ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ಭಾರತೀಯ ಸಂಸ್ಕೃತಿಯ ಅವಲೋಕನ

Last Updated 16 ಜನವರಿ 2021, 19:31 IST
ಅಕ್ಷರ ಗಾತ್ರ

ಭಾರತೀಯ ಸಂಸ್ಕೃತಿ ಮತ್ತು ಪರಂಪರೆ
ಲೇ:
ಕೆ.ಎಸ್‌. ನಾಗಪತಿ ಹೆಗಡೆ
ಪ್ರ: ಶಾಂತಲಾ ಪ್ರಕಾಶನ
ದೂ: 0821 2513958

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಸುಲಭವಾಗಿ ಪರಿಚಯಿಸುವ ಕೃತಿ ಇದಾಗಿದೆ. ಭಾರತದ ನೆಲದಲ್ಲಿ ನಾಗರಿಕತೆಯ ವಿಕಾಸವಾದದ ಹಾದಿಯನ್ನು ತೆರೆದಿಡುತ್ತಲೇ ದೇಶದ ಇಂದಿನ ಸಂದರ್ಭವನ್ನೂ ಚರ್ಚಿಸಲಾಗಿದೆ. ಕೃತಿಯಲ್ಲಿ ಒಟ್ಟಾರೆ 14 ಅಧ್ಯಾಯಗಳಿದ್ದು, ವೇದಗಳು, ಉಪನಿಷತ್ತುಗಳು, ಬ್ರಹ್ಮಸೂತ್ರಗಳು, ರಾಮಾಯಣ–ಮಹಾಭಾರತ ಮಹಾಕಾವ್ಯಗಳ ಪರಿಚಯವನ್ನೂ ಸರಳವಾಗಿ ಮಾಡಿಕೊಡಲಾಗಿದೆ. ಭಗವದ್ಗೀತೆಯ ಕುರಿತು ಚರ್ಚಿಸಲಾಗಿದೆ. ಭಾರತೀಯ ಕಲೆ, ವಾಸ್ತುಶಿಲ್ಪ, ಚಿತ್ರಕಲೆ, ಸಂಗೀತ, ಯೋಗ ಪರಂಪರೆಯ ವಿಷಯವಾಗಿ ತುಂಬಾ ಸುದೀರ್ಘವಾಗಿ ವಿವರಿಸಲಾಗಿದೆ. ಹಬ್ಬಗಳ ಮಾಹಿತಿಯನ್ನೂ ಒದಗಿಸಲಾಗಿದೆ.

ಭಾರತೀಯ ಸಂಸ್ಕೃತಿಯಲ್ಲಿ ಮತ್ತೆ ಮತ್ತೆ ಉಲ್ಲೇಖವಾಗುವ ವಿಷಯಗಳ ಕುರಿತು ಟಿಪ್ಪಣಿಗಳನ್ನು ಒಳಗೊಂಡಿರುವ ಈ ಕೃತಿಯು ಇಂದಿನ ಪೀಳಿಗೆಗೆ ನಮ್ಮ ಪರಂಪರೆಯನ್ನು ಪರಿಚಯಿಸಲು ಸಿಕ್ಕ ಸೂಕ್ತ ಸಾಧನ ಎಂದು ಕೃತಿಗೆ ಮುನ್ನುಡಿ ಬರೆದಿರುವ ಉಮಾಕಾಂತ ಭಟ್ಟ ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT