ಭಾನುವಾರ, ಮಾರ್ಚ್ 29, 2020
19 °C

ಪಕ್ಕಿಹಳ್ಳದ ಹಾದಿಗುಂಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪ್ರಕೃತಿಯಲ್ಲಿ ಮಿತಿಯಿಲ್ಲದ ದಾಹಕ್ಕೆ ಬಲಿಯಾದವ ಮನುಷ್ಯ. ನೆಲ, ಜಲ, ಜೀವಜಗತ್ತಿನ ಸಂಬಂಧಗಳು ಬುದ್ಧಿವಂತ ಮನುಷ್ಯನ ಆಸೆಗಳಿಂದ ವಿಕಾರವಾಗುವ ಪರಿ, ಕೊನೆಗೆ ತನ್ನದೇ ವಿಕೃತಿಗಳಿಂದ ಇಡೀ ಜೀವಜಾಲವನ್ನೇ ಬಲಿಗೊಡುವ ಅನೇಕ ಸಂಕಟಗಳ ಹೂರಣವೇ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿ.

ಹಲವು ತಲೆಮಾರುಗಳ ಕತೆಯಂತಿರುವ ಈ ಕಾದಂಬರಿ ಬಾಲ್ಯದಿಂದ ಹಿಡಿದು ಮುಪ್ಪಿನವರೆಗಿನ ಬದುಕಿನ ಹಾದಿ, ಏರಿಳಿತಗಳನ್ನು ಸ್ತ್ರೀ ಸಂವೇದನೆಯ ಹಿನ್ನೆಲೆಯಲ್ಲಿ ಕಟ್ಟಿಕೊಡುತ್ತದೆ. ಇಲ್ಲಿನ ‘ಮುಕ್ತಾತಾಯಿ’, ‘ಹರಿಣಾಕ್ಷಿ’, ‘ಅಣ್ಣಯ್ಯ ಬಲ್ಲಾಳ’ರಂತಹ ಅದೆಷ್ಟೋ ಪಾತ್ರಗಳು ನಮ್ಮೊಳಗನ್ನೂ ಆವರಿಸಿದ್ದರೆ ಅಚ್ಚರಿಯಿಲ್ಲ.

ಎಲ್ಲರೂ ಹಾಯ್ದಿರಬಹುದಾದ ಅಥವಾ ಹಾಯುತ್ತಿರುವ ಅನೇಕ ಪಕ್ಕಿಹಳ್ಳಗಳು ಇಲ್ಲಿ ಬಿತ್ತರಗೊಂಡಿವೆ. ಕಾಸರಗೋಡು, ಸುತ್ತಲಿನ‌ ಗ್ರಾಮ್ಯ ಭಾಷೆ ಓದಿನ ಸುಖ ಹೆಚ್ಚಿಸುತ್ತದೆ.

ಪಕ್ಕಿಹಳ್ಳದ ಹಾದಿಗುಂಟ

ಲೇ: ಅನುಪಮಾ ಪ್ರಸಾದ್

ಪ್ರ: ಪಲ್ಲವ ಪ್ರಕಾಶನ ಚನ್ನಪಟ್ಟಣ

ಮೊ: 94803 53507

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)