ಸೋಮವಾರ, ಅಕ್ಟೋಬರ್ 21, 2019
24 °C

ಕೋಟೆಯ ಕಾಮಿಡಿ ಕಗ್ಗ

Published:
Updated:

ಹಾಸ್ಯ ಒಂದು ಕಲೆ. ಹಾಸ್ಯಕ್ಕೆ ಸೋಲದವರಿಲ್ಲ, ತಲೆ ಬಾಗದವರಿಲ್ಲ, ನಕ್ಕು ಹೊಟ್ಟೆ ಹುಣ್ಣು ಮಾಡಿಕೊಳ್ಳದವರಿಲ್ಲ. ಕನ್ನಡ ಹಾಸ್ಯಲೋಕದಲ್ಲಿ ಛಾಪು ಮೂಡಿಸಿದ ಪ್ರಮುಖರಲ್ಲಿ ನಾಗರಾಜು ಕೋಟೆ ಕೂಡ ಒಬ್ಬರು. ಹಾಸ್ಯ ಕಲಾವಿದರಾಗಿ ‘ಬಾನಾಡಿ’ ಚಿತ್ರ ನಿರ್ದೇಶಿಸಿ ರಾಜ್ಯ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದ್ದಾರೆ. ತಮ್ಮ ವಿನೋದ ಬರಹಗಳ ಸಂಗ್ರಹ ಒಟ್ಟುಗೂಡಿಸಿ ‘ಕಾಮಿಡಿ ಕಗ್ಗ’ ಪುಸ್ತಕ ಹೊರತಂದಿದ್ದಾರೆ.

ಅವರ ಹಾಸ್ಯಗಳು ಚುಟುಕು ಕವಿತೆಗಳಾಗಿ ಮೂಡಿಬಂದಿವೆ. ನಾಡು–ನುಡಿ, ಬದುಕು ಬವಣೆ, ಸಮಾಜ–ರಾಜಕೀಯ ವಿಚಾರಗಳ ಬಗೆಗೆ ಹುಟ್ಟಿಕೊಂಡ ಸಾಲುಗಳು ವಿನೋದವಾಗಿದ್ದರೂ ಅವು ವಾಸ್ತವಕ್ಕೆ ಬಿಚ್ಚಿಕೊಂಡಂತಿವೆ. ಪ್ರತಿ ಅಧ್ಯಾಯದ ಆರಂಭದಲ್ಲಿಯೇ ಚಿತ್ರಗಳು ಗಮನ ಸೆಳೆಯುತ್ತವೆ. ಈ ಪುಸ್ತಕದ ಮತ್ತೊಂದು ವಿಶೇಷವೆಂದರೆ ಪ್ರತಿ ಚುಟುಕಿನ ಕೊನೆಯಲ್ಲಿನ ಸಂಭಾಷಣೆಯನ್ನು ಹಾಸ್ಯಕ್ಕೆ ಎಲ್ಲಿಯೂ ಚ್ಯುತಿತಾರದಂತೆ ಸೊಗಸಾಗಿ ಹೆಣೆದಿದ್ದಾರೆ. ಪುಸ್ತಕ ಓದಿದಾಗ ನಗದೆ ಇರಲಾರರಿ.

ಪು: ಕಾಮಿಡಿ ಕಗ್ಗ

ಕ: ನಾಗರಾಜ ಕೋಟೆ

ಪ್ರ:ಸ್ನೇಹ ಬುಕ್‌ ಹೌಸ್‌

ಬೆ:₹160

ಪು:196

ಮೊ: 98450 31335

Post Comments (+)