ಕೃಷಿ–ಗ್ರಾಮೀಣ ಪತ್ರಿಕೋದ್ಯಮ

ಸೋಮವಾರ, ಮೇ 27, 2019
33 °C

ಕೃಷಿ–ಗ್ರಾಮೀಣ ಪತ್ರಿಕೋದ್ಯಮ

Published:
Updated:

ಕೃತಿ: ಕೃಷಿ–ಗ್ರಾಮೀಣ ಪತ್ರಿಕೋದ್ಯಮ

ಲೇಖಕ: ಶಿವರಾಂ ಪೈಲೂರು

ಪುಟ ಸಂಖ್ಯೆ: 100

ಬೆಲೆ: ₹ 120

ಪ್ರಕಾಶನ: ಕೃಷಿ ಮಾಧ್ಯಮ ಕೇಂದ್ರ

ಮೊಬೈಲ್: 94837 57707 

ಕೃಷಿ ಮತ್ತು ಗ್ರಾಮೀಣ ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರಿಗೆ ಮಾರ್ಗದರ್ಶಕದಂತಿದೆ ಶಿವರಾಂ ಪೈಲೂರು ಅವರ ಈ ಕೃತಿ. ರೈತರು, ಕೃಷಿ ಮತ್ತು ಗ್ರಾಮ್ಯ ಜೀವನದ ತಳಮಟ್ಟದ ಕ್ಷೇತ್ರಾಧ್ಯಯನವನ್ನು ಪ್ರತಿಪಾದಿಸುತ್ತದೆ. ಬರಹಕ್ಕೆ ವಸ್ತುವಾಗಬಲ್ಲ ವಿಷಯಗಳ ಕುರಿತು ವಿವರಿಸುತ್ತದೆ.

ನುಡಿಚಿತ್ರಕ್ಕಾಗಿ ಕ್ಷೇತ್ರಭೇಟಿ, ಪೂರ್ವಸಿದ್ಧತೆ ಹೇಗಿರಬೇಕು? ಬರವಣಿಗೆಯ ಹೂರಣದಲ್ಲಿ ಏನಿರಬೇಕೆಂಬ ಸಕಲ ಮಾಹಿತಿಯನ್ನೂ ನೀಡುತ್ತದೆ. ಕೃಷಿ ಪತ್ರಿಕೋದ್ಯಮದ ಕುರಿತ ಮಾದರಿ ಕೃತಿ ಇದಾಗಿದ್ದು, ಕೃಷಿ ಕುರಿತು ಲೇಖನ ಬರೆಯುವ ಆಸಕ್ತರಿಗೆ ಸ್ಫೂರ್ತಿ ತುಂಬುವಂತಹ ವಿಷಯಗಳನ್ನೊಳಗೊಂಡಿದೆ.

ಕನ್ನಡದಲ್ಲಿ ಕೃಷಿ ಸಂಬಂಧಿ ಪತ್ರಿಕೆಗಳು, ಕೃಷಿ ಪುರವಣಿಗಳು, ಕೃಷಿ ಬರಹಗಾರರಿಗೆ ಉಪಯುಕ್ತವೆನಿಸುವ ಪುಸ್ತಕ, ಪದಕೋಶ ಮತ್ತು ನಿಘಂಟಿನ ಮಾಹಿತಿಯನ್ನೂ ಒಳಗೊಂಡಿರುವುದು ವಿಶೇಷ.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !