘಟನೆಗಳ ವರ್ಣನೆ ಬಹಳ ಸ್ವಾರಸ್ಯಕರವಾಗಿವೆ. ಮೊದಲನೆಯ ಉದಾಹರಣೆ:

‘ಆಕಾಶದ ಪೂರ್ವ ದಿಕ್ಕಿನಲ್ಲಿ ವಿಸ್ತಾರವಾದ ಬಾಲದ ಕೇತುವು ಕಾಣಿಸಿಕೊಂಡಿತು. ಅರಿಷ್ಟ ಸೂಚಕವಾದ ಇದನ್ನು ಬರ್‍ಹಾಂ ಖಾನನು ಪೂರ್ವದಲ್ಲಿ ನೋಡಿದನು.’

‘ಬಹಳ ದೀರ್ಫವಾಗಿದ್ದ ಬಾಲವು ಬಳ್ಳಿಯಂತೆ ವಿಸ್ತರಿಸಿ ಹಗಲಿನಲ್ಲಿ ಪಶ್ಚಿಮದಲ್ಲಿ ಕಾಣುತ್ತಿದ್ದುದನ್ನು ಜನರು ಕಂಡರು’.

ಮೊದಲನೆಯ ಶ್ಲೋಕದಲ್ಲಿ ಪೂರ್ವ ಎಂಬ ಪದ ಎರಡು ಬಾರಿ ಬಂದಿದೆ. ಮೊದಲನೆಯದು ದಿಕ್ಕನ್ನು ಸೂಚಿಸುತ್ತದೆ. ಎರಡನೆಯದು ‘ಮೊದಲು’ ಎಂಬ ಅರ್ಥದಲ್ಲಿದೆ. ಅಂದರೆ ಬರ್‍ಹಾಂ ಖಾನನು ಪೂರ್ವದಿಕ್ಕಿನಲ್ಲಿ (ಉಳಿದವರು ಗಮನಿಸುವುದಕ್ಕೂ) ಮೊದಲು ನೋಡಿದನು.

ಮುಂದೆ ಏಳನೆಯ ಅಧ್ಯಾಯದಲ್ಲಿ ಪುನಃ ಧೂಮಕೇತುಗಳ ಬಗ್ಗೆ ಉಲ್ಲೇಖವಿದೆ.

‘ಸರ್ವಜನರನ್ನೂ ವಿನಾಶಗೊಳಿಸುವುದಕ್ಕಾಗಿಯೇ ಬಂದಿದೆಯೋ ಎಂಬಂತೆ ಧೂಮಕೇತುವು ರಾತ್ರಿ ಉತ್ತರ ದಿಕ್ಕಿನಲ್ಲಿ ಕಾಣಿಸಿಕೊಂಡಿತು. ಪ್ರಕಾಶಮಾನವಾದ ಉದ್ದನೆಯ ಬಾಲವಿದ್ದ ಈ ಧೂಮಕೇತುವು ಕಾಲವು ಭೂಮಿಯನ್ನು ಕ್ಷಯಿಸಲು ಕಳಿಸಿರುವ ಕೊಡಲಿಯಂತೆ (ಧ್ರುಘಣ) ಕಾಣುತ್ತಿತ್ತು. ಶುಭ್ರ ಆಕಾಶದಲ್ಲಿ ಸದಾ ಬೆಳಗುತ್ತಿದ್ದು ಇದು ಎರಡು ತಿಂಗಳು ಪ್ರಕಾಶಿಸಿತು. ರಾಜನ ಚಿಂತೆಗೆ ಕಾರಣವಾಯಿತು’.

ಇಲ್ಲಿ ‘ಸದಾ’ ಎಂಬ ಪದವನ್ನು ಹೇಗೆ ಅರ್ಥೈಸಬಹುದು? ಹಗಲೂ ರಾತ್ರಿಯೂ ಕಾಣುತ್ತಿತ್ತು ಎನ್ನಬಹುದು; ಅಥವಾ ಎರಡು ತಿಂಗಳುಗಳಲ್ಲಿ ರಾತ್ರಿಯುದ್ದಕ್ಕೂ ಕಾಣಿಸಿತು ಎನ್ನಬಹುದು.

ಇದಾದ ಮುಂದಿನ ಶ್ಲೋಕದಲ್ಲಿ ಒಂದು ಗ್ರಹಣದ ಉಲ್ಲೇಖವಿದೆ.

ಏಕಪಕ್ಷೇಭವಚ್ಚಂದ್ರಸೂರ್ಯಗ್ರಹಣ ಸಂಸ್ಥಿತಿಃ |

ಏಕಪಕ್ಷ ಮಿವಾದಾತುಂ ರಾಜ್ಯಂ ರಾಜವಿಪರ್ಯಯಾತ್ ||

ದೃಷ್ಟೋಂಬರೇ ದ್ವಿತೀಯಸ್ಯಾಂ ಸುಧಾಂಶುಸ್ತತ್ರ ತೈರ್ಜನೈ: |

ಉತ್ತಾನ ಇವ ಭೂಪೇಶಮನ್ಯಂ ಸೂಚಯಿತು ದಿಶಾಮ್ ||

ಇದರ (1894ರಲ್ಲಿ ದತ್ತ ಅವರು ಮಾಡಿರುವ) ಅನುವಾದ ಹೀಗಿದೆ.

‘ಒಂದೇ ಪಕ್ಷದಲ್ಲಿ ಸೂರ್ಯ ಮತ್ತು ಚಂದ್ರರ ಗ್ರಹಣಗಳುಂಟಾಗಿ ರಾಜನಿಗೆ ಚಿಂತೆಯಾಯಿತು. ಗೂಬೆಯು ಛತ್ರಿಯ ಕೆಳಗೆ ಕೂಗುತ್ತಿತ್ತು. ಎರಡನೆಯ ದಿನ ಅವರು ಆ ಕಾಂತಿ (ಗ್ರಹ?) ಚಂದ್ರನ ಜೊತೆಗೆ ಇರುವುದನ್ನು ನೋಡಿದರು’.

ಆದರೆ ಇದನ್ನು ಹೀಗೂ ವ್ಯಾಖ್ಯಾನಿಸಬಹುದು.

‘ರಾಜ್ಯವು (ಪ್ರಜೆಗಳು) ರಾಜನಿಂದ ವಿಮುಖರಾಗಿದ್ದರೆ, ಅಂದರೆ ರಾಜನು ಏಕಪಕ್ಷೀಯವಾಗಿ ಆಡಳಿತ ನಡೆಸುತ್ತಿದ್ದರೆ, ಒಂದೇ ಪಕ್ಷದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಣಗಳುಂಟಾಗುವ ಪರಿಸ್ಥಿತಿಯಂತೆಯೇ ಆಗುತ್ತದೆ.’

ಏಕಪಕ್ಷ ಎಂಬ ಪದವನ್ನು ಎರಡು ಬಾರಿ ಬಳಸಿರುವದರಲ್ಲಿ ಎರಡು ಬೇರೆ ಬೇರೆ ಅರ್ಥಗಳು ಅಡಗಿವೆ. ಎರಡು ಗ್ರಹಣಗಳು ಒಟ್ಟಿಗೇ ಬಂದಲ್ಲಿ ಅಪಾಯವಿದೆ ಎಂಬರ್ಥವೂ ಅಡಗಿದೆ. ಇದಕ್ಕೆ ಕಾರಣವೇನಿರಬಹುದು? ಇದಕ್ಕೆ ಉತ್ತರದ ಸೂಚನೆಯೂ ಸಿಗುತ್ತದೆ. ನಾವೀಗ ಈ ಗ್ರಹಣದ ಉಲ್ಲೇಖದಿಂದ ಈ ದಿನಾಂಕವನ್ನು ಖಚಿತವಾಗಿ ಹೇಳಬಹುದು. ಶ್ರೀವರನು ಗ್ರಹಣವನ್ನೇ ನೇರವಾಗಿ ಹೇಳಿಲ್ಲ. ಆದರೆ, ಅವನು ಕೃತಿ ರಚನೆ ಮಾಡಿದ ಅವಧಿಯಲ್ಲಿ ಎರಡು ಗ್ರಹಣಗಳ ಸಂಭವವನ್ನು ಲೆಕ್ಕ ಮಾಡಿ ನೋಡಬಹುದು.

ಸಾಧಾರಣವಾಗಿ ಗ್ರಹಣಗಳು ಒಟ್ಟಾಗಿಯೇ ಬರುತ್ತವೆ. ಆದರೆ, ಎರಡೂ ಒಂದೇ ಭೂಭಾಗದಿಂದ ಕಾಣುವ ಸಂದರ್ಭವನ್ನು ಮಾತ್ರ ಇಲ್ಲಿ ಪರಿಗಣಿಸಬೇಕು. 1459ರಿಂದ 1473ರ ಅವಧಿಯಲ್ಲಿ ಐದಾರು ಸಂದರ್ಭಗಳಿವೆ. 1460ರ ಜುಲೈ 3ರಂದು ಚಂದ್ರಗ್ರಹಣ ನಡೆಯಿತು. ಜುಲೈ 18ರಂದು ಪೂರ್ಣ ಸೂರ್ಯಗ್ರಹಣವೂ ಉಂಟಾಯಿತಾದರೂ ಶ್ರೀನಗರದಿಂದ ಪಾರ್ಶ್ವಗ್ರಹಣ ಮಾತ್ರ ಕಂಡಿತು. ಇದೇ ಕೃತಿಯಲ್ಲಿ ಉಲ್ಲೇಖಿತವಾಗಿರುವುದು ಎಂದಾದರೆ ಇದಕ್ಕೆ ಸ್ವಲ್ಪ ಮುಂಚೆ ಕಂಡಿರಬಹುದಾದ ಧೂಮಕೇತು ಯಾವುದಿರಬಹುದು ಎಂದು ಹುಡುಕಬಹುದು.

1456ರಲ್ಲಿ ಬಂದಿದ್ದ ಧೂಮಕೇತುವನ್ನು ಅನೇಕರು ದಾಖಲಿಸಿದ್ದಾರೆ. ಇದೇ ಹ್ಯಾಲೀ ಧೂಮಕೇತು. ಇದಲ್ಲದೆ 1460ರಲ್ಲಿ ಒಂದು ಬಹು ದೊಡ್ಡ ಧೂಮಕೇತುವೂ ಬಂದಿತ್ತು.

ಆದರೆ 1460ರ ಹೊತ್ತಿಗೆ ಶ್ರೀವರ ಉಲ್ಲೇಖಿಸಿದ್ದು ಇವುಗಳಲ್ಲಿ ಯಾವುದನ್ನು ಎಂದು ಖಚಿತವಾಗಿ ಹೇಳುವಂತಿಲ್ಲ.

ಮೇಲೆ ಸೂಚಿಸಿದ ಅನುವಾದದಲ್ಲಿ ಬಿಟ್ಟುಹೋಗಿರುವ ಒಂದು ಅಂಶವನ್ನು ಇಲ್ಲಿ ಬಳಸಿಕೊಳ್ಳೋಣ. ‘ಭೂಪೇಶಮನ್ಯಂ ಸೂಚಯಿತಂ’ ಎಂದರೆ ಇನ್ನೊಬ್ಬ ಹೊಸ ರಾಜನನ್ನು ಸೂಚಿಸುವಂತೆ ಬೆಳಗುತ್ತಿದ್ದ ಬಿದಿಗೆಯ ಚಂದ್ರನನ್ನು ಕಂಡರು ಎನ್ನಬಹುದು. ಆದರೆ, ಇಲ್ಲಿ ದ್ವಿತೀಯಾ ಎಂಬುದನ್ನು ಬಿದಿಗೆ ಎಂದು ಅರ್ಥೈಸಬಹುದೇ? ಇಲ್ಲದಿದ್ದಲ್ಲಿ ಚಂದ್ರನ ಪಕ್ಕ ಕಂಡ ಇನ್ನೊಂದು ಧೂಮಕೇತು ಇರಬಹುದೇ?

1470ರಲ್ಲಿ ಕಂಡ ಧೂಮಕೇತುವಿನ ಬಾಲ ಅರ್ಧ ಆಕಾಶವನ್ನೇ ವ್ಯಾಪಿಸಿತ್ತು. (ಕ್ಷಿತಿಜದಿಂದ ನೆತ್ತಿಗೆ 90 ಡಿಗ್ರಿಗಳು; ಧೂಮಕೇತು ಸುಮಾರು 50 ಡಿಗ್ರಿಗಳ ಎತ್ತರಕ್ಕೆ ವಿಸ್ತರಿಸಿತ್ತು). ಸುಮಾರು 40 ದಿನಗಳ ಕಾಲ ವಿಜೃಂಭಿಸಿತ್ತು. ಲಘುಸಪ್ತರ್ಷಿಮಂಡಲದ ಮೂಲಕ ಹಾದುಹೋಗುವಾಗ ರಾತ್ರಿ ಇಡೀ ಕಾಣಿಸಿತ್ತು. ಅದೇ ಸಮಯದಲ್ಲಿ ಯೂರೋಪ್‍ನಲ್ಲಿ ಪ್ಲೇಗು, ಭೀಕರವಾದ ಬರಗಾಲ ಉಂಟಾಗಿತ್ತು ಎಂಬ ಉಲ್ಲೇಖಗಳಿವೆ.

ಶ್ರೀವರ ಸೂಚಿಸಿರುವಂತೆ ರಾಜನ ಮರಣ 1470ರ ಫೆಬ್ರುವರಿಯಲ್ಲಿ; ಧೂಮಕೇತು ಬಂದದ್ದು ಜನವರಿಯಲ್ಲಿ. ಆದ್ದರಿಂದ ಈ ಎರಡೂ ಘಟನೆಗಳನ್ನು ಆತ ಸೂಚಿಸಿರಬೇಕು. ಈ ಕಾಲಾನುಕ್ರಮಣಿಕೆಯನ್ನು ಆಧರಿಸಿ, ಮೊದಲನೆ ಸಂಪುಟದ ಬರ್‍ಹಾಂ ಖಾನನ ಕಾಲದ ವರ್ಣನೆ ಕ್ರಿ.ಶ.1378 ರಲ್ಲಿ ಬಂದಿದ್ದ ಹ್ಯಾಲೀ ಧೂಮಕೇತು ಎನ್ನಬಹುದು. ನಾಲ್ಕನೆಯ ಸಂಪುಟದಲ್ಲಿ ಪ್ರಾಜ್ಞಭಟ್ಟ ಮತ್ತು ಶುಕ ಲೌಕಿಕ ವರ್ಷ 4607ರಲ್ಲಿ ಧೂಮಕೇತುವೊಂದು ಕಂಡದ್ದನ್ನು ಉಲ್ಲೇಖಿಸುತ್ತಾರೆ. ಇದು ಕ್ರಿ.ಶ. 1531. ಆ ಇಸವಿಯಲ್ಲಿ ಬಂದಿದ್ದ ಹ್ಯಾಲೀ ಧೂಮಕೇತು ಎಂಬುದರಲ್ಲಿ ಸಂಶಯವಿಲ್ಲ.

ಎರಡು ವರ್ಷಗಳ ನಂತರ ಧೂಮಕೇತುವಿನ ಪ್ರಸ್ತಾಪವಿದೆ.

‘ಜ್ಯೇಷ್ಠ ಮಾಸದಲ್ಲಿ ಮೊಘಲರು ತಮ್ಮ ದೇಶಕ್ಕೆ ಹಿಂದಿರುಗಿದರು... ಧೂಮಕೇತುವೊಂದು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಂತೆ ಕಾಣುತ್ತಿತ್ತು. ಕೊಯ್ಲಿಗೆ ಸಿದ್ಧವಾಗಿದ್ದ ಪೈರಿನ ಮೇಲೆ ಆಕಾಶದಿಂದ ತಾರೆಗಳು ಬಿದ್ದವು... ಧೂಮಕೇತು ಕಾಣಿಸಿತು.’

ಇಲ್ಲಿ ಸೂಚಿತವಾಗಿರುವ ಎರಡೂ ಧೂಮಕೇತುಗಳು ಒಂದೇ ಆಗಿರಬಹುದು. ಏಕೆಂದರೆ ಆ ವರ್ಷ ಹ್ಯಾಲೀ ಧೂಮಕೇತುವು ವರ್ಷದುದ್ದಕ್ಕೂ ಕಂಡುಬಂದಿತ್ತು. ಮಳೆಗಾಲದಲ್ಲಿ ಕಾಣದಂತಾಗಿ ಪುನಃ ಕಂಡಿರಬಹುದು.

1532ರಲ್ಲಿ ಇನ್ನೊಂದು ದೊಡ್ಡ ಧೂಮಕೇತು ಬಂದಿದ್ದ ದಾಖಲೆಗಳಿವೆ. ಇವೆರಡೂ ಧೂಮಕೇತುಗಳು ಬಹಳ ಪ್ರಕಾಶಮಾನವಾಗಿದ್ದವೆಂದು ದಾಖಲೆಗಳು ತಿಳಿಸುತ್ತವೆ. ವಿಶ್ವಕೋಶದಲ್ಲಿ ‘ಟೆರಿಬಲ್’ ಎಂದು ಷರಾ ನಮೂದಾಗಿದೆ. ಆದ್ದರಿಂದ ರಾಜತರಂಗಿಣಿಯಲ್ಲಿರುವುದು ಎರಡು ಬೇರೆ ಬೇರೆ ಧೂಮಕೇತುಗಳೂ ಆಗಿರಬಹುದು.

ಪಾಶ್ಚಾತ್ಯ ವಿದ್ವಾಂಸರ ಕಟು ಟೀಕೆ – ಖಗೋಳ ವಿಜ್ಞಾನದಲ್ಲಿ ಇಷ್ಟೊಂದು ಪಾಂಡಿತ್ಯ ಪಡೆದುಕೊಂಡಿದ್ದ ಭಾರತೀಯರು ವ್ಯವಸ್ಥಿತವಾದ ವೀಕ್ಷಣೆಗಳನ್ನೇಕೆ ಬರೆದಿಟ್ಟಿಲ್ಲ? ಈ ಸಂದರ್ಭದಲ್ಲಿ ರಾಜತರಂಗಿಣಿಯ ಈ ವಿವರಣೆಗಳು ವಿಶೇಷ ಮಹತ್ವ ಪಡೆಯುತ್ತವೆ. (ಮೂಲ ಇಂಗ್ಲಿಷ್ ಲೇಖನ ಕರೆಂಟ್ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಆದರೆ 1460ರ ಹೊತ್ತಿಗೆ ಶ್ರೀವರ ಉಲ್ಲೇಖಿಸಿದ್ದು ಇವುಗಳಲ್ಲಿ ಯಾವುದನ್ನು ಎಂದು ಖಚಿತವಾಗಿ ಹೇಳುವಂತಿಲ್ಲ.

ಮೇಲೆ ಸೂಚಿಸಿದ ಅನುವಾದದಲ್ಲಿ ಬಿಟ್ಟುಹೋಗಿರುವ ಒಂದು ಅಂಶವನ್ನು ಇಲ್ಲಿ ಬಳಸಿಕೊಳ್ಳೋಣ. ‘ಭೂಪೇಶಮನ್ಯಂ ಸೂಚಯಿತಂ’ ಎಂದರೆ ಇನ್ನೊಬ್ಬ ಹೊಸ ರಾಜನನ್ನು ಸೂಚಿಸುವಂತೆ ಬೆಳಗುತ್ತಿದ್ದ ಬಿದಿಗೆಯ ಚಂದ್ರನನ್ನು ಕಂಡರು ಎನ್ನಬಹುದು. ಆದರೆ, ಇಲ್ಲಿ ದ್ವಿತೀಯಾ ಎಂಬುದನ್ನು ಬಿದಿಗೆ ಎಂದು ಅರ್ಥೈಸಬಹುದೇ? ಇಲ್ಲದಿದ್ದಲ್ಲಿ ಚಂದ್ರನ ಪಕ್ಕ ಕಂಡ ಇನ್ನೊಂದು ಧೂಮಕೇತು ಇರಬಹುದೇ? 1470ರಲ್ಲಿ ಕಂಡ ಧೂಮಕೇತುವಿನ ಬಾಲ ಅರ್ಧ ಆಕಾಶವನ್ನೇ ವ್ಯಾಪಿಸಿತ್ತು. (ಕ್ಷಿತಿಜದಿಂದ ನೆತ್ತಿಗೆ 90 ಡಿಗ್ರಿಗಳು; ಧೂಮಕೇತು ಸುಮಾರು 50 ಡಿಗ್ರಿಗಳ ಎತ್ತರಕ್ಕೆ ವಿಸ್ತರಿಸಿತ್ತು). ಸುಮಾರು 40 ದಿನಗಳ ಕಾಲ ವಿಜೃಂಭಿಸಿತ್ತು. ಲಘುಸಪ್ತರ್ಷಿಮಂಡಲದ ಮೂಲಕ ಹಾದುಹೋಗುವಾಗ ರಾತ್ರಿ ಇಡೀ ಕಾಣಿಸಿತ್ತು. ಅದೇ ಸಮಯದಲ್ಲಿ ಯೂರೋಪ್‍ನಲ್ಲಿ ಪ್ಲೇಗು, ಭೀಕರವಾದ ಬರಗಾಲ ಉಂಟಾಗಿತ್ತು ಎಂಬ ಉಲ್ಲೇಖಗಳಿವೆ.

ಶ್ರೀವರ ಸೂಚಿಸಿರುವಂತೆ ರಾಜನ ಮರಣ 1470ರ ಫೆಬ್ರುವರಿಯಲ್ಲಿ; ಧೂಮಕೇತು ಬಂದದ್ದು ಜನವರಿಯಲ್ಲಿ. ಆದ್ದರಿಂದ ಈ ಎರಡೂ ಘಟನೆಗಳನ್ನು ಆತ ಸೂಚಿಸಿರಬೇಕು. ಈ ಕಾಲಾನುಕ್ರಮಣಿಕೆಯನ್ನು ಆಧರಿಸಿ, ಮೊದಲನೆ ಸಂಪುಟದ ಬರ್‍ಹಾಂ ಖಾನನ ಕಾಲದ ವರ್ಣನೆ ಕ್ರಿ.ಶ.1378 ರಲ್ಲಿ ಬಂದಿದ್ದ ಹ್ಯಾಲೀ ಧೂಮಕೇತು ಎನ್ನಬಹುದು. ನಾಲ್ಕನೆಯ ಸಂಪುಟದಲ್ಲಿ ಪ್ರಾಜ್ಞಭಟ್ಟ ಮತ್ತು ಶುಕ ಲೌಕಿಕ ವರ್ಷ 4607ರಲ್ಲಿ ಧೂಮಕೇತುವೊಂದು ಕಂಡದ್ದನ್ನು ಉಲ್ಲೇಖಿಸುತ್ತಾರೆ. ಇದು ಕ್ರಿ.ಶ. 1531. ಆ ಇಸವಿಯಲ್ಲಿ ಬಂದಿದ್ದ ಹ್ಯಾಲೀ ಧೂಮಕೇತು ಎಂಬುದರಲ್ಲಿ ಸಂಶಯವಿಲ್ಲ.

ಎರಡು ವರ್ಷಗಳ ನಂತರ ಧೂಮಕೇತುವಿನ ಪ್ರಸ್ತಾಪವಿದೆ.

‘ಜ್ಯೇಷ್ಠ ಮಾಸದಲ್ಲಿ ಮೊಘಲರು ತಮ್ಮ ದೇಶಕ್ಕೆ ಹಿಂದಿರುಗಿದರು... ಧೂಮಕೇತುವೊಂದು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಂತೆ ಕಾಣುತ್ತಿತ್ತು. ಕೊಯ್ಲಿಲಿಗೆ ಸಿದ್ಧವಾಗಿದ್ದ ಪೈರಿನ ಮೇಲೆ ಆಕಾಶದಿಂದ ತಾರೆಗಳು ಬಿದ್ದವು... ಧೂಮಕೇತು ಕಾಣಿಸಿತು.’

ಇಲ್ಲಿ ಸೂಚಿತವಾಗಿರುವ ಎರಡೂ ಧೂಮಕೇತುಗಳು ಒಂದೇ ಆಗಿರಬಹುದು. ಏಕೆಂದರೆ ಆ ವರ್ಷ ಹ್ಯಾಲೀ ಧೂಮಕೇತುವು ವರ್ಷದುದ್ದಕ್ಕೂ ಕಂಡುಬಂದಿತ್ತು. ಮಳೆಗಾಲದಲ್ಲಿ ಕಾಣದಂತಾಗಿ ಪುನಃ ಕಂಡಿರಬಹುದು.

1532ರಲ್ಲಿ ಇನ್ನೊಂದು ದೊಡ್ಡ ಧೂಮಕೇತು ಬಂದಿದ್ದ ದಾಖಲೆಗಳಿವೆ. ಇವೆರಡೂ ಧೂಮಕೇತುಗಳು ಬಹಳ ಪ್ರಕಾಶಮಾನವಾಗಿದ್ದವೆಂದು ದಾಖಲೆಗಳು ತಿಳಿಸುತ್ತವೆ. ವಿಶ್ವಕೋಶದಲ್ಲಿ ‘ಟೆರಿಬಲ್’ ಎಂದು ಷರಾ ನಮೂದಾಗಿದೆ. ಆದ್ದರಿಂದ ರಾಜತರಂಗಿಣಿಯಲ್ಲಿರುವುದು ಎರಡು ಬೇರೆ ಬೇರೆ ಧೂಮಕೇತುಗಳೂ ಆಗಿರಬಹುದು.

ಪಾಶ್ಚಾತ್ಯ ವಿದ್ವಾಂಸರ ಕಟು ಟೀಕೆ – ಖಗೋಳ ವಿಜ್ಞಾನದಲ್ಲಿ ಇಷ್ಟೊಂದು ಪಾಂಡಿತ್ಯ ಪಡೆದುಕೊಂಡಿದ್ದ ಭಾರತೀಯರು ವ್ಯವಸ್ಥಿತವಾದ ವೀಕ್ಷಣೆಗಳನ್ನೇಕೆ ಬರೆದಿಟ್ಟಿಲ್ಲ? ಈ ಸಂದರ್ಭದಲ್ಲಿ ರಾಜತರಂಗಿಣಿಯ ಈ ವಿವರಣೆಗಳು ವಿಶೇಷ ಮಹತ್ವ ಪಡೆಯುತ್ತವೆ. (ಮೂಲ ಇಂಗ್ಲಿಷ್ ಲೇಖನ ಕರೆಂಟ್ ಸೈನ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದೆ. https://www.currentscience.ac.in/Volumes/114/11/2392.pdf)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT