ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ‘ಬಹುಮುಖಿ ಅಮೆರಿಕ’ದ ದರ್ಶನ

Last Updated 12 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಅಮೆರಿಕ ಪ್ರವಾಸದ ಬಗ್ಗೆ ಅದೆಷ್ಟೋ ಲೇಖನಗಳು, ಕೃತಿಗಳು ಕನ್ನಡದಲ್ಲಿ ಪ್ರಕಟವಾಗಿವೆ. ಅವುಗಳಲ್ಲಿ ಪ್ರವಾಸಿ ತಾಣಗಳ ಮಾಹಿತಿಗಳಿವೆ, ಕಥನಗಳಿವೆ ಜೊತೆಗೆ ಕ್ಯಾಮೆರಾ ಕಣ್ಣಿನಿಂದ ಕಂಡ ಚಿತ್ರಣಗಳಿವೆ. ಇದೇ ರೀತಿ ವಿಶ್ವದ ‘ದೊಡ್ಡಣ್ಣ’ನನ್ನು ಬೃಹದಾಕಾರದಲ್ಲೇ ಲೇಖನಿ ಹಾಗೂ ಕ್ಯಾಮೆರಾ ಕಣ್ಣಿನಲ್ಲಿ ಹಿಡಿದಿಡುವ ವಿಭಿನ್ನ ಪ್ರಯತ್ನವನ್ನು ‘ಬಹುಮುಖಿ ಅಮೆರಿಕಾ’ ಪ್ರವಾಸ ಕಥನದ ಮುಖಾಂತರ ಸಿರಿಗಂಧ ವಿ. ಶ್ರೀನಿವಾಸಮೂರ್ತಿ ಮಾಡಿದ್ದಾರೆ. ಪುಟಗಳ ಸಂಖ್ಯೆ ಹಾಗೂ ವಿಷಯಗಳೂ ‘ಬೃಹತ್‌’ ಎನ್ನುವುದರಲ್ಲಿ ಅಡಕ.

ಈ ಕೃತಿ ಎರಡು ಯಾನಗಳ ಅನುಭವ ಕಥನದ ಸಂಕಲನ. ಸಾವಿರಾರು ಮೈಲಿ ಆಕಾಶದಲ್ಲಿ ಹಾರಾಡಿ, ಮಹಾಸಾಗರಗಳನ್ನು ದಾಟಿ ಅಮೆರಿಕದ ಡೆನ್ವರ್‌ ವಿಮಾನ ನಿಲ್ದಾಣದಲ್ಲಿ ಸುಟ್ಟು ಬೂದಿಯಾದ ಕರಿಬೇವಿನ ಕಥೆಯಿಂದ ಆರಂಭವಾಗುವ ಪ್ರವಾಸ ಕಥನದಲ್ಲಿ ಅಮೆರಿಕವನ್ನು ಹಲವು ಮಜಲುಗಳಲ್ಲಿ ಲೇಖಕರು ಹಿಡಿದಿಟ್ಟಿದ್ದಾರೆ. ಇದು ಸರಳವಾದ ಪ್ರವಾಸ ಕಥನವಲ್ಲ. ಸುತ್ತಿಬಂದ ಬಳಿಕ ನೆನಪಿನಲ್ಲಿ ಉಳಿದಿದ್ದನ್ನು ಗೀಚಿರುವುದೂ ಅಲ್ಲ ಎನ್ನುವುದು ಸ್ಪಷ್ಟ. ಸಾಮಾನ್ಯ ಪ್ರವಾಸಿಗನ ರೀತಿ ಪ್ರವಾಸ ಕೈಗೊಳ್ಳದೆ ದಾಖಲೆಗೆಂದೇ ಹೆಜ್ಜೆ ಹಾಕಿ, ಪ್ರತೀ ಘಟನೆಯನ್ನೂ ಸ್ಥಳವನ್ನೂ ಅನುಭವಿಸಿ ಲೇಖಕರು ಅಕ್ಷರಗಳಿಗಿಳಿಸಿದ್ದಾರೆ.

‘ಸುಂದರವಾದ ಏರ್‌ಹೋಸ್ಟೆಸ್‌ಗಳಿದ್ದರೆ ಅವರನ್ನು ನೋಡಿಕೊಂಡು ಕಾಲ ಕಳೆಯಬಹುದಿತ್ತು’ ಎಂದು ಅರೆಕ್ಷಣ ಬೇಸರಪಡುವಲ್ಲಿಂದ ಹಿಡಿದು, ಅಮೆರಿಕದಲ್ಲಿ ಮೊದಲ ಹೆಜ್ಜೆ ಇಟ್ಟ ಬಳಿಕ ಬಾರ್‌ ಮುಂದೆ ವೆಲ್‌ಕಮ್‌ ಡ್ರಿಂಕ್ಸ್‌ಗೆ ಕಾರು ಪಾರ್ಕ್‌ ಮಾಡಿದ ಕ್ಷಣದಲ್ಲಾದ ಖುಷಿಯನ್ನು ದಾಖಲಿಸಿದ ಬರವಣಿಗೆಯಲ್ಲೇ ಯಾವುದೇ ಮಡಿವಂತಿಕೆ ಇಲ್ಲದೇ ಇದ್ದಿರುವುದನ್ನು ಇದ್ದ ಹಾಗೆ ದಾಖಲಿಸುವ ಉಮೇದಿ ಎದ್ದು ಕಾಣುತ್ತದೆ. ಕುತೂಹಲ ಹೆಚ್ಚಿಸುವ ಬರವಣಿಗೆಯ ಶೈಲಿ ಓದಿಗೆ ವೇಗ ನೀಡುತ್ತದೆ. ಕೊನೆಯಲ್ಲಿನ 64 ಪುಟಗಳನ್ನು ತಿರುವಿ ಹಾಕಿದರೆ ಅಮೆರಿಕವನ್ನೇ ಸುತ್ತಿಬಂದ ಅನುಭವ ಓದುಗನಿಗಾಗುತ್ತದೆ.

ಕೃತಿ: ಬಹುಮುಖಿ ಅಮೆರಿಕಾ

ಲೇ: ಸಿರಿಗಂಧ ವಿ.ಶ್ರೀನಿವಾಸಮೂರ್ತಿ

ಪ್ರ: ಚಾರುಮತಿ ಪ್ರಕಾಶನ, ಬೆಂಗಳೂರು

ಸಂ: 9448235553

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT