ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಸಾರ್ವಜನಿಕ ಸಂಪರ್ಕಾಧಿಕಾರಿ ವೃತ್ತಿಗೊಂದು ಮಾರ್ಗದರ್ಶಿ

Last Updated 13 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಲ್ಲಿ (ಡಿಆರ್‌ಡಿಒ) ಸಾರ್ವಜನಿಕ ಸಂಪರ್ಕಾಧಿಕಾರಿ ಆಗಿದ್ದ
ಜಯಪ್ರಕಾಶ ಪುತ್ತೂರು ಅವರು, ತಮ್ಮ ವೃತ್ತಿ ಅನುಭವಗಳನ್ನು ದಾಖಲಿಸಿದ ಕೃತಿ ‘ಹಮಾರಾ ಪಿಆರ್‌ಒ’. ಸದಾ ಹುಳುಕುಗಳನ್ನು ಹುಡುಕಲು ಹಾತೊರೆಯುವ ಮಾಧ್ಯಮ, ಸಂಸ್ಥೆಯ ಕುರಿತು ಒಂದೇ ಒಂದು ನಕಾರಾತ್ಮಕ ಸುದ್ದಿ ಪ್ರಕಟವಾಗುವುದನ್ನೂ ಸಹಿಸದ ಆಡಳಿತ ಮಧ್ಯೆ ನಾಜೂಕಿನಿಂದ ಕೆಲಸ ಮಾಡಬೇಕಾಗಿದ್ದ ಲೇಖಕರ ಅನುಭವಗಳು ರಸವತ್ತಾಗಿವೆ.

ಡಿಆರ್‌ಡಿಒದಲ್ಲಿ ಎಪಿಜೆ ಅಬ್ದುಲ್‌ ಕಲಾಂ ಅವರು ಮುಖ್ಯಸ್ಥರಾಗಿದ್ದಾಗ ಅವರೊಂದಿಗೆ ಕೆಲಸ ಮಾಡುವ ಅದೃಷ್ಟ ಗಿಟ್ಟಿಸಿದ್ದ ಜಯಪ್ರಕಾಶ ಅವರು, ಕಲಾಂ ಒಡನಾಟದ ನೆನಪುಗಳನ್ನೂ ಇಲ್ಲಿ ದಾಖಲಿಸಿದ್ದಾರೆ. ಪ್ರೋಟೋಕಾಲ್‌ ಅಧಿಕಾರಿಯ ಮೈಮರೆವಿನಿಂದ ಆಗಲಿದ್ದ ಮುಜುಗರ ತಪ್ಪಿಸಲು ಕಲಾಂ ವಿಮಾನಕ್ಕೆ ಜಯಪ್ರಕಾಶ ಅವರು ಏಣಿ ಹಿಡಿದ ಪ್ರಸಂಗ, ರಕ್ಷಣಾ ಸಚಿವರನ್ನು ಮಾಧ್ಯಮದವರು ಭೇಟಿಯಾಗಲು ಸಾಧ್ಯವಾಗದ್ದನ್ನ ಅವರು ನಿಭಾಯಿಸಿದ ರೀತಿಗಮನ ಸೆಳೆಯುತ್ತವೆ.

ಕೆಲಸದ ತಾಣದಲ್ಲಿ ಸಿಹಿ–ಕಹಿ ಎರಡೂ ಲೇಖಕರಿಗೆ ಎದುರಾಗಿದ್ದಿದೆ. ವೃತ್ತಿಯ ಸವಾಲನ್ನು, ಮೇಲಧಿಕಾರಿಗಳ ಕೀಟಲೆಯನ್ನು ಎದುರಿಸಿ ಮುನ್ನುಗ್ಗುವ ಛಾತಿಯನ್ನು ಪ್ರದರ್ಶಿಸಿದ ಅವರು, ಸಂಕಷ್ಟದಲ್ಲೂ ಎದ್ದು ನಿಲ್ಲುವಂತಹ ಪ್ರೇರಣೆದಾಯಕ ಕಥೆಗಳನ್ನು ಹೆಕ್ಕಿ ಕೊಟ್ಟಿದ್ದಾರೆ. ಪಿಆರ್‌ಒ ಆಗಿ ವೃತ್ತಿ ಜೀವನ ಕಟ್ಟಿಕೊಳ್ಳಲು ಬಯಸುವವರಿಗೆ ಈ ಕೃತಿ ಒಂದು ಮಾರ್ಗದರ್ಶಿಯಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT