ಗುರುವಾರ , ಅಕ್ಟೋಬರ್ 21, 2021
27 °C

ಪುಸ್ತಕ ವಿಮರ್ಶೆ: ‘ಬಾಕಾಹು’ವಿನ ವಿರಾಟರೂಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಾಳೆಕಾಯಿ ಸೋತಾಗ ಊರುಗೋಲಾದ ಬಾಕಾಹು’
ಲೇ: ಶ್ರೀ ಪಡ್ರೆ
ಪ್ರ: ಕೃಷಿ ಮಾಧ್ಯಮ ಕೇಂದ್ರ ಮತ್ತು ಫಾರ್ಮರ್‌ ಫಸ್ಟ್‌ ಟ್ರಸ್ಟ್‌
ಸಂ: 9886856364

**

ಬಾಳೆಕಾಯಿ ಹುಡಿ–ಬಾಕಾಹು, ಇದು ಇತ್ತೀಚೆಗೆ ಹುಟ್ಟಿಕೊಂಡ ಉದ್ದಿಮೆ. ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿರುವ ಈ ಮೌಲ್ಯವರ್ಧಿತ ಉತ್ಪನ್ನ, ಅತ್ಯಲ್ಪ ಅವಧಿಯಲ್ಲೇ ಅಭಿಯಾನದ ರೂಪದಲ್ಲಿ ಹಲವು ರಾಜ್ಯಗಳಿಗೆ ಹೆಜ್ಜೆ ಇಟ್ಟಿದೆ. ಸೋತ ರೈತರ ಪಾಲಿಗೆ ಊರುಗೋಲಾಗಿ ಸಿಕ್ಕಿದೆ. ಈ ಅಭಿಯಾನ ಬೆಳೆದು ಬಂದ ಬಗೆಯ ವ್ಯವಸ್ಥಿತ ದಾಖಲೆ ಶ್ರೀ ಪಡ್ರೆ ಅವರ ‘ಬಾಳೆಕಾಯಿ ಸೋತಾಗ ಊರುಗೋಲಾದ ಬಾಕಾಹು’ ಕೃತಿ. 

ಲಾಕ್‌ಡೌನ್‌ ಅವಧಿಯಲ್ಲಿ ಬಾಳೆಹಣ್ಣಿನ ದರ ಕುಸಿದಾಗ ಬೆಳೆಗಾರರ ಕೈಹಿಡಿದಿದ್ದು ಇದೇ ಬಾಕಾಹು. ಜೊತೆಗೆ ಮಧುಮೇಹ ನಿಯಂತ್ರಿಸಲು ಬಾಕಾಹು ಪ್ರಯೋಜನಕಾರಿ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಮೇಲಂತೂ ಇದರ ಬೇಡಿಕೆ ಗಗನಕ್ಕೇರಿದ್ದಂತೂ ನಿಜ. ಈ ಕುರಿತು ಆಹಾರ ತಜ್ಞ ಡಾ.ಕೆ.ಸಿ.ರಘು ’ಬಾಕಾಹು ಬಳಕೆಯಿಂದ ಬಾಳೇ ಬದಲು’ ಲೇಖನದಲ್ಲಿ ಸವಿಸ್ತಾರವಾದ ಮಾಹಿತಿ ಒದಗಿಸಿದ್ದಾರೆ. ಬಾಕಾಹು ತಯಾರಿ ವಿಧಾನದ ಬಗ್ಗೆ ಆಲೆಪ್ಪಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜೆಸ್ಸಿ ಜಾರ್ಜ್‌ ಅವರ ವಿವರಣೆ, ಬಾಕಾಹು ತಯಾರಿಸಿದ ಅನುಭವ, ಬಾಕಾಹು ಮಿಶ್ರಿತ ಚಪಾತಿ ತಯಾರಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾಕಾಹು ಬೆಳೆದ ಬಗೆ, ಕೃಷಿ ವಿಜ್ಞಾನ ಕೇಂದ್ರಗಳಿಂದ ಪ್ರಚಾರ ಹಾಗೂ ಲಭ್ಯತೆಯ ವಿವರಣೆ ಇದರಲ್ಲಿ ಅಡಕವಾಗಿವೆ. ಜೊತೆಗೆ ಬಾಕಾಹುವಿನಿಂದ ತಯಾರಿಸಬಹುದಾದ ಸುಮಾರು 28 ಬಗೆಯ ಖಾದ್ಯಗಳ ಸವಿವರವೂ ಇಲ್ಲಿದೆ.

ಬಾಕಾಹು ತಯಾರಿ ಕೃಷಿಕರ ನಷ್ಟ ತಡೆಗೆ ಒಂದು ಉತ್ತಮ ಮಾರ್ಗ ಎಂದಿದ್ದಾರೆ ಲೇಖಕರು. ಬಾಕಾಹು ಬೆಳವಣಿಗೆಯಿಂದ ಕಲಿಯಬೇಕಾದ ಪಾಠ ಬಹಳಷ್ಟಿದೆ, ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ಈ ಉದ್ದಿಮೆಯನ್ನು ಮತ್ತಷ್ಟು ಉತ್ತೇಜಿಸಲು ಆಗಬೇಕಾಗಿರುವ ವ್ಯವಸ್ಥೆಯ ಬಗ್ಗೆಯೂ ಶ್ರೀ ಪಡ್ರೆಯವರು ಗಮನಸೆಳೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು