ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಭಿನ್ನವಾದ ಕಾವ್ಯ ಅಭಿವ್ಯಕ್ತಿ

Last Updated 11 ಜುಲೈ 2021, 1:52 IST
ಅಕ್ಷರ ಗಾತ್ರ

ಟಿ.ಕೆ. ಗಂಗಾಧರ ಪತ್ತಾರ ಅವರ ವ್ಯಕ್ತಿ ಚಿತ್ರಣ ಕವನಗಳ ಸಂಕಲನ ‘ಅಭಿವ್ಯಕ್ತಿ’. ಪದ್ಯದ ಮೂಲಕ ವ್ಯಕ್ತಿಚಿತ್ರಣವನ್ನು ಕಟ್ಟಿಕೊಡುವ ಪರಿಪಾಟವಿದ್ದರೂ ಇಡೀ ಕವನ ಸಂಕಲನವೇ ವ್ಯಕ್ತಿಚಿತ್ರ ಕವನಗಳಿಂದ ಕೂಡಿದ ನಿದರ್ಶನವಿಲ್ಲ. ಈ ದೃಷ್ಟಿಯಿಂದ ಇದೊಂದು ಹೊಸ ಪ್ರಯೋಗ. ವ್ಯಕ್ತಿಗಳ ಬದುಕಿಗೆ ಸಂಬಂಧಿಸಿದ ಹಲವು ವಿವರಗಳು ಇಲ್ಲಿನ ಕವನಗಳಲ್ಲಿ ಸಿಗುತ್ತವೆ.

ವ್ಯಕ್ತಿಚಿತ್ರ ಕವನಗಳು ಇವಾದರೂ ಕೆಲವು ಸಾಧಕ ವ್ಯಕ್ತಿತ್ವಗಳನ್ನು ಹೊಸ ದೃಷ್ಟಿಕೋನದಿಂದ ನೋಡಿರುವುದರಿಂದ ಸಾಮಾಜಿಕ ಆಯಾಮಗಳೂ ಇಲ್ಲಿನ ಕವನಗಳ ಸಾಲುಗಳಲ್ಲಿ ಹರಡಿಕೊಂಡಿವೆ. ಇದಕ್ಕೆ ಉದಾಹರಣೆಯಾಗಿ ಸಂಕಲನದ ಮೊದಲ ಕವನವನ್ನೇ ನೋಡಬಹುದು. ವಿವೇಕಾನಂದರು ದೀನ ದಲಿತರ ಬಗ್ಗೆ ಹೊಂದಿದ್ದ ಕಾಳಜಿಯನ್ನು ಈ ಕವನ ಎತ್ತಿ ತೋರುತ್ತದೆ. ‘ರಾಷ್ಟ್ರವನು ಮುಸುಕಿದ್ದ ಮಾಯೆ–ಮಿಥ್ಯಾ ನಿಶೆಯ ಸತ್ಯ ಕಿರಣಗಳಿಂದ ಭುಂಜಿಸಿದ ಸೂರ್ಯ’ನಾಗಿಯೂ ವಿವೇಕಾನಂದರು ಗೋಚರಿಸಿದ್ದಾರೆ.

ಗಾಂಧಿ, ಅಂಬೇಡ್ಕರ್‌, ಬೇಂದ್ರೆ, ಕುವೆಂಪು, ಗೋವಿಂದ ಪೈ… ಹೀಗೆ ಇಲ್ಲಿ ಮೇಳೈಸಿರುವ ಸಾಧಕರ ಪಟ್ಟಿ ದೊಡ್ಡದಿದೆ. ಹಾಗೆಯೇ ಪತ್ತಾರರು ಯಾರ ಕುರಿತು ಬೇಕಾದರೂ ಪದ್ಯ ಬರೆಯಬಲ್ಲರು ಎನ್ನುವುದಕ್ಕೂ ಉದಾಹರಣೆಗಳು ಇಲ್ಲಿವೆ. ಇವರೆಲ್ಲ ಹೇಗೆ ಈಕಾವ್ಯಮಾಲೆಯಲ್ಲಿ ಒಂದಾದರು ಎಂಬ ಪ್ರಶ್ನೆ ಕಾಡುತ್ತದೆ. ವ್ಯಕ್ತಿಯ ಆಯ್ಕೆಯ ಮಾನದಂಡ ಕೂಡ ಮುಖ್ಯ ಎಂದು ಬರಗೂರು ರಾಮಚಂದ್ರಪ್ಪ ಅವರು ಮುನ್ನುಡಿಯಲ್ಲಿ ಹೇಳಿರುವುದು ಸರಿಯಾಗಿಯೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT