ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಜಲಭಗೀರಥ ಬಿ.ಪಿ.ರಾಧಾಕೃಷ್ಣ: ಬಿ.ಪಿ.ಆರ್‌. ಬದುಕಿನ ಮೆಲುಕು

Last Updated 11 ಜೂನ್ 2022, 19:30 IST
ಅಕ್ಷರ ಗಾತ್ರ

ಬಿ.ಪಿ.ಆರ್‌. ಎಂದೇ ಪ್ರಸಿದ್ಧರಾಗಿದ್ದ,ಪದ್ಮಶ್ರೀಪುರಸ್ಕೃತ ಭೂವಿಜ್ಞಾನಿ ದಿವಂಗತ ಬೆಂಗಳೂರು ಪುಟ್ಟಯ್ಯ ರಾಧಾಕೃಷ್ಣ ಅವರ ಜೀವನ ಕಥನ ಈ ಕೃತಿ. ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ‘ಒಕ್ಕಲಿಗ ಸಾಧಕರು’ ಎಂಬ ಶೀರ್ಷಿಕೆಯಡಿ ‘ವಿಕಸನ’ ಸಂಸ್ಥೆಯ ಮೂಲಕ ಆರಂಭಿಸಿದ ಗ್ರಂಥಮಾಲೆಯ ಭಾಗವಾಗಿ ‘ಭೂಜಲಭಗೀರಥ ಬಿ.ಪಿ.ರಾಧಾಕೃಷ್ಣ’ ಶೀರ್ಷಿಕೆಯಡಿ ಈ ಕೃತಿ ಮೂಡಿಬಂದಿದೆ.

ಒಟ್ಟು 19 ಅಧ್ಯಾಯಗಳಲ್ಲಿ ಬಿ.ಪಿ.ಆರ್‌. ಅವರ ಜೀವನವನ್ನು ಲೇಖಕರು ಇಲ್ಲಿ ತೆರೆದಿಟ್ಟಿದ್ದಾರೆ. ಬಿ.ಪಿ.ಆರ್‌. ಅವರ ಆತ್ಮಚರಿತ್ರೆ ಬರೆಯಲೆಂದುದಶಕಗಳ ಹಿಂದೆ ನಡೆಸಿದ ಸಂದರ್ಶನವನ್ನೇ ಲೇಖಕರಾದ ಟಿ.ಎಂ.ಶಿವಶಂಕರ್‌ ಈ ಕೃತಿಗೆ ಮಾರ್ಗಸೂಚಿಯಾಗಿ ಬಳಸಿಕೊಂಡಿದ್ದಾರೆ. ಬಿ.ಪಿ.ಆರ್‌. ಅವರು ಹಂಚಿಕೊಂಡ ಘಟನೆಗಳು, ಮಾಹಿತಿಗಳ ಜೊತೆಗೆ ಅವರ ಸ್ನೇಹಿತರು, ನಿಕಟವರ್ತಿಗಳ ಜೊತೆಗಿನ ಮಾತುಕತೆ, ಭೂವಿಜ್ಞಾನ ಕ್ಷೇತ್ರದಲ್ಲಿನ ಕಾರ್ಯವೈಖರಿಯನ್ನು ಒಗ್ಗೂಡಿಸಿ ಬಿ.ಪಿ.ಆರ್‌. ಜೀವನವನ್ನು ಅಕ್ಷರಕ್ಕಿಳಿಸಿದ್ದಾರೆ ಲೇಖಕರು. ‘ಭೂಜಲ ಭಗೀರಥ’ ಎಂಬ ಬಿರುದನ್ನೇಕೆ ನೀಡಿದೆ ಎನ್ನುವುದನ್ನು ವಿವರಿಸುತ್ತಾ,
ಬಿ.ಪಿ.ಆರ್‌ ಅವರ ಸಾವಿನತನಕದವರೆಗಿನ ಪಯಣವನ್ನು ಲೇಖಕರು ಮೆಲುಕುಹಾಕಿದ್ದಾರೆ.‘ಶಿಸ್ತು, ಸಮಯಪ್ರಜ್ಞೆಗೆ ಹೆಸರಾಗಿದ್ದ ಅವರು ಅಂದಿನ ಕೈಗಾರಿಕಾ ಸಚಿವರಾಗಿದ್ದ ಎಸ್‌.ಎಂ. ಕೃಷ್ಣ ಅವರನ್ನು ಮಾತಿನಲ್ಲೇ ತಿವಿದ ಸನ್ನಿವೇಶ ಎಂಥದ್ದು, ಭೂವಿಜ್ಞಾನ ಇಲಾಖೆಯ ನಿರ್ದೇಶಕರಾಗಿ ಅವರ ಕಾರ್ಯವೈಖರಿ ಹೇಗಿತ್ತು, ಅವರ ಬಾಳಿನ ಮುಸ್ಸಂಜೆ ಹೇಗಿತ್ತು ಎನ್ನುವುದನ್ನು ವಿವರಿಸಿದ್ದಾರೆ.

ಕೃತಿ: ಭೂಜಲಭಗೀರಥ ಬಿ.ಪಿ.ರಾಧಾಕೃಷ್ಣ

ಲೇ: ಟಿ.ಎಂ. ಶಿವಶಂಕರ್‌

ಪ್ರ: ವಿಕಸನ, ವಿಜ್ಞಾತಂ ಭವನ

ಸಂ: 9481908555

ಪುಟ: 204

ದರ: 220

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT