ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಬೆಟ್ಟದೂರರ ವ್ಯಕ್ತಿತ್ವದ ದರ್ಶನ

Last Updated 28 ಮೇ 2022, 19:30 IST
ಅಕ್ಷರ ಗಾತ್ರ

ಬಂಡಾಯ ಸಾಹಿತಿ, ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಅವರ ಹೋರಾಟದ ಹೆಜ್ಜೆಗುರುತು ‘ಬೆಟ್ಟದೂರು ಅಲ್ಲಮ’. ‘ಡಾ.ಎಂ.ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆ’ಯು ಲಿಂಗಾಯತ ಅಭಿನಂದನ ಸಾಹಿತ್ಯ ರತ್ನಮಾಲೆಯ 18ನೇ ಕೃತಿಯಾಗಿ ಇದನ್ನು ಪ್ರಕಟಿಸಿದೆ.

ಪ್ರಗತಿಪರ ವಿಚಾರಧಾರೆಯ ದಾರಿಯಲ್ಲಿ ಅಲ್ಲಮಪ್ರಭು ಅವರ ಹೋರಾಟ ಗೋಕಾಕ ಚಳವಳಿಯಿಂದ ಹಿಡಿದು ಕಪ್ಪತಗುಡ್ಡ ಹೋರಾಟದವರೆಗೂ ಇದೆ. ಈ ಹೋರಾಟದ ಹೆಜ್ಜೆಗಳನ್ನು ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸಿ.ಬಿ.ಚಿಲ್ಕರಾಗಿ ಕಟ್ಟಿಕೊಟ್ಟಿದ್ದಾರೆ. ‘ಸಾಂಪ್ರದಾಯಿಕ ಚೌಕಟ್ಟನ್ನು ಬಿಟ್ಟು, ಕವಿಯ ಸಾಹಿತ್ಯ ಸೃಷ್ಟಿಯ ಮೂಲಕವೇ ಅವರನ್ನು ಶೋಧಿಸುವುದು ಈ ಕೃತಿಯ ವೈಶಿಷ್ಟ್ಯ’ ಎಂದು ಹೇಳಿದ್ದಾರೆ ಕೃತಿಗೆ ಮುನ್ನುಡಿ ಬರೆದಿರುವ ದಿವಂಗತ
ಪ್ರೊ.ಚಂದ್ರಶೇಖರ ಪಾಟೀಲ. ಕೃತಿಯಲ್ಲಿ ಬಳಸಿದ ಭಾಷೆಯೂ ಕಾವ್ಯಮಯವಾಗಿದೆ. ‘ಅನಂತ’, ‘ಹಿಂದಣ ಬೆಳಗು’, ‘ಕೊಪ್ಪಳದ ಪರಿಸರ’, ‘ಹೋರಾಟ’, ‘ವೈಚಾರಿಕತೆ’ ಹೀಗೆ ಒಂಬತ್ತು ಅಧ್ಯಾಯಗಳಲ್ಲಿ ಬೆಟ್ಟದೂರರ ವ್ಯಕ್ತಿತ್ವ, ಜೀವನಕಥನವಿದೆ. ಛಾಯಾಚಿತ್ರಗಳೂ ಬೆಟ್ಟದೂರರ ಬದುಕನ್ನು ಚಿತ್ರಸಿವೆ.

ಕೃತಿ: ಬೆಟ್ಟದೂರು ಅಲ್ಲಮ

ಲೇ: ಡಾ.ಸಿ.ಬಿ.ಚಿಲ್ಕರಾಗಿ

ಪ್ರ: ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ

ಸಂ: 9448144419

ಪುಟ: 144

ದರ: 200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT