ಗುರುವಾರ , ಜೂನ್ 30, 2022
24 °C

ಮೊದಲ ಓದು: ಪುಟ್ಟ ಕಥೆಗಳ ದೊಡ್ಡ ಕ್ಯಾಪ್ಸೂಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಲರುಗಳು ಅರಳುವ ಮುನ್ನ ಹೊಸಕುವ ಶಕ್ತಿಗಳು ಹೇಗೆಲ್ಲಾ ಇವೆ ಎಂಬುದಕ್ಕೆ ‘ಅರಳದ ಅಲರು’ ಕಥೆಯ ನಾಯಕಿಯೇ ಉದಾಹರಣೆ. ಇಂಥ ಬಹುತೇಕ ಸ್ತ್ರೀಪ್ರಧಾನ ಮನೋಭೂಮಿಕೆಯ 14 ಕಥೆಗಳು ಈ ಹೊತ್ತಗೆಯಲ್ಲಿವೆ. 

ಇಲ್ಲಿ ಹಲವು ಕಥೆಗಳಲ್ಲಿ ಗಮನ ಸೆಳೆಯುವುದು ರಾಯಚೂರು– ಕೊಪ್ಪಳ ಸೀಮೆಯ ಭಾಷಾ ಸೊಗಡು. ಹಳ್ಳಿಯ ಸನ್ನಿವೇಶಗಳನ್ನು ಹೇಳುವಲ್ಲಿ ಪೂರ್ತಿ ಆಯಾ ಪ್ರಾದೇಶಿಕ ಸೊಗಡನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಿರೂಪಿಸಲಾಗಿದೆ. ಕಾಲಕ್ಕೆ ತಕ್ಕಂತೆ ಬದಲಾಗುವ ಸೋಮಕ್ಕನ ಸ್ವಭಾವ (‘ದೇವರು ಕಣ್ಬಿಟ್ಟರೆ’ ಕಥೆ) ಮನುಷ್ಯ ಸಹಜ ವರ್ತನೆಯನ್ನು ತೆರೆದಿಟ್ಟಿದೆ. ಸಮಚಿತ್ತದ ಅಗತ್ಯವನ್ನೂ ಅಲ್ಲಲ್ಲಿ ಹೇಳಿದೆ. 

‘ಡ್ರೀಮ್‌ಗರ್ಲ್‌’ ಕಥೆಯಲ್ಲಂತೂ ಪ್ರವಾಸಿ ವಾಹನವೇ ನಾಯಕಿ. ಅದರ ಸುತ್ತಲೇ ಇತರ ಪಾತ್ರಗಳು ಗಿರಕಿ ಹೊಡೆದು ಮಾತನಾಡುತ್ತವೆ. ಬದಲಾಗುವ ಆದರ್ಶ, ಪರಿಸ್ಥಿತಿ ಸೃಷ್ಟಿಸುವ ವೈರುಧ್ಯಗಳನ್ನು ‘ಅಕ್ಷರ ಹಾದರ’ ಹೇಳಿದೆ.

ಹೀಗೆ ಕಥೆಗಳಲ್ಲಿ ಅನುಭವ, ಅನುಭಾವಗಳು ಜೊತೆಯಾಗಿವೆ. ಹಳ್ಳಿಗಳಷ್ಟೇ ಅಲ್ಲ. ಪಟ್ಟಣದ ಸ್ಪರ್ಶವೂ ಹಲವು ಕಥೆಗಳಲ್ಲಿ ಇದೆ. ಸಣ್ಣ ಕಥೆಗಳ ಆಸಕ್ತರು ಓದಬಹುದಾದ ಒಳ್ಳೆಯ ಕ್ಯಾಪ್ಸೂಲ್‌ಗಳು ಈ ಹೊತ್ತಗೆಯಲ್ಲಿವೆ.

ಕೃತಿ: ಅರಳದ ಅಲರು (ಸಣ್ಣ ಕಥೆಗಳು)

ಲೇ: ವಿಜಯಲಕ್ಷ್ಮೀ ಕೊಟಗಿ

ಪ್ರ: ಸ್ನೇಹಸ್ಪರ್ಶ ಪ್ರಕಾಶನ

ಪುಟಗಳು: 134

ಬೆಲೆ: 140

ಸಂಪರ್ಕ: 9632240787

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು