ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ವೇದ ಕಲಿಕೆಗೊಂದು ದೀವಿಗೆ

Last Updated 7 ಜನವರಿ 2023, 19:30 IST
ಅಕ್ಷರ ಗಾತ್ರ

ಕೃತಿ: ವೇದ ದೀಪಿಕಾ
ಪ್ರ: ಶ್ರೀ ಶಂಕರ ವೇದಪಾಠಶಾಲೆ, ಬೆಂಗಳೂರು
ಸಂ: 7019638813
ಪುಟ: 592
ಬೆಲೆ: 500

***

ವೇದ, ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗ. ಧಾರ್ಮಿಕ ಆಚರಣೆಗಳ ಆಧಾರವಾಗಿರುವ ಈ ವೇದಗಳ ಕಲಿಕೆಗೆ ಶ್ರೀ ಶಂಕರ ವೇದಪಾಠಶಾಲೆ ಹೊರತಂದಿರುವ ದೀವಿಗೆಯೇ ‘ವೇದ ದೀಪಿಕಾ’.

ವೇದಾಧ್ಯಯನ, ನಿತ್ಯದ ಧಾರ್ಮಿಕ ಆಚರಣೆ, ತರ್ಪಣಕ್ರಮ, ಶ್ಲೋಕ, ಜಗದ್ಗುರು ಬಿರುದಾವಳಿ, ಸೂಕ್ತಗಳ ಬಗ್ಗೆ ಹಲವು ಕೃತಿಗಳು, ಕಿರುಹೊತ್ತಿಗೆಗಳು ಈಗಾಗಲೇ ಲಭ್ಯವಿವೆ. ಆದರೆ ಈ ಹೊತ್ತಿಗೆ ನಾಲ್ಕು ವೇದಗಳ ವಿಸ್ತೃತ ಪರಿಚಯ, ವೇದೋಚ್ಚಾರಣೆಯ ಮಹತ್ವ, ಸಂಧ್ಯಾವಂದನೆಯ ಕ್ರಮ ಹಾಗೂ ಅದರ ಹಿಂದಿರುವ ಗೂಢಾರ್ಥದ ಪರಿಚಯವನ್ನು ಚಿತ್ರಗಳ ಸಹಿತ ನೀಡಿದೆ. ಜೊತೆಯಲ್ಲಿ ನಮಸ್ಕಾರ ಕ್ರಿಯೆ, ತರ್ಪಣದ ಹಿನ್ನೆಲೆ ಹಾಗೂ ವಿಧಿ–ವಿಧಾನ, ಪ್ರಾತಃಸ್ಮರಣೆ, ತುಳಸೀಪೂಜೆ, ನಿತ್ಯದೇವತಾರ್ಚನೆ, 26 ಸೂಕ್ತಗಳು, ಉಪನಿಷತ್ತುಗಳು, ಭೋಜನಾ ವಿಧಿ, ಉದಕಶಾಂತಿ, ಸಹಸ್ರನಾಮಾವಳಿ ಹೀಗೆ ಎಲ್ಲ ವಿಷಯಗಳನ್ನು ಒಳಗೊಂಡಿದೆ.

ಹಿಂದಿನ ಕಾಲದಲ್ಲಿ ಗುರುಕುಲಗಳಲ್ಲಿ ಬಾಯಿಯಿಂದ ಬಾಯಿಗೆ ಎಂಬಂತೆ ಅಧ್ಯಯನ–ಅಧ್ಯಾಪನಗಳು ನಡೆಯುತ್ತಿದ್ದವು. ಇಂದು ಇದು ಪುಸ್ತಕ ರೂಪ ಪಡೆದಿದ್ದು, ಆನ್‌ಲೈನ್‌ ವೇದಿಕೆಗಳ ಮೂಲಕವೂ ಈ ಅಧ್ಯಯನಗಳು ಮುಂದುವರಿದಿವೆ. ಇಂತಹ ಸಂದರ್ಭದಲ್ಲಿ ವೇದಾಧ್ಯಯನ ಆಸಕ್ತರು, ವೇದಪಾಠ ಕಲಿಯುತ್ತಿರುವ ಮಕ್ಕಳು, ಆಸ್ತಿಕರಿಗೆ ಪೂರಕವಾಗಿ ಈ ಕೃತಿಯನ್ನು ರೂಪಿಸಲಾಗಿದೆ ಎಂದು ಪ್ರಕಾಶಕರು ಇದರ ಮಹತ್ವವನ್ನು ಸಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT