ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ನಾಟಕಗಳು

Last Updated 27 ಜುಲೈ 2019, 19:45 IST
ಅಕ್ಷರ ಗಾತ್ರ

ಲೇ: ಡಾ. ಚಂದ್ರು ಕಾಳೇನಹಳ್ಳಿ

ಪ್ರ: ಸಿರಿವರ ಪ್ರಕಾಶನ

ಮೊ: 98441 09706

**

ಲೇಖಕರುಜನಪದ ಕಥೆಗಳನ್ನು, ಪೌರಾಣಿಕ ಮತ್ತು ಸಮಕಾಲೀನ ವಸ್ತುಗಳನ್ನು ಮೂಲವಾಗಿಟ್ಟುಕೊಂಡು ರಚಿಸಿರುವ ಇಲ್ಲಿನ ಆರು ನಾಟಕಗಳು ಈಗಾಗಲೇ ಹಲವು ಬಾರಿ ರಂಗ ಪ್ರಯೋಗಗಳಿಗೆ ಒಡ್ಡಿಕೊಂಡಿವೆ. ಈ ಗಂಭೀರ ನಾಟಕಗಳು ರಂಗದ ಮೇಲೂ ಯಶಸ್ಸು ಕಂಡಿವೆ.ಓದುಗರನ್ನೂ ಸದಾ ಮರು ಓದಿಗೂ ಹಚ್ಚುತ್ತವೆ.

ಮೊದಲ ನಾಟಕ ‘ಮಾಯಾ ಕಿನ್ನರಿ’ ಹೊಸ ಹುಟ್ಟು ಪಡೆದ ನಾಟಕವೆನಿಸುತ್ತದೆ. ಇದರಲ್ಲಿನ ಪ್ರತಿ ಪಾತ್ರವೂ ಓದುಗನ ಮನಸಿನಲ್ಲಿ ಜಾಗ ಪಡೆಯುತ್ತದೆ. ಜನಪದ ಕಥಾ ವಸ್ತುವಿನ ಮೂಲಕ ಮನುಷ್ಯ ಸಂವೇದನೆಗಳನ್ನು ಈ ನಾಟಕದಲ್ಲಿ ಲೇಖಕ ಅರ್ಥಪೂರ್ಣವಾಗಿ ಚಿತ್ರಿಸಿದ್ದಾರೆ. ಗಂಡು– ಹೆಣ್ಣಿನ ಪ್ರೇಮ–ಕಾಮದ ಸಂಘರ್ಷ ಹಾಗೂ ತುಡಿತಗಳನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಮೂರು ತಲೆಮಾರುಗಳ ಕಥೆಯನ್ನು ‘ಕಲಿವೀರ ಜುಂಜಪ್ಪ’ ನಾಟಕದಲ್ಲಿ ಚಿತ್ರಿಸಿದ್ದಾರೆ. ಜುಂಜಪ್ಪನ ಭಕ್ತರು ಹಾಡುವ ಗಣೆ ಹಾಡುಗಳು ನಾಟಕಕ್ಕೆ ಒಂದು ರಮ್ಯತೆ ತಂದುಕೊಟ್ಟಿವೆ. ಅಷ್ಟೇ ಅಲ್ಲ, ಕಾಡುಗೊಲ್ಲರ ಸಾಂಸ್ಕೃತಿಕ ಬದುಕಿನ ಚಿತ್ರಣದ ದರ್ಶನವೂ ಸಿಗುತ್ತದೆ.

ಮಹಾಭಾರತದ ಯದುವಂಶ ವಿನಾಶದ ಕಥೆ ಹೇಳುವ ‘ಎಲ್ಲಿ ಮೋಹನ ಮುರಳಿ’ ನಾಟಕವೂ ಆಸಕ್ತಿದಾಯಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT